ಕೀಳರಿಮೆ ಬಿಟ್ಟು ಮುನ್ನುಗ್ಗಿ

ಮುದ್ದೇಬಿಹಾಳ: ಶಿಕ್ಷಕನಾದವನು ಸದಾ ಅಧ್ಯಯನ ಶೀಲನಾಗಿರಬೇಕು. ಹೊಸದನ್ನು ಕಲಿಯಲು ಹಿಂಜರಿಯಬಾರದು ಎಂದು ಕವಿವಿ ನಿವೃತ್ತ ಕುಲಪತಿ ಡಾ.ಎಚ್.ಬಿ.ವಾಲೀಕಾರ ಹೇಳಿದರು.

ಪಟ್ಟಣದ ಎಂಜಿವಿಸಿ ಬಿಎಡ್ ಕಾಲೇಜಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿ ಹಾಗೂ ಅಜೀಂ ಪ್ರೇಮಜಿ ಫೌಂಡೇಷನ್ ನೇತೃತ್ವದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗಣಿತ ಶಿಕ್ಷಕರ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತರಗತಿಗೆ ಹೋಗುವ ಮುನ್ನ ಶಿಕ್ಷಕ ಅಧ್ಯಯನ ಮಾಡಿರಬೇಕು. ಪಡೆದುಕೊಳ್ಳುವ ಸಂಬಳಕ್ಕೆ ಸರಿಯಾಗಿ ಶಿಕ್ಷಣ ಕೊಟ್ಟರೆ ಆತ್ಮತೃಪ್ತಿ ದೊರೆಯುತ್ತದೆ. ವಿದ್ಯಾರ್ಥಿಗಳು ತರಗತಿಯಲ್ಲಿ ಹೇಗೆ ವರ್ತಿಸುತ್ತಾರೆ ಎಂಬುದರ ಮೇಲೆ ನಮ್ಮ ಪಾಠದ ಮಹತ್ವ ಅರ್ಥವಾಗುತ್ತದೆ. ಆ ನಿಟ್ಟಿನಲ್ಲಿ ಶಿಕ್ಷಕರು ಓದಿಕೊಳ್ಳಬೇಕು ಎಂದು ಹೇಳಿದರು.

ಸಂಸ್ಥೆ ಕಾರ್ಯಾಧ್ಯಕ್ಷ ಅಶೋಕ ತಡಸದ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಡಿ. ಗಾಂಜಿ, ಬಿಆರ್‌ಸಿ ಎಂ.ಎಂ. ಬೆಳಗಲ್ ಹಾಗೂ ತಾಲೂಕಿನ ಗಣಿತ ವಿಷಯದ ಶಿಕ್ಷಕರು ಇದ್ದರು.