ಮಕ್ಕಳಲ್ಲಿ ಕ್ರೀಡಾಸಕ್ತಿ ಬೆಳೆಸಿ

ಮುದ್ದೇಬಿಹಾಳ: ತಾಲೂಕಿನ ಯರಗಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಆಲೂರ ಕ್ಲಸ್ಟರ್‌ಮಟ್ಟದ ಶಾಲೆಗಳ ಕ್ರೀಡಾಕೂಟಕ್ಕೆ ಬಿಇಒ ಎಸ್.ಡಿ. ಗಾಂಜಿ ಚಾಲನೆ ನೀಡಿದರು.
ಕ್ರೀಡಾಕೂಟದ ಕಬಡ್ಡಿ ಆಟದಲ್ಲಿ ರೈಡರ್ ಆಗಿ ದಾಳಿ ನಡೆಸಿದ ಬಿಇಒ ಎಸ್.ಡಿ. ಗಾಂಜಿ ಎದುರಾಳಿ ತಂಡದ ಆಟಗಾರನ ಹಿಡಿತಕ್ಕೆ ಸಿಗದೆ ತಪ್ಪಿಸಿಕೊಂಡು ಒಂದು ಅಂಕ ಪಡೆದುಕೊಂಡರು.
ಬಳಿಕ ಮಾತನಾಡಿ, ಕ್ರೀಡೆಗಳು ಗ್ರಾಮೀಣ ಜನರ ಸಂಸ್ಕರತಿ, ಸಂಪ್ರದಾಯಗಳನ್ನು ಹೊರಹೊಮ್ಮಿಸುವ ಸಾಧನಗಳಾಗಿವೆ. ನಮ್ಮ ಮಕ್ಕಳಲ್ಲಿ ಕ್ರೀಡಾ ಆಸಕ್ತಿ ಮೂಡಿಸಿ ಪ್ರೋತ್ಸಾಹಿಸುವುದು ಪ್ರತಿಯೊಬ್ಬ ಶಿಕ್ಷಕರ ಕರ್ತವ್ಯವಾಗಿದೆ ಎಂದರು.
ಪ್ರಭಾರಿ ದೈಹಿಕ ಶಿಕ್ಷಣ ಪರಿವೀಕ್ಷಕ ಎಚ್.ಎಲ್. ಕರಡ್ಡಿ, ಶಿಕ್ಷಣ ಸಂಯೋಜಕ ಎ.ಎಸ್. ಬಾಗವಾನ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ವಿ.ಎನ್. ನವಲಿ, ಆಲೂರ ಕ್ಲಸ್ಟರ್‌ನ ಮುಖ್ಯಗುರುಗಳು, ಸಹಶಿಕ್ಷಕರು ಭಾಗವಹಿಸಿದ್ದರು. ಶಿಕ್ಷಕಿ ಕಡಿ ಸ್ವಾಗತಿಸಿದರು. ಎಸ್.ಬಿ. ಬಿರಾದಾರ ನಿರೂಪಿಸಿದರು. ಎಸ್.ಎಸ್. ಹುನಗುಂದ ವಂದಿಸಿದರು.
ವಿಜೇತ ತಂಡಗಳು: ಕಬ್ಬಡ್ಡಿ (ಗಂಡು) ಕೇಸಾಪುರ ಶಾಲೆ, ಕಬ್ಬಡ್ಡಿ (ಹೆಣ್ಣು) ಯರಗಲ್ ಶಾಲೆ, ಖೋಖೋ (ಗಂಡು) ಯರಗಲ್ ಶಾಲೆ, ಖೋಖೋ (ಹೆಣ್ಣು) ಯರಗಲ್ ಶಾಲೆ, ರೀಲೆ ಓಟ (ಗಂಡು) ಕೇಸಾಪುರ ಶಾಲೆ, ರೀಲೆ ಓಟ (ಹೆಣ್ಣು) ಕೇಸಾಪುರ ಶಾಲೆ. ಗುಂಪು ಹಾಗೂ ವೈಯಕ್ತಿಕ ಆಟೋಟಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

Leave a Reply

Your email address will not be published. Required fields are marked *