ಜಂಟಿ ಸರ್ವೇಗೆ ಮುಹೂರ್ತ ಫಿಕ್ಸ್​

blank

ಕಿರುವಾರ ಎಸ್​.ಸುದರ್ಶನ್​ ಕೋಲಾರ
ಮಾಜಿ ಸಚಿವ, ಕಾಂಗ್ರೆಸ್​ ಪಕ್ಷದ ಹಿರಿಯ ನಾಯಕರಲ್ಲೊಬ್ಬರಾದ ಕೆ.ಆರ್​.ರಮೇಶ್​ಕುಮಾರ್​ ಅವರು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪವಿರುವ ಜಿಂಗಾಲಕುಂಟೆ ಅರಣ್ಯಭೂಮಿಯ ಜಂಟಿ ಸರ್ವೇಗೆ ಕೊನೆಗೂ ಮುಹೂರ್ತ ಫಿಕ್ಸ್​ ಆಗಿದೆ. ಈ ಅರಣ್ಯ ಜಾಗವನ್ನು ನ.6ರ ಬೆಳಗ್ಗೆ 11ಗಂಟೆಯಿಂದ ಸರ್ವೇ ನಡೆಸುವಂತೆ ನೀಡಿರುವ ತಿಳಿವಳಿಕೆ ಪತ್ರದ ಪ್ರತಿ “ವಿಜಯವಾಣಿ’ಗೆ ಲಭ್ಯವಾಗಿದೆ.
ಜಿಲ್ಲೆಯ ಶ್ರೀನಿವಾಸಪುರ ವಲಯ ಅರಣ್ಯ ವಿಭಾಗದ ಜಿಂಗಾಲಕುಂಟೆ ಅರಣ್ಯ ವ್ಯಾಪ್ತಿಯ ಸರ್ವೇ ನಂ.1 ಮತ್ತು 2ರ ಪೈಕಿ 61 ಎಕರೆ 39 ಗುಂಟೆ ಒತ್ತುವರಿ ವಿಚಾರವು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು. ಒತ್ತುವರಿಯಲ್ಲಿ ಮಾಜಿ ಸ್ಪೀಕರ್​ ರಮೇಶ್​ಕುಮಾರ್​ ಹೆಸರು ತಳುಕು ಹಾಕಿಕೊಂಡಿದ್ದು ರಾಜ್ಯಾದ್ಯಂತ ಸದ್ದು ಮಾಡಿತ್ತು. ಈ ಬಗ್ಗೆ ದೆಹಲಿಯಿಂದ ರಾಜ್ಯ, ಜಿಲ್ಲೆಯ ತನಕ ಪತ್ರಗಳ ರವಾನೆಯಾಗಿದ್ದವು. ಅದರಂತೆ ಸಮಯ ನಿಗದಿಪಡಿಸಿ ಅಪರ ಜಿಲ್ಲಾಧಿಕಾರಿ ಹಾಗೂ ಪದನಿಮಿತ್ತ ಭೂ ದಾಖಲೆಗಳ ಉಪನಿರ್ದೇಶಕರು ಈಗ ಆದೇಶಿಸಿದ್ದಾರೆ.
2023ರ ಆಗಸ್ಟ್​ನಲ್ಲಿ ಜಿಲ್ಲಾ ಉಪ ಸಂರಕ್ಷಣಾಧಿಕಾರಿ ಏಡುಕೊಂಡಲು ನೇತೃತ್ವದಲ್ಲಿ ಅರಣ್ಯ ಒತ್ತುವರಿ ತೆರವು ಕಾರ್ಯಚರಣೆ ಪ್ರಾರಂಭವಾಯಿತು. ಒಂದೇ ದಿನ ರಾತ್ರೋರಾತ್ರಿ ಸಾವಿರಾರು ಎಕರೆ ಒತ್ತುವರಿ ತೆರವುಗೊಳಿಸಿ ಗಡಿ ಗುರುತಿಸಿ, ಸಸಿಗಳನ್ನು ನೆಡುವ ಕೆಲಸ ಪ್ರಗತಿಯಲ್ಲಿದೆ. ತೆರವು ಕಾರ್ಯದಿಂದ ಸಣ್ಣ ರೈತರು, ಮಧ್ಯಮ ವರ್ಗದ ರೈತರು ಭೂಮಿ ಕಳೆದುಕೊಂಡು ಬೀದಿಪಾಲಾದರು. ಈ ಕಾರ್ಯಾಚರಣೆಯಲ್ಲಿ ಹಲವು ರಾಜಕೀಯ ನಾಯಕರ ಜಮೀನುಗಳು ಅರಣ್ಯ ಇಲಾಖೆಯ ಸುಪರ್ದಿಗೆ ಬಂದವು.
ಅದೇ ಸಂದರ್ಭದಲ್ಲಿ ಅಡ್ಡಗಲ್​, ಹೊಸಹುಡ್ಯ ಭಾಗದಲ್ಲಿ ಅರಣ್ಯ ಒತ್ತುವರಿ ತೆರವು ಕಾರ್ಯಚರಣೆ ನಡೆಯಲಿಲ್ಲ, ಅಧಿಕಾರಿಗಳ ಈ ವರ್ತನೆಯು ಹಲವು ಅನುಮಾನಗಳಿಗೆ ಕಾರಣವಾಯಿತು. ಆಗ ರಮೇಶ್​ಕುಮಾರ್​ ಅವರ ವಿರುದ್ಧ ಅರಣ್ಯ ಒತ್ತುವರಿ ಆರೋಪ ಮುನ್ನೆಲೆಗೆ ಬಂದಿತು. ಆ ಜಾಗವನ್ನು ಏಕೆ ತೆರವುಗೊಳಿಸುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶವೂ ವ್ಯಕ್ತವಾಗಿತ್ತು. ಜತೆಗೆ ಅಡ್ಡಗಲ್​ ಭಾಗದಲ್ಲೂ ಒತ್ತುವರಿ ತೆರವು ಮಾಡಬೇಕು ಎಂದು ವಿವಿಧ ಸಂ&ಸಂಸ್ಥೆಗಳು, ರೈತರು ಸರ್ಕಾರ, ಜಿಲ್ಲಾಡಳಿತ ಹಾಗೂ ಡಿಸಿಎ್​ ಅವರನ್ನು ಒತ್ತಾಯಿಸಿದ್ದರು.
ಸರ್ಕಾರದ ಮಟ್ಟದಲ್ಲಿ ರಮೇಶ್​ಕುಮಾರ್​ ಅವರು ಪ್ರಭಾವಿಯಾಗಿದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳು ಒತ್ತಡಕ್ಕೆ ಮಣಿದು ತೆರವು ಮಾಡದೆ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಕೆಲ ಸ್ಥಳಿಯರು ಕೇಂದ್ರ ಸರ್ಕಾರದ ಅರಣ್ಯ ಇಲಾಖೆಯ ಮೊರೆ ಹೋಗಿದ್ದರು. ಈ ಸಂಬಂಧ ಇದೀಗ ಜಂಟಿ ಸರ್ವೇ ಮಾಡಿ ಒತ್ತುವರಿ ಖಚಿತವಾದರೆ ತೆರವು ಮಾಡಲೇಬೇಕಾದ ಅನಿವಾರ್ಯ ಎದುರಾಗಿದೆ.

ದೆಹಲಿಯಿಂದ ಜಿಲ್ಲೆ ತನಕ ಪತ್ರ ವ್ಯವಹಾರ
ಕೇಂದ್ರ ಅಸಿಸ್ಟೆಂಟ್​ ಇನ್​ಸ್ಪೆಕ್ಟರ್​ ಜನರಲ್​ ​ ಪರಿಸರ ಅರಣ್ಯ ಮತ್ತು ಹವಮಾನ ಬದಲಾವಣೆ ಸಚಿವರ ಕಚೇರಿ ಅಧಿಕಾರಿಗಳು, ರಾಜ್ಯ ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಪುನ@ ಇಲ್ಲಿಂದ ಪ್ರಧಾನ ಮುಖ್ಯ ಅರಣ್ಯ ಸಂಕ್ಷಣಾಧಿಕಾರಿ, ಬೆಂಗಳೂರು ವೃತ್ತ ಪ್ರಾದೇಶಿಕ ರಾಜ್ಯ ಸಂರಕ್ಷಣಾ ಇಲಾಖೆ ಕಚೇರಿಗೆ ಪತ್ರ ರವಾನಿಸಿ, ಕೂಡಲೇ ಹೈಕೋರ್ಟ್​ ಆದೇಶ ಪಾಲನೆ ಮಾಡಿ ಕಾರ್ಯಪ್ರವೃತ್ತರಾಗಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.

ಸರ್ವೇ ವೇಳೆ ಹಾಜರಿರುವಂತೆ ಮಾಜಿ ಸಚಿವರಿಗೂ ಮಾಹಿತಿ
ಪತ್ರದ ಅನ್ವಯ ರಾಜ್ಯ ಅಧಿಕಾರಿಗಳು, ಜಿಲ್ಲಾ ಉಪ ಸಂರಕ್ಷಣಾಧಿಕಾರಿಗಳಿಗೆ (ಡಿಸಿಎಫ್​) ಪತ್ರ ಬರೆದು ಜಂಟಿ ಸರ್ವೇ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅಪರ ಜಿಲ್ಲಾಧಿಕಾರಿಗಳು, ಭೂ ದಾಖಲೆಗಳ ಇಲಾಖೆಯ ಉಪ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ. ಅದರಂತೆ ನ.6ರಂದು ಜಂಟಿ ಸರ್ವೇ ಕಾರ್ಯ ನಿಗದಿಪಡಿಸಿ ಸಂಬಂಧಿಸಿದ ಅಧಿಕಾರಿಗಳು ಹಾಜರಿರುವಂತೆ ಕೋರಿದ್ದಾರೆ. ಸರ್ವೇ ಸಂದರ್ಭದಲ್ಲಿ ಹಾಜರಿರುವಂತೆ ಕೆ.ಆರ್​.ರಮೇಶ್​ ಕುಮಾರ್​ ಅವರಿಗೂ ಸೂಚಿಸಿದ್ದಾರೆ.

ಕೋಟ್​…
ಎಲ್ಲರಿಗೂ ಒಂದೇ ನ್ಯಾಯ ದೊರಕಿಸಬೇಕು ಎಂಬ ಉದ್ದೇಶ ಇತ್ತು, ಜಿಂಗಾಲಕುಂಟೆಕುಂಟೆ ಅರಣ್ಯ ಒತ್ತುವರಿ ತೆರವು ಪ್ರಕರಣ ಸಂಬಂಧ ನ್ಯಾಯಾಲಯದ ಆದೇಶವಿದ್ದು, ಕಡ್ಡಾಯವಾಗಿ ಪಾಲನೆ ಮಾಡುತ್ತೇವೆ. ಸರ್ವೇಯಲ್ಲಿ ಅರಣ್ಯ ಜಾಗವೆಂದು ಖಚಿತವಾದರೆ ಒತ್ತುವರಿ ತೆರವಿಗೆ ಕ್ರಮವಹಿಸಲಾಗುವುದು.
ಏಡುಕೊಂಡಲು, ಡಿಸಿಎಫ್ , ಕೋಲಾರ

ಕೋಟ್​…
ಏಕಾಏಕಿಯಾಗಿ ನಮ್ಮ ಜಮೀನುಗಳನ್ನು ಅರಣ್ಯ ಇಲಾಖೆಯವರು ಸ್ವಾಧಿನಪಡಿಸಿಕೊಂಡರು, ನಿಯಮಗಳಂತೆ ಜಮೀನು ಮಂಜೂರು ಮಾಡಿರುವ ಕಂದಾಯ ಇಲಾಖಾಧಿಕಾರಿಗಳು ಯಾರೂ ನಮ್ಮ ನೆರವಿಗೆ ಬರಲಿಲ್ಲ.
ಜಮೀನು ಕಳೆದುಕೊಂಡಿರುವ ರೈತ, ಶ್ರೀನಿವಾಸಪುರ

ಕೊಟ್ಟ ಮಾತಿನಂತೆ ಅಭಿವೃದ್ಧಿ ಕಾರ್ಯಕ್ರಮಗಳ ಜಾರಿ

Share This Article

ಮಂಗಳನ ಸಂಚಾರದಿಂದ ರೂಪುಗೊಳ್ಳಲಿದೆ ಮಂಗಳ-ಪುಷ್ಯ ಯೋಗ! ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ | Zodiac Signs

Zodiac Signs : ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳ ಸ್ಥಾನಗಳು ಹಾಗೂ ಗ್ರಹಗಳ ಸಂಚಾರವೂ ವ್ಯಕ್ತಿಯು ಜನಿಸಿದ…

ನಿಮ್ಮನೆ ಮುದ್ದಿನ ನಾಯಿ ನಿಮ್ಮ ಮುಖವನ್ನು ನೆಕ್ಕುತ್ತದೆಯೇ? ಇರಲಿ ಎಚ್ಚರ.. Dog Licking Human Face

Dog Licking Human Face: ಆಧುನಿಕ ಜೀವನದಲ್ಲಿ ಹೆಚ್ಚಿನ ಜನರು ತಮ್ಮ ಮನೆಯಲ್ಲಿ ನಾಯಿಮರಿಗಳನ್ನು ಮನೆ…

ತಾಮ್ರದ ಉಂಗುರ ಧರಿಸುವುದು ಒಳ್ಳೆಯದಾ? ಕೆಟ್ಟದ್ದಾ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ… Copper Ring

Copper Ring : ಅನೇಕ ಜನರು ಬೆರಳುಗಳಿಗೆ ಉಂಗುರಗಳನ್ನು ಧರಿಸುತ್ತಾರೆ. ಕೆಲವರಿಗೆ ಇದು ಫ್ಯಾಶನ್​ ಆಗಿದ್ದಾರೆ,…