ಎಟಿಎಂಗಳೆಲ್ಲ ಖಾಲಿ ಖಾಲಿ

ಮುಧೋಳ: ನಗರದಲ್ಲಿರುವ 10ಕ್ಕೂ ಹೆಚ್ಚು ಎಟಿಎಂನಲ್ಲಿ ಹಣ ಇರದ ಕಾರಣ ಸಾರ್ವಜನಿಕರು ಪರದಾಡುವಂತಾಗಿದೆ.

ತುರ್ತು ಅವಶ್ಯಕತೆಗಾಗಿ ಹಣ ಪಡೆಯಲು ಒಂದು ಎಟಿಎಂ ತೆರಳಿ ಅಲ್ಲಿ ಹಣ ಇಲ್ಲ ಎಂದಾಗ ಮತ್ತೊಂದು ಎಟಿಎಂಗೆ ತೆರಳುತ್ತಿದ್ದಾರೆ. ಅಲ್ಲಿಯೂ ಹಣ ಇರದಿದ್ದಾಗ ಪೆಚ್ಚು ಮೋರೆ ಹಾಕಿಕೊಂಡು ಮನೆಯ ಕಡೆಗೆ ಹೋಗುವಂತಾಗಿದೆ.

ಎಚ್‌ಡಿಎಪ್‌ಸಿ, ಬ್ಯಾಂಕ್ ಆಫ್ ಇಂಡಿಯಾ, ಆಕ್ಸಿಸ್ ಸೇರಿದಂತೆ ಹಲವಾರು ಎಟಿಎಂಗಳಲ್ಲಿ ಹಣ ಇಲ್ಲ. ಈ ಕುರಿತು ಬ್ಯಾಂಕ್ ಅಧಿಕಾರಿಗಳನ್ನು ವಿಚಾರಿಸಿದಾಗ ಎರಡು ದಿನ ರಜೆ ಇರುವ ಕಾರಣ ಎಟಿಎಂಗೆ ಹಣ ಹಾಕಿಲ್ಲ ಕೂಡಲೇ ವ್ಯವಸ್ಥೆ ಮಾಡಲಾಗುವದು ಎಂದು ತಿಳಿಸಿದ್ದಾರೆ.

ಮನೆಯಲ್ಲಿ ಮದುವೆ ಇದ್ದು ಯಾವ ಬ್ಯಾಂಕ್‌ಗಳ ಎಟಿಎಂದಲ್ಲಿಯೂ ಹಣ ಇಲ್ಲ. ನಮಗೆ ಲಗ್ನ ಪತ್ರಿಕೆ ಇತರ ವಸ್ತುಗಳಿಗೆ ಹಣ ಬೇಕಾಗಿದ್ದು ಯಾವ ಎಟಿಎಂನಲ್ಲಿಯೂ ಹಣ ಇರದಿರುವುದು ತೊಂದರೆಯಾಗಿದೆ.
ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕ