ಧರಣಿ ತಾತ್ಕಾಲಿಕ ಹಿಂಪಡೆದ ಹೋರಾಟಗಾರರು

ಮುಧೋಳ:ಮೂಲಸೌಕರ್ಯಕ್ಕಾಗಿ ಒತ್ತಾಯಿಸಿ 19 ದಿನಗಳಿಂದ ಮುಧೋಳ ನಗರ ಹಿತರಕ್ಷಣಾ ಸಮಿತಿಯಿಂದ ನಡೆಸ ಲಾಗುತ್ತಿದ್ದ ಧರಣಿ ಸತ್ಯಾಗ್ರಹವನ್ನು ಸಕ್ಕರೆ ಸಚಿವ ಆರ್.ಬಿ. ತಿಮ್ಮಾಪುರ ಭರವಸೆ ಹಿನ್ನೆಲೆ ತಾತ್ಕಾಲಿಕವಾಗಿ ಹಿಂಪ ಡೆಯಲಾಗಿದೆ ಎಂದು ಸಮಿತಿ ಅಧ್ಯಕ್ಷ ಡಾ. ಸಂಜಯ ಘಾರಗೆ, ಕಾರ್ಯದರ್ಶಿ ಡಾ.ಮೋಹನ ಬಿರಾದಾರ ಹೇಳಿದರು.

ಸುಗಮ ಸಂಚಾರಕ್ಕಾಗಿ ರಸ್ತೆ ವಿಸ್ತರಣೆ, ಕುಡಿವ ನೀರು, ಬೈಪಾಸ್ ರಸ್ತೆ, ಒಳಚರಂಡಿ ಯೋಜನೆ ಸೇರಿ 8 ಬೇಡಿಕೆಗಳನ್ನು ಈಡೇರಿಸಲು ಸರ್ಕಾರದಿಂದ ಅನುದಾನ ಪಡೆದು ಕಾರ್ಯಾರಂಭ ಮಾಡಲು ಕಾಲಾವಕಾಶ ಬೇಕಾಗುತ್ತದೆ ಎಂಬ ಸಚಿವರ ಭರವಸೆ ಮೇರೆಗೆ ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ರಾಜ್ಯ ಹೆದ್ದಾರಿ ವಿಸ್ತರಣೆಗಾಗಿ ಈಗಾಗಲೇ ರಸ್ತೆಯ ಎರಡು ಬದಿಯ ಕಟ್ಟಡಗಳನ್ನು ತೆರವುಗೊಳಿಸಲಾಗುತ್ತಿದೆ¬. ಮುಗಳಖೋಡ ಹಾಗೂ ಕುಳಲಿ ಮಧ್ಯೆ 100 ಎಕರೆ ಜಮೀನಿನಲ್ಲಿ ಕೆರೆ ನಿರ್ವಿುಸಿ ಹಿಪ್ಪರಗಿ ಬ್ಯಾರೇಜ್ ಮೂಲಕ ನೀರು ಸಂಗ್ರಹ ಮಾಡಿ ನಗರಕ್ಕೆ ನೀರು ಪೂರೈಸಲು ಅಂದಾಜು 142 ಕೋಟಿ ಹಣಕ್ಕಾಗಿ ಮುಂದಿನ ಬಜೆಟ್​ನಲ್ಲಿ ಮಂಜೂರಾತಿ ಪಡೆಯಲಾಗುವುದು. ಕೆರೆ ಅತಿಕ್ರಮಣ ಮಾಡಿದ ಬಡ ಕುಟುಂಬಗಳ ಪುನರ್ವಸತಿಗಾಗಿ ಮಾಲಾಪುರ ಬಳಿ 16 ಎಕರೆ ಜಾಗ ಖರೀದಿಸಿ ಪುನರ್ವಸತಿ ಕಲ್ಪಿಸಲಾಗುವುದು. ಒಳಚರಂಡಿ ಯೋಜನೆ ಕಳಪೆಯಾಗಿರುವ ಬಗ್ಗೆ ಒಳಚರಂಡಿ ನಿಗಮದ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ ಹಾಗೂ ವ್ಯವಸ್ಥಾಪಕ ನಿರ್ದೇಶಕರನ್ನು ಮುಧೋಳ ನಿಯೋಗದೊಂದಿಗೆ ಭೇಟಿ ಮಾಡಿ ಸಮಗ್ರ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಇನ್ನುಳಿದ ಬೇಡಿಕೆಗಳ ಬಗ್ಗೆ ಎರಡು-ಮೂರು ತಿಂಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ತಿಮ್ಮಾಪುರ ಭರವಸೆ ನೀಡಿದ ಹಿನ್ನೆಲೆ ಎಲ್ಲರ ಒಪ್ಪಿಗೆ ಪಡೆದು ಧರಣಿ ಸತ್ಯಾಗ್ರಹ ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ ಎಂದು ತಿಳಿಸಿದರು.

ನ್ಯಾಯವಾದಿ ಪ್ರಕಾಶ ವಸ್ತ್ರದ ಮಾತನಾಡಿ, ರಸ್ತೆ ವಿಸ್ತರಣೆಗಾಗಿ ನಡೆಯುತ್ತಿರುವ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಯಾವುದೇ ಕೇಸ್ ಪಡೆಯುದಿಲ್ಲವೆಂದು ನ್ಯಾಯವಾದಿಗಳು ನಿರ್ಣಯ ಕೈಗೊಂಡಿದ್ದರಿಂದ ತೆರವು ಕಾರ್ಯಾಚರಣೆ ಸುಗಮವಾಗಿ ನಡೆದಿದೆ ಎಂದು ಹೇಳಿದರು. ಬಸವಂತ ಕಾಟೆ, ಡಾ. ಸತೀಶ ಮಲಘಾಣ, ಉಮೇಶ ಬಾಡಗಿ, ಶಿವು ಗುರುವ, ಸಚಿನ ನಾಯಕ, ಭೀಮ ಕುಮಕಾಲೆ ಇತರರಿದ್ದರು.