ರೈತರ ನೆಮ್ಮದಿಗೆ ಶ್ರಮಿಸಿದ ಸಾರ್ಥಕ ಭಾವ ನನ್ನದು

ಮುದ್ದೇಬಿಹಾಳ: ತೀವ್ರ ಬರದಲ್ಲಿ ರೈತರು, ಜನ ಹಾಗೂ ಜಾನುವಾರುಗಳಿಗಾಗಿ ಕೆರೆಗಳನ್ನು ತುಂಬಿಸುವ ಮೂಲಕ ನೀರು ಒದಗಿಸಿ ಅನ್ನದಾತರ ಮುಖದಲ್ಲಿ ನೆಮ್ಮದಿಗೆ ಶ್ರಮಿಸಿದ ಸಾರ್ಥಕ ಭಾವ ನನ್ನದಾಗಿದೆ ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.

ತಾಲೂಕಿನ ಮಲ್ಕಾಪುರ(ಜಕ್ಕೇರಾಳ) ಹಾಗೂ ಹೊಕ್ರಾಣಿ ಕೆರೆಗಳಿಗೆ ಸೋಮವಾರ ಗ್ರಾಮಸ್ಥರೊಂದಿಗೆ ತೆರಳಿ ಬಾಗಿನ ಅರ್ಪಿಸಿದ ಬಳಿಕ ಹೊಕ್ರಾಣಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು. ರೈತಾಪಿ ವರ್ಗದವರಿಗೆ ಕೆರೆಯಲ್ಲಿ ಲಭ್ಯವಾಗುವ ನೀರನ್ನೆ ಕೃಷಿ ಚಟುವಟಿಕೆಗಳಿಗೆ ಬಳಕೆ ಮಾಡಿಕೊಳ್ಳಲು ಈ ಭಾಗದ ಕೆರೆಗಳನ್ನು ತುಂಬಿಸುವ ಕಾರ್ಯ ಮಾಡಿದ್ದೇನೆ. ಕೆಲವರು ನಮ್ಮ ವಿರುದ್ಧ ಶಾಸಕರಿದ್ದಾರೆ ಎಂದು ಆರೋಪ ಮಾಡಿದ್ದಾರೆ. ನಾನು ರೈತರ, ಗ್ರಾಮೀಣ ಜನರ ಪರವಾಗಿದ್ದೇನೆ ಎಂದು ಹೇಳಿದರು.

ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿ, ರೈತರು,ಗ್ರಾಮೀಣ ಭಾಗದ ಜನರಿಗೆ ಕಷ್ಟಕಾಲದಲ್ಲಿ ಆಸರೆಯಾದವರ ಬೆಂಬಲಕ್ಕೆ ನಿಲ್ಲುವ ಕಾರ್ಯ ಮಾಡಬೇಕು. ಬರದಲ್ಲೂ ಕೆರೆಗಳಿಗೆ ನೀರು ಹರಿಸಿ ಅನ್ನದಾತರನ ಮುಖದಲ್ಲಿ ನೆಮ್ಮದಿ ಕಾಣಲು ಕಾರಣವಾಗಿರುವ ಶಾಸಕರ ಕಾರ್ಯ ಪ್ರಶಂಸನಾರ್ಹವಾದದು ಎಂದು ಹೇಳಿದರು.

ಮುಖಂಡರಾದ ಮಲಕೇಂದ್ರಗೌಡ ಪಾಟೀಲ ಮಾತನಾಡಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ,ತ ಾಪಂ ಅಧ್ಯಕ್ಷೆ ಚೆನ್ನಮ್ಮ ತಂಗಡಗಿ, ತಾಪಂ ಮಾಜಿ ಅಧ್ಯಕ್ಷ ಮುತ್ತಣ್ಣ ಹುಗ್ಗಿ, ಸಣ್ಣ ನೀರಾವರಿ ಇಲಾಖೆ ಅಧಿಕಾರಿ ದಾಶ್ಯಾಳ, ತಾಪಂ ಇಒ ಡಾ.ಎಸ್.ವೈ. ಭಜಂತ್ರಿ, ಪಿಡಿಒ ಪಿ.ಎಸ್. ನಾಯ್ಕೋಡಿ, ಬಸವರಾಜ ಗುಳಬಾಳ, ಗ್ರಾಮಸ್ಥರಾದ ರಾಚಪ್ಪ ಜಗಲಿ, ಅಲ್ಲಮಪ್ರಭು ಕೊಡೆಕಲ್ಲಮಠ, ರವಿ ಜಗಲಿ, ಸುಹಾಸ ದೇಶಪಾಂಡೆ, ಎಸ್.ಎಚ್.ಲೊಟಗೇರಿ, ವಿನಯಕರಾವ ದೇಶಪಾಂಡೆ, ಅಣ್ಣಪ್ಪ ಕೊಡೇಕಲ್ಲಮಠ, ನಿಂಗಪ್ಪ ಇಂಗಳಗೇರಿ, ಲಾಳೇಸಾ ಗುರಿಕಾರ, ರೇವಣೆಪ್ಪ ಬಿರಾದಾರ, ಬಸಪ್ಪ ಜಗಲಿ, ಲಕ್ಷ್ಮಣ ಬಿಜ್ಜೂರ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.