More

    ಹಿಂದು- ಮುಸ್ಲಿಂ ಭಾವೈಕ್ಯ ಸಾರುವ ಮೊಹರಂ

    ಹಳಿಯಾಳ: ತ್ಯಾಗ, ಬಲಿದಾನದ ಸಂಕೇತ ಹಾಗೂ ಹಿಂದá– ಮುಸ್ಲಿಂ ಭಾವೈಕ್ಯ ಸಾರುವ ಮೊಹರಂ ಹಬ್ಬವನ್ನು ಹಳಿಯಾಳ ತಾಲೂಕಿನಲ್ಲಿ ಎಲ್ಲ ಸಮಾಜದದರು ಮಳೆಯ ನಡುವೆಯೂ ಶ್ರದ್ಧಾ ಭಕ್ತಿಯಿಂದ ಸೋಮವಾರ ಆಚರಿಸಿದರು. ಪಟ್ಟಣದಲ್ಲಿ ಸುಮಾರು ಎಂಟು ಮಕಾನಗಳಿಂದ 30ಕ್ಕೂ ಹೆಚ್ಚು ಮೊಹರಂ ಪಾಂಜಾಗಳನ್ನು ಭಕ್ತರು ಹಿಡಿದು ಮೆರವಣಿಗೆ ಮೂಲಕ ಸಾಗಿದರು. ಪ್ರತಿಯೊಂದು ಮಕಾನಿನ ಮುಂದೆ ಅಗ್ನಿಕುಂಡವನ್ನು ಮಾಡಿ ಅದರಲ್ಲಿ ಆ ಭಾಗದ ಪಂಜಾಗಳನ್ನು ಹೊತ್ತವರು ಹಾಗೂ ಅವರ ಜತೆ ಭಕ್ತರು ಅಗ್ನಿಯಲ್ಲಿ ನಡೆದರು. ಇದರಿಂದ ಅವರ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆ ಭಕ್ತರದ್ದು. ಹಳಿಯಾಳ ನಗರ ಮೊಹರಂ ಚಾರಿಟಬಲ್ ಟ್ರಸ್ಟ್ ಕಮಿಟಿ ಅಧ್ಯಕ್ಷ ನಿಸಾರ ಅಹ್ಮದ್ ದುರ್ಗಾಡಿ, ನಸರುಲ್ಲಾಖಾನ್ ಜೈಲರ್, ಮಂಜುನಾಥ ಚಲವಾದಿ, ಗೌಸ್ ದುರ್ಗಾಡಿ, ಶಿರಾಜ ಮುನವಳ್ಳಿ, ರಫೀಕ್ ಅಹ್ಮದ ಕೊಟೂರ, ಅಸ್ಲಂ ತಾಡಪತ್ರಿ, ಸವಣೂರ ಸತ್ತಾರ, ಜಹೀರ ಶೇಖ್ ಮತ್ತು ಕಮಿಟಿ ಸದಸ್ಯರು ಮೊಹರಂ ಪಾಂಜಾ ದೇವರ ಮೆರವಣಿಗೆಯ ಉಸ್ತುವಾರಿ ನೋಡಿಕೊಂಡರು. ಮೊಹರಂ ನಿಮಿತ್ತ ಪಟ್ಟಣದ ಎಲ್ಲ ಪಾಂಜಾ ದೇವರ ಭೇಟಿ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು. ಭಕ್ತರು ಪಾಂಜಾ ಭೇಟಿ ವೇಳೆ ಉತ್ತತ್ತಿ, ಹೂವು ತೂರಿ ತಮ್ಮ ಇಷ್ಟಾರ್ಥ ಸಿದ್ಧಿಸಲು ಕೋರಿದರು. ಬಳಿಕ ಪ್ರತಿ ಮಕಾನಿನ ಮುಂಭಾಗದಲ್ಲಿ ಬೆಂಕಿ ಕಿಚ್ಚಿನ ಮೇಲೆ ಪಾಂಜಾಗಳು ಹಾಗೂ ಭಕ್ತರು ದಾಟಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts