ಉಳಿಮೇಶ್ವರ ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ

ಭಾರತೀಯ ಜೈನ್ ಸಂಸ್ಥೆ ನೇತೃತ್ವಲ್ಲಿ ಕಾಮಗಾರಿ ಕರೆಹೊಡ್ಡು ದುರಸ್ತಿಗೆ ತಾಕೀತು

ಮುದಗಲ್: ಭಾರತೀಯ ಜೈನ್ ಸಂಸ್ಥೆ ನೇತೃತ್ವದಲ್ಲಿ ಕೈಗೊಂಡ ಸಮೀಪದ ಉಳಿಮೇಶ್ವರ ಕೆರೆ ಹೂಳೆತ್ತುವ ಕಾಮಗಾರಿಗೆ ಲಿಂಗಸುಗೂರು ಶಾಸಕ ಡಿಎಸ್.ಹೂಲಗೇರಿ ಭಾನುವಾರ ಚಾಲನೆ ನೀಡಿದರು.

ನಂತರ ಮಾತನಾಡಿ, ಬಿಜೆಎಸ್ ನೇತೃತ್ವದಲ್ಲಿ ಕ್ಷೇತ್ರದ ಏಳು ಕೆರೆಗಳ ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗಿದೆ. ಸರ್ಕಾರದಿಂದ ಯಂತ್ರಕ್ಕೆ ಕೇವಲ ತೈಲವೆಚ್ಚ ಕೊಡಲಾಗುತ್ತಿದ್ದು, ಬಿಜೆಎಸ್ ಯಂತ್ರಗಳನ್ನು ನೀಡಿದೆ. ಕೆರೆ ಪಕ್ಕದ ರೈತರು ಸ್ವಂತ ಖರ್ಚಿನಲ್ಲಿ ಟ್ರ್ಯಾಕ್ಟರ್ ಮೂಲಕ ಕೆರೆಯ ಫಲವತ್ತಾದ ಹೂಳು ಸಾಗಿಸಿಕೊಳ್ಳಬಹುದು ಎಂದು ಹೇಳಿದರು.

ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಉಳಿಮೇಶ್ವರ ಕೆರೆಯ ತಡೆಗೋಡೆ ಮತ್ತು ಕಾಲುವೆಗೆ ನೀರು ಹರಿಸುವ ವಾಲ್ ಕಟ್ಟಡ ಬಿದ್ದು ಹೋಗಿದೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸದೆ ನಿರ್ಲಕ್ಷೃ ವಹಿಸಿದ್ದಾರೆ ಎಂದು ಶಾಸಕರಿಗೆ ರೈತರು ದೂರಿದರು. ಈ ವೇಳೆ ಶಾಸಕ ಹೂಲಗೇರಿ, ‘ಕೃಷ್ಣಾ ನದಿಯಿಂದ ಕೆರೆಗೆ ನೀರು ತುಂಬಿಸಲಾಗುವುದು. ಆದ್ದರಿಂದ ಈ ಬಗ್ಗೆ ಗಮನಹರಿಸಿ ಕೆರೆಯ ತಡೆಗೋಡೆ, ವಾಲ್ ಕಟ್ಟಡ ಬೇಗ ದುರಸ್ತಿಗೊಳಿಸಬೇಕು’ ಎಂದು ಸಣ್ಣ ನೀರಾವರಿ ಇಲಾಖೆಯ ಎಇಇ ಶ್ಯಾಮಣ್ಣ ಮಾರನಾಳಗೆ ತಾಕೀತು ಮಾಡಿದರು.

ಈ ಸಂದರ್ಭ ಹನುಮಂತಪ್ಪ ಕಂದಗಲ್, ಸೋಮಶೇಖರ ಪೂಜಾರಿ, ಶಿವನಗೌಡ ನಾಗಲಾಪುರು, ಗ್ಯಾನನಗೌಡ, ಡಾ.ಅಯ್ಯಪ್ಪ ಬನ್ನಿಗೋಳ, ಸುರೇಶ ಶೇಠ್ ಜಾಂಗಡ, ಸುರೇಶಗೌಡ, ಮಹಾಂತೇಶ ಪಾಟೀಲ್, ಸತೀಶ ಭೋವಿ, ಶರಣಪ್ಪ ನಾಗಲಾಪುರ, ಬೀರಪ್ಪ ವ್ಯಾಕರನಾಳ ಇದ್ದರು.

Leave a Reply

Your email address will not be published. Required fields are marked *