ಹಲಗಲಿ ಕೆರೆ ಅಭಿವೃದ್ಧಿಗೆ 6 ಲಕ್ಷ ರೂ. ಕೊಡುಗೆ

ಮುಧೋಳ: ಶ್ರೀ ಧರ್ಮಸ್ಥಳ ಮಂಜುನಾಥ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಹಲಗಲಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಹಲಗಲಿಯಲ್ಲಿ ನಡೆಯುತ್ತಿರುವ ಕೆರೆ ಅಭಿವೃದ್ಧಿ ಕಾರ್ಯವನ್ನು ಯೋಜನಾಧಿಕಾರಿ ಧನಂಜಯಕುಮಾರ ಹಾಗೂ ಕೆರೆ ಅಭಿವೃದ್ಧಿ ಸೇವಾ ಸಮಿತಿ ಕಾರ್ಯದರ್ಶಿ ವೀರಣಗೌಡ ಪಾಟೀಲ ಶುಕ್ರವಾರ ವೀಕ್ಷಿಸಿದರು.

ಬಳಿಕ ಮಾತನಾಡಿದ ಅವರು, ಧರ್ಮಸ್ಥಳ ಸಂಸ್ಥೆಯಿಂದ ಈಗಾಗಲೆ ಕೆರೆ ಅಭಿವೃದ್ಧಿ ಕಾಮಗಾರಿಗೆ 6 ಲಕ್ಷ ರೂ. ಅನುದಾನ ನೀಡಿದ್ದು, ಹೂಳೆತ್ತುವ ಹಾಗೂ ಇತರ ಅಭಿವೃದ್ಧಿ ಕಾರ್ಯ ಭರದಿಂದ ಸಾಗಿವೆ. ಕಾಮಗಾರಿ ಮುಗಿದ ನಂತರ ಸಸಿ ನೆಡುವುದು ಹಾಗೂ ವಾಕಿಂಗ್ ಟ್ರಾೃಕ್ ನಿರ್ಮಾಣ, ಆಸನದ ವ್ಯವಸ್ಥೆ ಮತ್ತು ಇತರ ಕೆಲಸವನ್ನು ಕೈಗೊಳ್ಳಲಾಗುವುದು. ಕೃಷ್ಣಾ ನದಿಯಿಂದ ಈ ಕೆರೆ ತುಂಬಿಸುವ ಆಲೋಚನೆ ಇದೆ. ಇದು ಯಶಸ್ವಿಯಾದರೆ ಗ್ರಾಮಕ್ಕೆ ಕೆರೆ ಬಹುಪಯೋಗಲಿದೆ ಎಂದರು.

ಗ್ರಾಪಂ ಅಧ್ಯಕ್ಷ ಸದಾಶಿವ ಯಡಹಳ್ಳಿ ಮಾತನಾಡಿ, ಕೆರೆಯ ಅಭಿವೃದ್ಧಿಗಾಗಿ 14 ಲಕ್ಷ ರೂ. ಅನುದಾನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು. ಗ್ರಾಪಂ ಸದಸ್ಯರು, ಸಮಿತಿ ಸದಸ್ಯರು ಹಾಗೂ ಧರ್ಮಸ್ಥಳ ಸಂಸ್ಥೆಯ ತೋಟಯ್ಯ ಬಳಗಾರನೂರಮಠ ಇದ್ದರು.

ಧರ್ಮಸ್ಥಳ ಸಂಸ್ಥೆ ಗ್ರಾಮೀಣ ಭಾರತದ ಕನಸು ನನಸು ಮಾಡುತ್ತಿದೆ. ಪ್ರತಿ ವರ್ಷ ನೂರಾರು ಕೆರೆಗಳ ಅಭಿವೃದ್ಧಿ ಮಾಡುತ್ತಿದ್ದು, ಈಗ ಹಲಗಲಿ ಕೆರೆಯ ಅಭಿವೃದ್ಧಿ ಕೈಗೊಳ್ಳಲಾಗಿದೆ. ಅನುದಾನ ಕೊರತೆಯಾದರೆ ಮಂಜೂರು ಮಾಡಲಾಗುವುದು.
– ಧನಂಜಯಕುಮಾರ ಧರ್ಮಸ್ಥಳ ಸಂಸ್ಥೆ ಯೋಜನಾಧಿಕಾರಿ

Leave a Reply

Your email address will not be published. Required fields are marked *