ಮೋದಿ ಆಡಳಿತದಿಂದ ಭ್ರಷ್ಟರಿಗೆ ನಡುಕ

ಮುಧೋಳ: ಕುಟುಂಬ ರಾಜಕಾರಣ, ಭ್ರಷ್ಟಾಚಾರದಲ್ಲಿ ನಿರತರಾಗಿರುವವರಿಗೆ ಪ್ರಧಾನಿ ನರೇಂದ್ರ ಮೋದಿ ಆಡಳಿತ ನಡುಕ ಹುಟ್ಟಿಸಿದೆ. ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾದರೆ ಭ್ರಷ್ಟರಿಗೆ ಉಳಿಗಾಲ ಇಲ್ಲ. ಹಾಗಾಗಿಯೇ ದುಷ್ಟಶಕ್ತಿಗಳು ಒಂದಾಗಿ ಮೋದಿಯವರನ್ನು ಸೋಲಿಸಲು ಸಂಚು ರೂಪಿಸಿವೆ ಎಂದು ವಕೀಲ, ಬಿಜೆಪಿ ಯುವ ಮುಖಂಡ ತೇಜಸ್ವಿ ಸೂರ್ಯ ಹೇಳಿದರು.

ತಾಲೂಕಿನ ಶಿರೋಳ ಗ್ರಾಮದ ಕಾಡಸಿದ್ಧೇಶ್ವರ ದೇವಾಲಯ ಆವರಣದಲ್ಲಿ ಈಚೆಗೆ ಆಯೋಜಿಸಿದ್ದ ಯೂತ್ ಾರ್ ಮೋದಿ ಯುವ ಸಮಾವೇಶದಲ್ಲಿ ಮಾತನಾಡಿದರು.

ಬೆಳಗಾವಿ ಜಿಲ್ಲೆ ಹಳ್ಳೂರ ಗ್ರಾಮದ ಮನೋನ್ಮಯಿ ಮಹಾಪೀಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಮಾತನಾಡಿ, ಈ ಚುನಾವಣೆ ಬಿಜೆಪಿ, ಮೋದಿ ಚುನಾವಣೆಯಲ್ಲ. ಭಾರತ ಮಾತೆಯ ಚುನಾವಣೆಯಾಗಿದೆ. ಭಾರತ ಮಾತೆಗೆ ಗೌರವ ನೀಡುವ ಪ್ರತಿಯೊಬ್ಬರೂ ಮೋದಿ ಪರ ಮತ ಚಲಾಯಿಸುವಂತಾಗಲಿದೆ. ದೇಶದ ಭದ್ರತೆ ಹಾಗೂ ದೇಶದ್ರೋಹಿಗಳು, ಉಗ್ರಗಾಮಿಗಳಿಗೆ ಮೋದಿ ಮಾತ್ರ ತಕ್ಕ ಉತ್ತರ ನೀಡಬಲ್ಲರು ಎಂದು ಹೇಳಿದರು.

ಶಾಸಕ ಗೋವಿಂದ ಕಾರಜೋಳ, ಜಿಪಂ ಸದಸ್ಯ ಭೀಮನಗೌಡ ಪಾಟೀಲ, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಕೆ.ಆರ್. ಮಾಚಪ್ಪನವರ, ಪ್ರಧಾನ ಕಾರ್ಯದರ್ಶಿ ಕುಮಾರ ಹುಲಕುಂದ, ನಗರ ಘಟಕದ ಅಧ್ಯಕ್ಷ ಗುರುರಾಜ ಕಟ್ಟಿ, ಯುವ ಮೋರ್ಚಾ ಅಧ್ಯಕ್ಷ ಪ್ರದೀಪ ನಿಂಬಾಳಕರ, ಒಬಿಸಿ ಜಿಲ್ಲಾ ಘಟಕದ ಅಧ್ಯಕ್ಷ ನಾಗಪ್ಪ ಅಂಬಿ, ಅಶೋಕ ಪಟ್ಟಣಶೆಟ್ಟಿ, ಡಾ.ಸಂಜಯ ಘಾರಗೆ, ವಕೀಲರಾದ ಶಿರೋಳ, ಪ್ರಕಾಶ ವಸ್ತ್ರದ, ವೆಂಕಣ್ಣ ನ್ಯಾಮಗೌಡ, ಸಿದ್ದು ಚಿಕದಾನಿ, ರಾಮಕೃಷ್ಣ ಬುದ್ನಿ ಇದ್ದರು. ಸಾಯಿ ಕರ್ಮಚಾರಿಗಳನ್ನು ಸನ್ಮಾನಿಸಲಾಯಿತು.

ಕಾಂಗ್ರೆಸ್ ಪಕ್ಷ ಗರೀಬಿ ಹಟಾವೋ ಎಂಬ ಘೋಷಣೆ ಮೊಳಗಿಸಿ ಬಡವರನ್ನು ಇನ್ನಷ್ಟು ಬಡವರನ್ನಾಗಿ ಮಾಡಿದೆ. ನೆಹರು, ಗಾಂಧಿ ಕುಟುಂಬದವರು ಜಾಮೀನಿನ ಮೇಲೆ ಹೊರಗೆ ಇರುವಂತೆ ಮಾಡಿದ್ದು, ಪ್ರಧಾನಿ ಮೋದಿ ಅವರ ತಾಕತ್ತು.
– ತೇಜಸ್ವಿ ಸೂರ್ಯ ಬಿಜೆಪಿ ಯುವ ಮುಖಂಡ