ಅಹಲ್ಯಾಬಾಯಿ ಹೋಳ್ಕರ್ ಆದರ್ಶ ಪಾಲಿಸಿ

ಮುಧೋಳ: ಬಾಲ್ಯ ವಿವಾಹ, ಸತಿಸಹಗಮನ ಪದ್ಧತಿ ವಿರುದ್ಧ ಹೋರಾಟ ನಡೆಸಿದ್ದಲ್ಲದೆ, ನೂರಾರು ದೇವಾಲಯಗಳ ಜೀರ್ಣೋದ್ಧಾರ ಮಾಡಿ ಉತ್ತರ ಭಾರತದಲ್ಲಿ ಹಿಂದು ಸಾಮ್ರಾಜ್ಯ ಸಂಸ್ಥಾಪಿಸಿದ ಅಹಲ್ಯಾಬಾಯಿ ಹೋಳ್ಕರ್ ದೇಶ ಕಂಡ ಹೆಮ್ಮೆಯ ಪುತ್ರಿ ಎಂದು ಯುವ ಮುಖಂಡ ಬಸವರಾಜ ಇಟ್ಟನ್ನವರ ಹೇಳಿದರು.

ರಾಯಣ್ಣ ಯುವ ಪಡೆ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಶುಕ್ರವಾರ ಆಯೋಜಿಸಿದ್ದ ಅಹಲ್ಯಾಬಾಯಿ ಹೋಳ್ಕರ್ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಹಲ್ಯಾಬಾಯಿ ಹಿಂದು ದೇವಾಲಯಗಳ ಜತೆಗೆ ಮಸೀದಿ-ಮಂದಿರಗಳನ್ನು ಜೀರ್ಣೋದ್ಧಾರ ಮಾಡಿ ಭಾವೈಕ್ಯತೆ ಮೆರೆದಿದ್ದರು. ಅವರ ಆದರ್ಶನವನ್ನು ಅನುಸರಿಸಿದರೆ ಸಮಾಜದಲ್ಲಿ ಸಾಮರಸ್ಯ ನಿರ್ಮಾಣವಾಗುತ್ತದೆ ಎಂದು ಹೇಳಿದರು.

ರಾಯಣ್ಣ ಯುವ ಪಡೆ ಜಿಲ್ಲಾಧ್ಯಕ್ಷ ಲಕ್ಷ್ಮಣ ಮಸಗುಪ್ಪಿ ಮಾತನಾಡಿ, ಅಹಲ್ಯಾಬಾಯಿ ಹೋಳ್ಕರ್ ಜನ್ಮ ದಿನವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಆಯೋಜಿಸಬೇಕು ಎಂದರು.

ತಾಲೂಕು ಅಧ್ಯಕ್ಷ ನಾಗೇಶ ಹೊಸಮನಿ ಮಾತನಾಡಿದರು. ಕಾರ್ಯದರ್ಶಿ ಬಸವರಾಜ ಕೊಳ್ಳಾರ, ಕೃಷ್ಣಾ ಕರಡಿಗುಡ್ಡ, ಆನಂದ ಇಟ್ಟನ್ನವರ, ಕಾಶಿನಾಥ ಗಡ್ಡದವರ, ಮಂಜುನಾಥ ಸಂಗೊಳ್ಳಿ, ಮಾಳು ಮಹಾಲಿಂಗಪುರ, ನಾಗಪ್ಪ ಕಾತ್ರೊಳ್ಳಿ, ಮಂಜುನಾಥ ಬನಾಜಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *