ಗುರುಪುರ: ಕುಪ್ಪೆಪದವಿನ ಶ್ರೀ ದುರ್ಗೇಶ್ವರಿ ದೇವಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದಂದು ‘ಕುಪ್ಪೆಪದವು ಉತ್ಸಾಹಿ ಕಲಾವಿದರು’ ಅಭಿನಯಿಸಲಿರುವ ದಿನಕರ ಭಂಡಾರಿ ಕಣಂಜಾರು ವಿರಚಿತ ‘ದಾಯೆ ಇಂಚ ಮಲ್ತ’ ತುಳು ನಾಟಕದ ಮಹೂರ್ತ ದುರ್ಗೇಶ್ವರಿ ದೇವಸ್ಥಾನದಲ್ಲಿ ಅರ್ಚಕ ಗುರುಪ್ರಸಾದ್ ಕಾರಂತರಿಂದ ಮಂಗಳವಾರ ನಡೆಯಿತು.
ಉತ್ಸಾಹಿ ಕಲಾ ತಂಡದ ಸ್ಥಾಪಕಾಧ್ಯಕ್ಷ ವಿಜಯ ಸುವರ್ಣ ಬಳ್ಳಾಜೆ, ರಂಗಭೂಮಿ ಕಲಾವಿದ ರವಿ ಅಟ್ಟೆಪದವು, ಹರೀಶ್ ಸುವರ್ಣ ಅಂಬೆಲೊಟ್ಟು, ಸಂತೋಷ್ ಬೊಳಿಯ, ಚಂದ್ರಶೇಖರ ದೇವಾಡಿಗ, ಈಶ್ವರ ಅಟ್ಟೆಪದವು, ತಂಡದ ಕಲಾವಿದರಾದ ಗಣೇಶ್ ಪಾಕಜೆ, ಚಿನಾನಂದ ಕುಪ್ಪೆಪದವು, ಅಶೋಕ್ ಕೆ., ಮತ್ತಿತರರು ಇದ್ದರು.
ಕರ್ನಾಟಕ ಕ್ರೀಡಾಕೂಟದ ಮೊದಲ ದಿನ ವೇಟ್‌ಲಿಫ್ಟಿಂಗ್ ನಲ್ಲಿ ದ.ಕನ್ನಡ ಜಿಲ್ಲೆಗೆ 2 ಚಿನ್ನದ ಪದಕ
ತಾಳಮದ್ದಳೆಯಿಂದ ಸುಸಂಸ್ಕೃತ ಸಮಾಜ : ಧರ್ಮದರ್ಶಿ ಹರಿಕಷ್ಣ ಪುನರೂರು ವಿಶ್ವಾಸ