ಪ್ರಜಾಪ್ರಭುತ್ವ ಉಳಿಯಲು ಮತ ಚಲಾಯಿಸಿ

ಮುಧೋಳ: ಭಾರತ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಮುಂದಿನ ಸರ್ಕಾರ ಯಾವುದಿರಬೇಕು ಹಾಗೂ ತಮ್ಮ ಪ್ರತಿನಿಧಿಗಳು ಯಾರಾಗಬೇಕು ಎನ್ನುವುದನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಪ್ರತಿಯೊಬ್ಬ ಮತದಾರನಿಗೆ ಇದೆ ಎಂದು ಜಿಪಂ ಸಿಇಒ ಗಂಗೂಬಾಯಿ ಮಾನಕರ ಹೇಳಿದರು.

ತಾಲೂಕಿನ ಮಂಟೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಲೋಕಸಭೆ ಚುನಾವಣೆ ನಿಮಿತ್ತ ಜಿಪಂ, ಜಿಲ್ಲಾಡಳಿತ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ಹೊನಲು ಬೆಳಕಿನ 60 ಕೆಜಿ ಪುರುಷರ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕ ಕಬೀರ ಇಬ್ರಾಹಿಂ ಸುತಾರ ಮಾತನಾಡಿ, ಮತದಾನ ಅತ್ಯಂತ ಪವಿತ್ರ, ಅಮೂಲ್ಯವಾದುದು. ಇಲ್ಲಿ ಜಾತಿ, ಮತ, ಧರ್ಮಗಳೆಂಬ ಭೇದವಿಲ್ಲ. ಸರ್ವ ಪ್ರಜೆಗಳಿಗೂ ಸಮಾನ ಅವಕಾಶವನ್ನು ಸಂವಿಧಾನ ಒದಗಿಸಿಕೊಟ್ಟಿದೆ. ಮತದಾರರು ಕಡ್ಡಾಯವಾಗಿ ಮತ ಹಾಕಬೇಕು ಎಂದು ಹೇಳಿದರು.

ಅಂಗವಿಕಲ ಕ್ರೀಡಾಪಟು ಎಸ್.ಎಂ. ಕೊಪ್ಪದ, ಶಾಂತಾ ಕಡಿ, ಮುಧೋಳ ಸಹಾಯಕ ಚುನಾವಣಾಧಿಕಾರಿ ಅಶೋಕ ತೇಲಿ, ಇಒ ಬಿ.ಎಸ್. ರಾಠೋಡ, ತಹಸೀಲ್ದಾರ್ ಡಿ.ಜಿ. ಮಹಾತ್, ಬಿ.ಡಿ. ತಳವಾರ, ಪಿಡಿಒಗಳಾದ ಅಶೋಕ ಜನಗೌಡ, ರಾಜು ವಾರದ, ಶ್ರೀನಿವಾಸ ಚಿಗರಡ್ಡಿ, ಅಶೋಕ ಹುಕಮನ್ನವರ, ಶಿವಾನಂದ ನರಸನ್ನವರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಮೇಶ ನಿಡೋಣಿ, ದೈಹಿಕ ಶಿಕ್ಷಣಾಧಿಕಾರಿ ಎ.ವೈ. ಚಿಪ್ಪಲಕಟ್ಟಿ, ಕಸಾಪ ಅಧ್ಯಕ್ಷ ಸಂಗಮೇಶ ನಿಲಗುಂದ ಮತ್ತಿತರರು ಇದ್ದರು. ರಮೇಶ ಅರಕೇರಿ ನಿರೂಪಿಸಿ, ವಂದಿಸಿದರು.

25 ತಂಡಗಳು ಭಾಗಿ
ಕ್ರೀಡಾಕೂಟದಲ್ಲಿ ವಿವಿಧ ಇಲಾಖೆ ಹಾಗೂ ಸ್ಥಳೀಯ 25 ತಂಡಗಳು ಭಾಗವಹಿಸಿದ್ದವು. ಸೋರಗಾವ ತಂಡ ( ಪ್ರಥಮ), ಗೊಲಭಾಂವಿ ತಂಡ ( ದ್ವಿತೀಯ), ಮರೇಗುದ್ದಿ ತಂಡ (ತೃತೀಯ), ಚಿಕ್ಕಾಲಗುಂಡಿ ತಂಡ ಚತುರ್ಥ ಬಹುಮಾನ ಮತ್ತು ಪಾರಿತೋಷಕ ಪಡೆದವು.

Leave a Reply

Your email address will not be published. Required fields are marked *