ಮುದಗಲ್: ಸ್ಥಳೀಯ ಪುರಸಭೆ ಕಚೇರಿಯಲ್ಲಿ ಬಂಜಾರ ಸಮಾಜದ ಆರಾಧ್ಯ ದೈವ ಸಂತ ಸೇವಾಲಾಲ್ ಜಯಂತಿ ಶನಿವಾರ ಆಚರಿಸಲಾಯಿತು.
ಬಂಜಾರ ಸಮಾಜದ ಪ್ರಮುಖ ನೇಮಿಚಂದ ನಾಯ್ಕ ಅವರು ಸೇವಾಲಾಲ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಮುಖ್ಯಾಧಿಕಾರಿ ನರಸಾರಡ್ಡಿ ಪುಷ್ಪನಮನ ಸಲ್ಲಿಸಿದರು. ಪ್ರಮುಖರಾದ ದುರಗಪ್ಪ ಕಟ್ಟಿಮನಿ, ತಸ್ಲಿಂ ಮುಲ್ಲಾ, ಬಾಬು ಉಪ್ಪಾರ, ಹಸನ್ ಕವ್ವಾ, ವೆಂಕಟೇಶ ಹಿರೇಮನಿ, ಬಸವರಾಜ ಬಂದಕಮನಿ, ಲಖನ್, ಸಿಬ್ಬಂದಿ ನಿಸಾರ, ಚನ್ನಮ್ಮ ದಳವಾಯಿ ಇತರರಿದ್ದರು.
ಮಟ್ಟೂರು ತಾಂಡಾ: ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂತ ಸೇವಾಲಾಲ್ ಜಯಂತಿ ಆಚರಿಸಲಾಯಿತು. ಮುಖ್ಯಶಿಕ್ಷಕ ಸೂಗೂರಯ್ಯ ಮಾತನಾಡಿ, ಸಂತ ಸೇವಾಲಾಲ್ ಅವರು ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ತತ್ವಾದರ್ಶಗಳ್ನು ಮಕ್ಕಳು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಶಿಕ್ಷಕರಾದ ರವಿಚಂದ್ರ, ಲಕ್ಷ್ಮೀ, ಪ್ರಮುಖರಾದ ಲೋಕಪ್ಪ ಜಾಧವ್, ಉಪೇಂದ್ರ ಕುಮಾರ್, ಭಜ್ಯಪ್ಪ, ಲಿಂಗಪ್ಪ ಇತರರಿದ್ದರು.