More

    ಮುದಗಲ್ ಎಸ್‌ಐ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಆಗ್ರಹ

    ಮಸ್ಕಿ: ಬಿಜೆಪಿ ಕಾರ್ಯಕರ್ತರು ಎರಡು ಮೂಟೆಯಲ್ಲಿ ಹಣ ಸಾಗಿಸುತ್ತಿದ್ದರೂ ಜಪ್ತಿ ಮಾಡದೆ, ವಾಪಸು ಹಿಂದುರಿಗಿಸಿದ ಮುದಗಲ್ ಪಿಎಸ್‌ಐ ಡಾಕೇಶ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಆಗ್ರಹಿಸಿತು.

    ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಮುಖಂಡರಾದ ವಿ.ಎಸ್.ಉಗ್ರಪ್ಪ, ಎನ್.ಎಸ್.ಭೋಸರಾಜು, ಬಸನಗೌಡ ಬಾದರ್ಲಿ ಇತರರು ಮುಖಂಡರು ಗುರುವಾರ ಚುನಾವಣಾ ಅಧಿಕಾರಿ ಕಚೇರಿಗೆ ಆಗಮಿಸಿ ಆರೋಪಿಸಿದರು. ಇಲ್ಲಿನ ಉಪಚುನಾವಣೆ ಮುಕ್ತ ಮತ್ತು ನ್ಯಾಯಸಮ್ಮತವಾಗಿಲ್ಲ. ಅಧಿಕಾರಿಗಳು ತಾರತಮ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿದರು. ಮಟ್ಟೂರಿನಲ್ಲಿ ಬಿಜೆಪಿಗೆ ಸೇರಿದ ವಾಹನವೊಂದರಲ್ಲಿ ಎರಡು ಚೀಲಗಳಲ್ಲಿ ಹಣ ತುಂಬಿಕೊಂಡು ಸಾಗಿಸುತ್ತಿರುವುದನ್ನು ಸ್ಥಳೀಯರು ನೋಡಿದ್ದಾರೆ. ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ್ದಾರೆ. ಆದರೆ, ದೊರೆತಿದ್ದ ಒಂದು ಮೂಟೆಯನ್ನು ಬಿಜೆಪಿಯವರಿಗೆ ವಾಪಸು ನೀಡಿದರೆ, ಮತ್ತೊಂದನ್ನು ವಶಪಡಿಸಿಕೊಂಡಿದ್ಧಾರೆ. ಇದನ್ನು ಸ್ಥಳೀಯರು ವಿಡಿಯೋ ಸಹ ಮಾಡಿದ್ದಾರೆ. ಆದರೆ, ವಿಡಿಯೋ ಚಿತ್ರೀಕರಣ ಮಾಡಿದ ಯುವಕನ ಮೊಬೈಲನ್ನು ಪಿಎಸ್‌ಐ ಡಾಕೇಶ ಕಸಿದುಕೊಂಡು ದೃಶ್ಯಗಳನ್ನು ಡಿಲಿಟ್ ಮಾಡಿದ್ದಾರೆ ಎಂದು ಆರೋಪಿಸಿದರು.

    ಈ ವೇಳೆ ಚುನಾವಣೆ ವಿಶೇಷ ಅಧಿಕಾರಿಗಳಾದ ಆದಿತ್ಯ ಆಮ್ಲಾನ್ ಬಿಸ್ವಾಸ್ ಮತ್ತು ನಳಿನ್ ಅತುಲ್ ಮಾತನಾಡಿ, ಘಟನೆ ನಡೆದ ವೇಳೆ ನಾವೇ ಹೋಗಿದ್ದೆವು. ವಶಕ್ಕೆ ಪಡೆದ ವಾಹನದಲ್ಲಿ ಮಂಡಕ್ಕಿ ಚೀಲಗಳನ್ನು ಸಾಗಿಸಲಾಗುತ್ತಿತ್ತು. ಮತ್ತೊಂದಿಷ್ಟು ಪಕ್ಷದ ಬಾವುಟಗಳಿದ್ದವು. ಆದರೆ, ಹಣ ಸಿಕ್ಕಿಲ್ಲ. ಹಾಗೊಂದು ವೇಳೆ ಘಟನೆ ನಡೆದಿದ್ದರೆ ಮತ್ತೊಮ್ಮೆ ವಿಚಾರಣೆ ಮಾಡಲಾಗುವುದು. ಡಿಲಿಟ್ ಆದ ವಿಡಿಯೋವನ್ನು ರಿಕವರಿ ಮಾಡಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು. ಡಿಸಿ ವೆಂಕಟೇಶ್ ಕುಮಾರ್ ಕೂಡ ಇದಕ್ಕೆ ಧ್ವನಿಗೂಡಿಸಿ, ಯಾವುದೇ ಮುಲಾಜಿಲ್ಲದೆ ತನಿಖೆ ಮಾಡುತ್ತೇವೆ. ತಪ್ಪಾಗಿದ್ದರೆ ಪಿಎಸ್‌ಐ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಡಿ.ಕೆ.ಶಿವಕುಮಾರ್‌ಗೆ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts