ಮಾಚಕನೂರಿನಲ್ಲಿ ಮೊಸಳೆ ಸೆರೆ

ಮುಧೋಳ: ತಾಲೂಕಿನ ಮಾಚಕನೂರ ಹೊರವಲಯದ ಘಟಪ್ರಭಾ ನದಿ ದಂಡೆಯಲ್ಲಿ 6 ಅಡಿ ಉದ್ದದ ಬೃಹತ್ ಮೊಸಳೆಯನ್ನು ಗ್ರಾಮಸ್ಥರು ಸೆರೆ ಹಿಡಿದು ಅರಣ್ಯ ಇಲಾಖೆ ವಶಕ್ಕೆ ನೀಡಿದರು.

ಗ್ರಾಮದಿಂದ ಒಂದೂವರೆ ಕಿ.ಮೀ. ದೂರದಲ್ಲಿರುವ ಘಟಪ್ರಭಾ ನದಿ ಬತ್ತಿದ ಹಿನ್ನೆಲೆ ನದಿಯಿಂದ ಹೊರ ಬಂದಿತ್ತು. ಗ್ರಾಮಸ್ಥರಾದ ರಾಜು ಅಂತಾಪುರ, ಬಸು ಅಂಬಿಗೇರ, ಲಕ್ಷ್ಮಣ ಜೋಗಿ, ರೇವಣು ಗಾಯಕವಾಡ, ಸದಾಶಿವ ಜೋಗಿ ಸೇರಿ ಇತರರು ಮೊಸಳೆ ಹಿಡಿದರು. ನಂತರ ಅರಣ್ಯ ಇಲಾಖೆ ಸಿಬ್ಬಂದಿ ಬಸು ಜೈನರ ಮೊಸಳೆಯನ್ನು ಆಲಮಟ್ಟಿ ಜಲಾಶಯದ ಹಿನ್ನೀರಿಗೆ ಬಿಟ್ಟರು.