ಗ್ರಾಮಗಳಿಗೆ ಶಾಶ್ವತ ಪುನರ್ವಸತಿ ಕಲ್ಪಿಸಿ

ಮುಧೋಳ: ಪ್ರಕೃತಿ ವಿಕೋಪದಿಂದ ಆಗುವ ಅನಾಹುತಕ್ಕೆ ಸರ್ಕಾರ ಕೂಡಲೇ ಸ್ಪಂದಿಸಬೇಕು. ಎಕರೆ ಕಬ್ಬಿಗೆ 50 ಸಾವಿರ ರೂ. ಪರಿಹಾರ ನೀಡಬೇಕು. ಮೇಲಿಂದ ಮೇಲೆ ನೆರೆ ಹಾವಳಿಗೆ ತುತ್ತಾಗುವ ನದಿ ತೀರದ ಗ್ರಾಮಗಳನ್ನು ಯುಕೆಪಿ ಮಾದರಿಯಲ್ಲಿ ಪರಿಹಾರ ನೀಡಿ ಪುನರ್ವಸತಿ ಕಲ್ಪಿಸಬೇಕು ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಆಗ್ರಹಿಸಿದರು.

ರೆಡ್ಡಿ ಗುರುಪೀಠದ ಜಗದ್ಗುರು ಎರೆಹೊಸಳ್ಳಿಯ ವೇಮನಾನಂದ ಶ್ರೀಗಳ ಜತೆಗೆ ಶನಿವಾರ ಮಳಲಿ ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿ ಮಾತನಾಡಿದರು.

ಸತೀಶ ಬಂಡಿವಡ್ಡರ ಮಾತನಾಡಿದರು. ನಿರಾಶ್ರಿತರಿಗೆ ತಂದಿದ್ದ ಹಾಸಿಗೆ, ಹೊದಿಕೆ ಹಾಗೂ ಜಾನುವಾರುಗಳಿಗೆ ಮೇವು ವಿತರಿಸಲಾಯಿತು. ಶೇಖರ ರಡ್ಡಿ, ಗೋವಿಂದಪ್ಪ ಗುಜ್ಜನ್ನವರ, ನಂದಕುಮಾರ ಪಾಟೀಲ, ಉದಯ ಸಾರವಾಡ, ಕಲ್ಮೇಶ ಸಾರವಾಡ, ದಯಾನಂದ ಪಾಟೀಲ, ಶಿವು ನ್ಯಾಮಗೌಡ, ರಂಗು ಇಟಕನ್ನವರ, ವಿಠ್ಠಲ ಹಾವಡಿ, ನಾರಾಯಣ ಹವಾಲ್ದಾರ ಇತರರಿದ್ದರು.

 

Leave a Reply

Your email address will not be published. Required fields are marked *