ಮತದಾರರ ಹೆಸರು ಕಡಿತಗೊಳಿಸಲು ಆಗ್ರಹ

ಮುದ್ದೇಬಿಹಾಳ: ಪಟ್ಟಣದ 10 ಹಾಗೂ 11ನೇ ವಾರ್ಡಿನಲ್ಲಿ ಖೊಟ್ಟಿ ಮತದಾರರ ಸಂಖ್ಯೆ ಹೆಚ್ಚಾಗಿದ್ದು, ಅವುಗಳನ್ನು ಕಡಿಮೆ ಮಾಡುವಂತೆ ಆಗ್ರಹಿಸಿ ಅಲ್ಲಿನ ನಿವಾಸಿಗಳು ಗುರುವಾರ ತಹಸೀಲ್ದಾರ್​ಗೆ ಮನವಿ ಸಲ್ಲಿಸಿದರು.

ಪುರಸಭೆ ಮಾಜಿ ಸದಸ್ಯ ಅಶೋಕ ಪಾದಗಟ್ಟಿ, ಸಾಹೇಬಲಾಲ ರಿಸಾಲ್ದಾರ್ ಮತ್ತಿತರರು ಮಾತನಾಡಿ, ಮರಣ ಹೊಂದಿದವರು, ಬಾಡಿಗೆ ಮನೆಯಲ್ಲಿ ವಾಸವಾಗಿರುವವರು, ಹೊಸ ಮನೆ ಕಟ್ಟಿಕೊಂಡಿರುವ ವಿವಿಧ ನಗರಗಳಲ್ಲಿರುವ ಮತದಾರರು ಇಲ್ಲಿ ಮತದಾನದ ಹಕ್ಕು ಹೊಂದಿದ್ದಾರೆ. ಇದರಿಂದ ನಮ್ಮ ನಗರದ ನಿವಾಸಿಗಳಿಗೆ ಅನ್ಯಾಯ ವಾಗುತ್ತಿದೆ ಎಂದು ಹೇಳಿದರು.

ಎರಡೂ ವಾರ್ಡಿನಲ್ಲಿ ಮತದಾರರ ಸಮಾನ ಹಂಚಿಕೆ ಮಾಡಬೇಕು. ಖೊಟ್ಟಿ ಮತದಾರರನ್ನು ಕಡಿತಗೊಳಿಸಿ ಪರಿಷ್ಕೃತ ಪಟ್ಟಿ ಪ್ರಕಟಿಸಬೇಕು ಎಂದು ಮನವಿ ಮಾಡಿದರು.

ವೈ.ವೈ. ಮಲಘಾಣ, ಆರ್.ಪಿ. ಲಮಾಣಿ, ನಾಗೇಶ ಭಜಂತ್ರಿ, ಶಂಕರ ಹೆಬ್ಬಾಳ, ಎಸ್.ವೈ. ನಾಯ್ಕಮಕ್ಕಳ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *