ಚರಂಡಿ ನಿರ್ಮಾಣ ಬಳಿಕ ರಸ್ತೆ ನಿರ್ಮಿಸಲು 18ನೇ ವಾರ್ಡ್ ನಿವಾಸಿಗಳಿಂದ ಮುಖ್ಯಾಧಿಕಾರಿಗೆ ಮನವಿ

ಮುದಗಲ್: ಪುರಸಭೆ ವ್ಯಾಪ್ತಿಯ ವಾರ್ಡ್ ನಂ.18 ರಲ್ಲಿ ಚರಂಡಿ ನಿರ್ಮಿಸುವಂತೆ ಒತ್ತಾಯಿಸಿ ಶುಕ್ರವಾರ ನಾಗರಿಕರು ಪುರಸಭೆ ಮುಖ್ಯಾಧಿಕಾರಿ ನರಸಿಂಹಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.

ಕಿಲ್ಲಾದ ಶಿವಲಾಲ್‌ಸಿಂಗ್ ಅವರ ಮನೆಯ ಮುಂಭಾಗದಿಂದ ಡಾ.ಶಾಹೀನ್ ಮನೆಯವರೆಗೂ 8-10 ಮನೆಗಳಿದ್ದು ಅಲ್ಲಿ ಚರಂಡಿ ವ್ಯವಸ್ಥೆ ಇಲ್ಲದಿದ್ದರಿಂದ ಮಳೆ ನೀರು ಹಾಗೂ ಚರಂಡಿ ನೀರು ಸಂಗ್ರಹಗೊಳ್ಳುತ್ತದೆ. ಇದರಿಂದ ಮಕ್ಕಳು ಮತ್ತು ವೃದ್ಧ್ದರು ತೊಂದರೆ ಅನುಭವಿಸುತ್ತಿದ್ದಾರೆ. ಇದೆ ವಾರ್ಡ್‌ನ ಗಂಗಾಧರ್ ಬಾವಿಯಿಂದ ಡಾ.ಶಾಹೀನ್ ಮನೆಯವರೆಗೂ ಸಿಸಿ ರಸ್ತೆ ಕಾಮಗಾರಿ ನಿರ್ಮಾಣ ಮಾಡಲಾಗುತ್ತಿದೆ. ಆದರೆ, ಇಲ್ಲಿ ಚರಂಡಿ ನಿರ್ಮಾಣ ಮಾಡದೆ ಸಿಸಿ ರಸ್ತೆ ನಿರ್ಮಿಸುತ್ತಿರುವುದು ಸರಿಯಲ್ಲ. ಕೂಡಲೆ ಈ ಕಾಮಗಾರಿಯನ್ನು ನಿಲ್ಲಿಸಿ ಮೊದಲು ಚರಂಡಿ ನಿರ್ಮಾಣ ಮಾಡಿ ಬಳಿಕವಷ್ಟೆ ಸಿಸಿ ರಸ್ತೆ ಕಾಮಗಾರಿ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವಿಕರಿಸಿದ ಮುಖ್ಯಾಧಿಕಾರಿ ನರಸಿಂಹ ಮೂರ್ತಿ, ಸಿಬ್ಬಂದಿಯನ್ನು ಕೂಡಲೆ ಸ್ಥಳಕ್ಕೆ ಕಳುಹಿಸಿ ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ನಿವಾಸಿಗಳಾದ ಕಾಳಪ್ಪ ಕಂಬಾರ್, ವಿಜಯ ಪಾಟೀಲ್, ಶಂಕರ್‌ಸಿಂಗ್, ವಿಕ್ರಮಸಿಂಗ್, ಹೀರಾಲಾಲ್‌ಸಿಂಗ್, ನಾಗರಾಜ ಬಡಿಗೇರ್ ಸೇರಿ ಇತರರಿದ್ದರು.

Leave a Reply

Your email address will not be published. Required fields are marked *