ಬಿಎಸ್‌ವೈ ರಾಜೀನಾಮೆ ನೀಡಲಿ

ಮುದ್ದೇಬಿಹಾಳ: ಆಪರೇಷನ್ ಕಮಲದ ನೇತೃತ್ವ ವಹಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ, ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ತಮ್ಮ ವಿಪಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪಟ್ಟಣದಲ್ಲಿ ಎನ್‌ಎಸ್‌ಯುಐ ಹಾಗೂ ಯುಥ್ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಉಭಯ ಸಂಘಟನೆ ಕಾರ್ಯಕರ್ತರು ಬಿಎಸ್‌ವೈ ಹಾಗೂ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಎನ್‌ಎಸ್‌ಯುಐ ಮುಖಂಡ ಸದ್ದಾಂ ಕುಂಟೋಜಿ ಮಾತನಾಡಿ, ಮಾಜಿ ಸಿಎಂ ಬಿಎಸ್‌ವೈ ಅವರು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಗೆ ಹಣದ ಆಮಿಷ ಒಡ್ಡಿದ್ದಾರೆ. ಹಾಗೂ ದೇವದುರ್ಗದಲ್ಲಿ ಮಾತನಾಡಿದ ಸಂಭಾಷಣೆಯಲ್ಲಿ ತಮ್ಮದೆ ಧ್ವನಿ ಎಂದು ಒಪ್ಪಿಕೊಂಡಿದ್ದಾರೆ. ಆದ್ದರಿಂದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಯುವ ಕಾಂಗ್ರೆಸ್ ಅಧ್ಯಕ್ಷ ಮಹ್ಮದರಫೀಕ ಶಿರೋಳ, ಪದಾಧಿಕಾರಿಗಳಾದ ಯುಸೂ ನಾಯ್ಕಡಿ, ಡೋಗ್ರಿಸಾಬ ಢವಳಗಿ, ಪುರಸಭೆ ಸದಸ್ಯ ರಿಯಾಜ ಢವಳಗಿ, ಅನಿಲ ನಾಯಕ, ಸಮೀರ ದ್ರಾಕ್ಷಿ, ಬಸವರಾಜ ಗೂಳಿ, ಾರೂಕ ಕುಂಟೋಜಿ, ಮಹಿಬೂಬ ಕೋಳೂರ, ಇಸ್ಮಾಯಿಲ್ ಶಿರೋಳ, ಲಕ್ಷಣ ಚವಾಣ್, ಮಹಿಬೂಬ ಮೊಕಾಶಿ, ರಹಿಮಾನ ಬನ್ನೆಟ್ಟಿ, ಕಾಶಿಮ ಬಾಗಲಕೋಟ, ಆದಿಲ್ ಮುಲ್ಲಾ, ತೌಸಿಫ್ ನಾಯ್ಕಡಿ ಇದ್ದರು.