ಮೂಲಸೌಕರ್ಯ ಕಲ್ಪಿಸಲು ಆಗ್ರಹ

ಮುದ್ದೇಬಿಹಾಳ: ಪಟ್ಟಣದ 1ನೇ ವಾರ್ಡ್ ವಿದ್ಯಾನಗರಕ್ಕೆ ಮೂಲ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ವಾರ್ಡ್ ನಿವಾಸಿಗಳು ಮುಖ್ಯಾಧಿಕಾರಿ ಶೇಖರಪ್ಪ ಈಳಗೇರ ಅವರಿಗೆ ಮನವಿ ಸಲ್ಲಿಸಿದರು.

ವಾರ್ಡ್ ಸದಸ್ಯೆ ಸಹನಾ ಬಡಿಗೇರ ಮಾತನಾಡಿ, ವಾರ್ಡ್ ವ್ಯಾಪ್ತಿಯಲ್ಲಿ ಬೀದಿ ದೀಪಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಕೆಲವು ಕಡೆ ಬೀದಿ ದೀಪಗಳೇ ಇಲ್ಲದೆ ಕಳ್ಳಕಾಕರ ಭಯ ಉಂಟಾಗಿದೆ. ರಸ್ತೆಗಳು ಹಾಗೂ ಚರಂಡಿಗಳು ಅರ್ಧಮರ್ಧ ಕೆಲಸದಿಂದ ಹದಗೆಟ್ಟಿದ್ದು, ನಿವಾಸಿಗಳ ಓಡಾಟಕ್ಕೆ ತೊಂದರೆಯಾಗುತ್ತಿದೆ ಎಂದು ದೂರಿದರು.

ಚರಂಡಿ ತ್ಯಾಜ್ಯ ನಿಗದಿತ ಕಾಲಕ್ಕೆ ವಿಲೇವಾರಿ ಮಾಡದ ಕಾರಣ ವಾರ್ಡ್ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಆವರಿಸಿದೆ. ಸ್ವಚ್ಛತಾ ಸಿಬ್ಬಂದಿಗೆ ವಿಚಾರಿಸಿದರೆ ನಿಮ್ಮ ಕಮಿಟಿ ನೇಮಕವಾಗಿಲ್ಲವೆಂದು ಹಾರಿಕೆಯ ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಮುಖಂಡ ವಿಜಯ ಕುಮಾರ ಬಡಿಗೇರ, ಸಂಗಮ್ಮ ಓತಗೇರಿ, ಪದ್ಮಶ್ರೀ ಲೋಕರೆ, ಪಿ.ಯು. ಕೆಂಭಾವಿಮಠ, ಸುರೇಶ ಪತ್ತಾರ, ಮಾನಪ್ಪ ಪತ್ತಾರ, ಸುರೇಶ ದೋಟಿಹಾಳ, ಬಸು ಓತಗೇರಿ, ಪಿ.ಬಿ. ಮಾತಿನ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *