ಖಾಸಗಿ ವ್ಯಕ್ತಿ ವಿರುದ್ಧ ಕ್ರಮಕ್ಕೆ ಒತ್ತಾಯ

ಮುದ್ದೇಬಿಹಾಳ: ತಾಲೂಕಿನ ಚವನಬಾವಿಯಲ್ಲಿರುವ ಬಸ್ ತಂಗುದಾಣವನ್ನು ಖಾಸಗಿ ವ್ಯಕ್ತಿಯೊಬ್ಬ ತನ್ನ ಬೆಂಬಲಿಗರ ಸಹಕಾರದಿಂದ ನೆಲಸಮಗೊಳಿಸಿದ್ದು ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಚವನಬಾವಿ ಗ್ರಾಮಸ್ಥರು ಸೋಮವಾರ ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಗ್ರಾಪಂ ಅನುದಾನದಲ್ಲಿ ಕೆಲ ವರ್ಷಗಳ ಹಿಂದೆ ನಿರ್ಮಿಸಿದ ಈ ಬಸ್ ತಂಗುದಾಣವನ್ನು ರಸ್ತೆ ಪಕ್ಕದಲ್ಲಿರುವ ಜಮೀನಿನ ಮಾಲೀಕನೊಬ್ಬ ತನ್ನ ಬೆಂಬಲಿಗರನ್ನು ಕರೆದುಕೊಂಡು ಬಂದು ೆ.28ರಂದು ಜೆಸಿಬಿಯಿಂದ ನೆಲಸಮಗೊಳಿಸಿದ್ದಾನೆ. ಸಾರ್ವಜನಿಕರಿಗೆ ಗ್ರಾಮಸ್ಥರಿಗೆ ನಿಲ್ಲಲು ಅನುಕೂಲವಾಗಿದ್ದ ನಿಲ್ದಾಣವನ್ನು ಅಧಿಕಾರಿಗಳ ಗಮನಕ್ಕೆ ತರದೆ ನೆಲಸಮಗೊಳಿಸಬೇಡಿ ಎಂದು ಹೇಳಲು ಹೋದವರಿಗೆ ಬೈದು ಭಯ ಹಟ್ಟಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಕೂಡಲೇ ತಪ್ಪಿತಸ್ಥ ಖಾಸಗಿ ವ್ಯಕ್ತಿ ವಿರುದ್ಧ ಕ್ರಮ ಜರುಗಿಸಿ ಮರಳಿ ಬಸ್ ತಂಗುದಾಣ ನಿರ್ಮಿಸಿಕೊಡಬೇಕೆಂದು ಒತ್ತಾಯಿಸಿದ್ದಾರೆ. ಇಪ್ಪತ್ತಕ್ಕೂ ಹೆಚ್ಚು ಜನರು ಮನವಿಗೆ ಸಹಿ ಮಾಡಿದ್ದಾರೆ.