More

    ಅಪರಾಧ ಚಟುವಟಿಕೆ ತಡೆಗೆ ಮುಂದಾಗಿ

    ಮುದ್ದೇಬಿಹಾಳ: ಪ್ರತಿ ವಿದ್ಯಾರ್ಥಿ, ನಾಗರಿಕ ಸ್ವಯಂಪ್ರೇರಿತ ಪೊಲೀಸ್ ಆಗುವ ಮೂಲಕ ಅಪರಾಧ ಚಟುವಟಿಕೆ ತಡೆಗಟ್ಟುವ ಪ್ರಜ್ಞೆ ಬೆಳೆಸಿಕೊಳ್ಳಬೇಕೆಂದು ಬಸವನಬಾಗೇವಾಡಿ ಡಿವೈಎಸ್ಪಿ ಈ. ಶಾಂತವೀರ ಹೇಳಿದರು.
    ಪಟ್ಟಣದ ಪೊಲೀಸ್ ಠಾಣೆಯಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‌ನ ಮುದ್ದೇಬಿಹಾಳ ಸ್ಥಳೀಯ ಸಂಸ್ಥೆ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಸಮನ್ವಯಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗಾಗಿ ಶುಕ್ರವಾರ ಏರ್ಪಡಿಸಿದ್ದ ಪುಟಾಣಿ ಪೊಲೀಸ್- ಒಂದು ದಿನದ ವಿಶೇಷ ಶಿಬಿರದಲ್ಲಿ ಅವರು ಮಾತನಾಡಿದರು.
    ವಿದ್ಯಾರ್ಥಿ ಜೀವನದಲ್ಲಿ ಮೊಬೈಲ್, ವಾಟ್ಸ್ ಆ್ಯಪ್ ಬಿಟ್ಟು ಪುಸ್ತಕ ಪ್ರೀತಿಸುವುದನ್ನು ಕಲಿಯಬೇಕು. ಸ್ಕೌಟ್ಸ್, ಗೈಡ್ಸ್ ಸೇವಾರ್ಥಿಗಳು ತಾವು ಬೇರೆಯವರಿಗಿಂತ ವಿಶೇಷ, ಶಿಸ್ತಿನ ಸಿಪಾಯಿ ಎನ್ನುವ ಪರಿಕಲ್ಪನೆ ಹೊಂದಿರಬೇಕು. ಧೈರ್ಯ, ಪ್ರಾಮಾಣಿಕತೆ, ಶಿಸ್ತು, ಏಕಾಗ್ರತೆ ಮೈಗೂಡಿಸಿಕೊಳ್ಳಬೇಕು. ಪಾಲಕರು ತಮ್ಮ ಮಕ್ಕಳನ್ನು ಸ್ಕೌಟ್ಸ್, ಗೈಡ್ಸ್‌ಗೆ ಸೇರಿಸಬೇಕು. ಇದರಿಂದ ನಿತ್ಯದ ಓದಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದರು.
    ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಎಸ್.ಬಿ. ಚಲವಾದಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಡಿ. ಗಾಂಜಿ, ಬಿಜೆಪಿ ಧುರೀಣ ಮಲಕೇಂದ್ರಗೌಡ ಪಾಟೀಲ ಮಾತನಾಡಿದರು.
    ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಸಂಸ್ಥೆಯ ರಾಜ್ಯ ಸಹಾಯಕ ಆಯುಕ್ತ ನಾಗೇಶ ಶಿವಪುರ, ದೈಹಿಕ ಶಿಕ್ಷಣ ಪರಿವೀಕ್ಷಕ ಎಚ್.ಎಲ್. ಕರಡ್ಡಿ, ಸಿಪಿಐ ಆನಂದ ವಾಗಮೋಡೆ, ಪಿಎಸ್‌ಐ ಮಲ್ಲಪ್ಪ ಮಡ್ಡಿ, ಸಂಸ್ಥೆ ನಿಕಟಪೂರ್ವ ಕಾರ್ಯದರ್ಶಿ ದತ್ತಾತ್ರೇಯ ಕಠಾರೆ ಇದ್ದರು. ಡಿ.ಬಿ. ವಡವಡಗಿ ಸ್ವಾಗತಿಸಿದರು. ಸಂಸ್ಥೆ ಚೇರ್ಮನ್ ಪೊ.ಎಸ್.ಎಸ್. ಹೂಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಎನ್. ಹೂಗಾರ ನಿರೂಪಿಸಿದರು. ಜಿ.ಎಚ್. ಚವಾಣ್ ವಂದಿಸಿದರು.
    ಸ್ಕೌಟ್ಸ್ ಗೈಡ್ಸ್ ಧ್ವಜಾರೋಹಣ ಮೂಲಕ ಶಿಬಿರಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ನಂತರ ಪೊಲೀಸ್ ಠಾಣೆ ಕಾರ್ಯನಿರ್ವಹಣೆ, ಕಾನೂನು, ವಿವಿಧ ವಿಭಾಗಗಳ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಲಾಯಿತು.

    ಜಾಥಾಕ್ಕೆ ಚಾಲನೆ

    ಶಿಬಿರಕ್ಕೂ ಮುನ್ನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ಪೊಲೀಸ್ ಠಾಣೆವರೆಗೆ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ಜಾಥಾ ನಡೆಸಿದರು. ತಹಸೀಲ್ದಾರ್ ಜಿ.ಎಸ್. ಮಳಗಿ, ಬಿಇಒ ಎಸ್.ಡಿ. ಗಾಂಜಿ ಜಂಟಿಯಾಗಿ ಹಸಿರು ನಿಶಾನೆ ತೋರಿಸುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು. ತಾಪಂ ವ್ಯವಸ್ಥಾಪಕಿ ಎಸ್.ಎಂ. ಅವಟಿ, ಎಂಜಿಎಂಕೆ ಶಿಕ್ಷಕ ಉಮೇಶ ತಾರನಾಳ, ಸ್ಕೌಟ್ಸ್, ಗೈಡ್ಸ್ ತರಬೇತುದಾರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts