ಬರಿ ಕೈಯಲ್ಲಿ ಸುಡುವ ಹುಗ್ಗಿ ತೆಗೆದ ಶ್ರೀಗಳು

ಮುದಗಲ್: ಸುಕ್ಷೇತ್ರ ಅಂಕಲಿಮಠದಲ್ಲಿ ನಿರುಪಾಧೀಶ್ವರ ಜಾತ್ರೆ ನಿಮಿತ್ತ ಸೋಮವಾರ ಬೆಳಗ್ಗೆ ನೈವೇದ್ಯ ಪೂಜಾ ಕಾರ್ಯಕ್ರಮ ನಡೆಯಿತು. ಶ್ರೀಮಠದ ಪೂಜೆನಂತರ ದಾಸೋಹಕ್ಕಾಗಿ ತಯಾರಿಸಿದ ಸುಡುವ ಹುಗ್ಗಿಯಲ್ಲಿ ಶ್ರೀ ಮಠದ ಪೀಠಾಧೀಶ್ವರರಾದ ಶ್ರೀ ವೀರಭದ್ರ ಸ್ವಾಮೀಜಿ, ಫಕೀರೇಶ್ವರ ಸ್ವಾಮಿ ಕೈ ಹಾಕಿ ಶ್ರೀ ನಿರುಪಾಧೀಶ್ವರಗೆ ಪ್ರಸಾದ ತೆಗೆದರು. ಅಲ್ಲದೆ ಅನ್ನ ಮತ್ತು ಸಾಂಬಾರಿಗೆ ಪೂಜೆ ಸಲ್ಲಿಸಿ ಕೈ ಯಿಂದ ತೆಗೆದು ನೈವೇದ್ಯ ತೆಗೆಟ್ಟರು. ಈ ದೃಶ್ಯವನ್ನು ನೋಡಲು ಸಹಸ್ರಾರು ಭಕ್ತರು ಜಮಾಯಿಸಿ ಜೈ ಘೋಷಣೆ ಕೂಗಿದರು. ಇದಕ್ಕೂ ಮುನ್ನ ಶ್ರೀನಿರುಪಾಧೀಶ್ವರ ಪಲ್ಲಕ್ಕಿ ಉತ್ಸವ ನಡೆಯಿತು.

ವಿವಿಧ ಕಲಾ ತಂಡಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ನೋಡುಗರ ಕಣ್ಮನ ಸೆಳೆಯಿತು. ಬಸವರಾಜಯ್ಯ ಸ್ವಾಮಿ, ರುದ್ರಗೌಡ ತುರಡಗಿ, ಶಿವಯ್ಯ ಸ್ವಾಮಿ, ಸೂಗಣ್ಣ ಬಾಳೆಕಾಯಿ ಮಸ್ಕಿ, ಮಹಾಬಲೇಶ್ವರ ಸ್ವಾಮಿ, ಮಹಾಂತಸ್ವಾಮಿ ಕಸಬಾ ಲಿಂಗಸುಗೂರು, ವೀರನಗೌಡ, ಅಮರಗುಂಡನಗೌಡ ಇತರರಿದ್ದರು.

One Reply to “ಬರಿ ಕೈಯಲ್ಲಿ ಸುಡುವ ಹುಗ್ಗಿ ತೆಗೆದ ಶ್ರೀಗಳು”

Leave a Reply

Your email address will not be published. Required fields are marked *