ಒಂಟಗೋಡಿ ಶಾಲೆಗೆ ಒಳ್ಳೆಯ ದಿನಗಳು ಬರಲಿವೆ

ಮುಧೋಳ: ಪ್ರವಾಹದಿಂದ ಶಾಲೆ ಕಟ್ಟಡ ಶಿಥಿಲಗೊಂಡ ಪರಿಣಾಮ ಬಯಲಲ್ಲೇ ಪಾಠ ಕಲಿಯುತ್ತಿದ್ದ ತಾಲೂಕಿನ ಒಂಟಗೋಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಪತ್ರಾಸ್ ಶೆಡ್ ನಿರ್ಮಿಸಿಕೊಡಲಾಗಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.

ನಂತರ ಮಾತನಾಡಿದ ಅವರು, ಶಿಕ್ಷಕರ ನೆರವಿನಿಂದ ಅತ್ಯುತ್ತಮ ಶಿಕ್ಷಣ ದೊರೆಯುತ್ತಿದೆ. ಖಾಸಗಿ ಶಾಲೆ ಬೆಳೆಯಲು ಅವಕಾಶ ಕೊಡದೆ ಎಲ್‌ಕೆಜಿ ಹಾಗೂ ಯುಕೆಜಿ ವರ್ಗಗಳನ್ನು ಪ್ರಾರಂಭಿಸಲಾಗಿದೆ. ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಈ ಶಾಲೆಗೆ ಒಳ್ಳೆಯ ದಿನಗಳು ಬರಲಿವೆ. ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು.

ಎಲ್ಲ ವರ್ಗದ ಮಕ್ಕಳಿಗೆ ಪಾಠ ತೆಗೆದುಕೊಂಡು ಚರ್ಚಿಸಿದಾಗ ಆಯುಕ್ತರು ಮಕ್ಕಳ ಹಾಗೂ ಶಿಕ್ಷಕರ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಿಆರ್‌ಪಿಒ ಮಹಾಂತೇಶ ನರಸನಗೌಡರ, ಮುದಕಣ್ಣ ಅಂಬಿಗೇರ, ಗೋವಿಂದ ಕೊಪ್ಪದ, ಹನುಮಂತ ಗುಳಬಾಳ, ರಮೇಶ್ ಅರಕೇರಿ, ವಿಠಲ ಶಿತವಗೊಳ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *