ಮುಗಳಖೋಡ: 7ರಿಂದ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ

ಮುಗಳಖೋಡ: ಪಟ್ಟಣದ ನಿರಲಖೋಡಿ ತೋಟದಲ್ಲಿ ನಿರ್ಮಿಸಲಾದ ನೂತನ ಜಿನಮಂದಿರದಲ್ಲಿ ಭಾನುವಾರದಿಂದ ಏ.11 ರವರೆಗೆ ಶ್ರೀ ಮದ್ದೇವಾಧಿದೇವ ಶ್ರೀ 1008 ಭ.ಮಹಾವೀರ ತೀರ್ಥಂಕರರ ಪಂಚಕಲ್ಯಾಣ ಪೂಜೆ ಮಹಾಮಹೋತ್ಸವ ನೆರವೇರಲಿದೆ. ಸಮಾರಂಭದಲ್ಲಿ ಪ್ರತಿನಿತ್ಯ ವಿವಿಧ ಪೂಜೆ ನೆರವೇರಲಿದ್ದು, ಶ್ರಾವಕ-ಶ್ರಾವಕಿಯರು ಪಾಲ್ಗೊಳ್ಳಲಿದ್ದಾರೆ ಎಂದು ಜಿಪಂ ಮಾಜಿ ಸದಸ್ಯ ಡಾ.ಸಿ.ಬಿ.ಕುಲಿಗೋಡ ತಿಳಿಸಿದ್ದಾರೆ.