ಕರ್ತವ್ಯನಿರತ ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಶಾಸಕರ ಪುತ್ರ

ಬಾಗಲಕೋಟೆ: ಕರ್ತವ್ಯ ನಿರತ ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇಲೆ ಮುಧೋಳ ಶಾಸಕ ಗೋವಿಂದ ಕಾರಜೋಳ ಪುತ್ರನ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿದೆ.

ಗೋವಿಂದ ಕಾರಜೋಳ ಪುತ್ರ ಅರುಣ್​ ಕಾರಜೋಳ ಮುಧೋಳದಲ್ಲಿ ಟ್ರಾಫಿಕ್​ ನಿಯಮ ಉಲ್ಲಂಘಿಸಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಪ್ರಶ್ನೆ ಮಾಡಿದ ಟ್ರಾಫಿಕ್​ ಪೇದೆ ಮಲ್ಲೇಶ ಲಮಾಣಿ ಅವರಿಗೆ ಅರುಣ್​ ಆವಾಜ್​ ಹಾಕಿದ್ದಾರೆ. ಆ ನಂತರ ದೂರವಾಣಿ ಕರೆ ಮಾಡಿ ಮಲ್ಲೇಶ್​ ಅವರನ್ನು ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಆರೋಪಿ ಅರುಣ್​ ಕಾರಜೋಳ ಅವರನ್ನು ಮುಧೋಳ ಪೊಲೀಸರು ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.