ಕಾಳಗಿ ಗ್ರಾಪಂಗೆ ತಾಪಂ ಇಒ ಭೇಟಿ

ಮುದ್ದೇಬಿಹಾಳ: ತಾಲೂಕಿನ ಕಾಳಗಿ ಗ್ರಾಪಂನಲ್ಲಿ ಈ ಹಿಂದಿನ ಅವಧಿಯಲ್ಲಿ ವಿವಿಧ ಯೋಜನೆಗಳಡಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಕುರಿತು ತಾಪಂ ಪ್ರಭಾರಿ ಇಒ ಪ್ರಕಾಶ ದೇಸಾಯಿ ಶನಿವಾರ ಪಂಚಾಯಿತಿಗೆ ಭೇಟಿ ನೀಡಿ ಪರಿಶೀಲಿಸಿದರು.

ಈ ವೇಳೆ ಸ್ಥಳದಲ್ಲಿದ್ದ ದೂರುದಾರ ಮಹಾಂತೇಶ ಕಾಳಗಿ ಹಾಗೂ ಇತರರು ಮಾತನಾಡಿ, ಪಂಚಾಯಿತಿಯಲ್ಲಿ ನಡೆದಿರುವ ಅವ್ಯವಹಾರಗಳ ತನಿಖೆಗೆ ಏಕೆ ವಿಳಂಬ ಮಾಡಿದ್ದೀರಿ ಎಂಬುದು ಅರ್ಥವಾಗುತ್ತಿಲ್ಲ. ಸಮರ್ಪಕ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ಹಿಂದಿನ ಪಿಡಿಒ ಎಸ್.ಎಸ್. ಗಣಾಚಾರಿ ಅವರು ದೂರುದಾರರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಕುರಿತು ತಾಪಂ ಇಒ ಗ್ರಾಮಸ್ಥರು ಹಾಗೂ ಪಿಡಿಒ ಸಮ್ಮುಖದಲ್ಲಿಯೇ ವಿಚಾರಣೆ ನಡೆಸಿದರು.

ಪಿಡಿಒ ಎಸ್.ಎಸ್. ಸರಗಣಾಚಾರಿ ಮಾತನಾಡಿ, ದೂರುದಾರರಿಗೆ ಯಾವುದೇ ರೀತಿಯ ಜೀವ ಬೆದರಿಕೆ ಹಾಕಿಲ್ಲ. ಈ ಬಗ್ಗೆ ಲಿಖಿತವಾಗಿಯೂ ನಾನು ಹೇಳಿಕೆ ನೀಡಿದ್ದೇನೆ ಎಂದರು. ವಿವಿಧ ಯೋಜನೆಗಳಲ್ಲಿ ಅವ್ಯವಹಾರವಾಗಿದೆ ಎಂದು ದೂರಿದ್ದ ಕಾಮಗಾರಿಗಳ ಜಾಗೆಗೆ ತೆರಳಿದ ಇಒ ಅವರು ಕೆಲಸ ಆಗಿದೆಯೋ ಇಲ್ಲವೋ ಎಂಬ ಬಗ್ಗೆಯೂ ಪರಿಶೀಲಿಸಿದರು. ಪಿಡಿಒ ಸುಭಾಷ ಕಟ್ಟಿಮನಿ, ವಿಠ್ಠಲ ಖಾನಗೌಡರ, ಮುತ್ತು ಗೌಡರ, ಬಸಪ್ಪ ಗೊಳಸಂಗಿ, ಮಹಾಂತೇಶ ಗಂಜ್ಯಾಳ ಇದ್ದರು.

Leave a Reply

Your email address will not be published. Required fields are marked *