ವಿದ್ಯಾರ್ಥಿಗಳ ಏಳಿಗೆಗೆ ಶ್ರಮಿಸಿ

ಮುದ್ದೇಬಿಹಾಳ: ಸರ್ಕಾರಿ ಯೋಜನೆಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಲು ಪ್ರಾಮಾಣಿಕ ಸೇವೆ ಮಾಡಿ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿ ಎಲ್ಲ ಶಿಕ್ಷಕರು ಶ್ರಮಿಸಬೇಕು ಎಂದು ಬಿಇಒ ಎಸ್.ಡಿ. ಗಾಂಜಿ ಹೇಳಿದರು.

ಪಟ್ಟಣದ ಸಂತ ಕನಕದಾಸ ಪ್ರಾಥಮಿಕ ಶಾಲೆಯಲ್ಲಿನ 720ಕ್ಕೂ ಹೆಚ್ಚು ಮಕ್ಕಳಿಗೆ ಶುಕ್ರವಾರ ಬಿಸಿಯೂಟದಲ್ಲಿ ಪುರಿ, ಬಾಜಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ನಗರದಲ್ಲಿ ದೊಡ್ಡ ಶಿಕ್ಷಣ ಸಂಸ್ಥೆಯಾಗಿ ಗುರುತಿಸಿಕೊಂಡ ಸಂತ ಕನಕದಾಸ ಶಾಲೆ ಆಡಳಿತ ಮಂಡಳಿ ವಿದ್ಯಾರ್ಥಿ ಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.

ಕ್ಷೇತ್ರ ಸಮನ್ವಯಾಧಿಕಾರಿ ಎಂ.ಎಂ. ಬೆಳಗಲ್, ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಬಿ. ಚಲವಾದಿ, ಕುರುಬರ ಸಂಘದ ತಾಲೂಕಾಧ್ಯಕ್ಷ ಎಂ.ಎಚ್. ಹಾಲಣ್ಣವರ, ಶಾಲೆ ಅಧ್ಯಕ್ಷ ಬಿ.ಎಸ್. ಮೇಟಿ, ಉಪಾಧ್ಯಕ್ಷ ಬಿ.ಎಸ್. ಹೊಸೂರ, ಎಸ್.ಎಸ್. ಠಾಣೇದ, ಸಿಆರ್​ಪಿ ಟಿ.ಡಿ. ಲಮಾಣಿ, ಎಸ್.ಎಂ. ಸಜ್ಜನ, ಸಿದ್ದನಗೌಡ ಮಂಗಳೂರ, ರಾಮನಗೌಡ ಬಿರಾದಾರ, ಆರ್.ಬಿ. ಧಮ್ಮೂರ, ಎಂ.ಎ. ತಳ್ಳಿಕೇರಿ, ಎಸ್.ಎಸ್. ಪಾಟೀಲ, ಎಸ್.ಬಿ. ಬಂಗಾರಿ, ಮುಖ್ಯಗುರು ಎಂ.ಎನ್. ಯರಝುರಿ, ಬಿ.ಎಸ್. ಪಣೇದಕಟ್ಟಿ, ಶಿಕ್ಷಕರಾದ ಜಿ.ಎನ್. ಹೂಗಾರ, ಎಂ.ಸಿ. ಕಬಾಡೆ ಮತ್ತಿತರರು ಇದ್ದರು.