ಬಿಜೆಪಿಗೆ ಬಹುಮತ ನೀಡಿದ ಮತದಾರರು

ಮುದ್ದೇಬಿಹಾಳ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಬಾರಿಸಿದ ಹಿನ್ನೆಲೆ ಬಿಜೆಪಿ ವತಿಯಿಂದ ಗುರುವಾರ ಪಟ್ಟಣದಲ್ಲಿ ವಿಜಯೋತ್ಸವ ಆಚರಿಸಲಾಯಿತು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರಲ್ಲದೆ, ಪಟ್ಟಣದಲ್ಲಿ ಮೆರವಣಿಗೆ ನಡೆಸಿದರು.
ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಮೇಲೆ ವಿಶ್ವಾಸ ಇರಿಸಿಕೊಂಡಿರುವ ದೇಶದ ಮತದಾರರು ಮತ್ತೊಮ್ಮೆ ಬಿಜೆಪಿಗೆ ಆಶೀರ್ವದಿಸಿದ್ದಾರೆ. ದೇಶದ ಸುಭದ್ರತೆ ಹಾಗೂ ಸುರಕ್ಷತೆ ಮೋದಿ ಕೈಯಲ್ಲಿ ನೀಡಿದರೆ ನೆಮ್ಮದಿಯಿಂದ ದೇಶವಾಸಿಗಳು ಜೀವನ ನಡೆಸಬಹುದು ಎಂಬುದನ್ನು ಸಾಬೀತು ಮಾಡುವ ಮೂಲಕ ಜನತೆ ಬಿಜೆಪಿಗೆ ಬಹುಮತ ನೀಡಿದ್ದಾರೆ ಎಂದರು.
ಬಿಜೆಪಿ ತಾಲೂಕಾಧ್ಯಕ್ಷ ಎಂ.ಡಿ. ಕುಂಬಾರ, ಮುಖಂಡರಾದ ಮನೋಹರ ತುಪ್ಪದ, ರಾಜು ಬಳ್ಳೊಳ್ಳಿ, ಹನುಮಂತ ನಲವಡೆ, ಗಿರೀಶಗೌಡ ಪಾಟೀಲ, ಮಹಾಂತೇಶ ಹಡಪದ, ನಾಗಪ್ಪ ರೂಢಗಿ, ಉದಯ ರಾಯಚೂರ, ಇಕ್ಬಾಲ್ ಮೂಲಿಮನಿ, ಬಸವರಾಜ ಸಿದ್ದಾಪುರ, ಚೇತನ ಮೋಟಗಿ, ಅಶೋಕ ಚಿನಿವಾರ ಮತ್ತಿತರರು ಪಾಲ್ಗೊಂಡಿದ್ದರು.
ಪುರಸಭೆ ಸದಸ್ಯೆಯರಾದ ಸಂಗಮ್ಮ ದೇವರಳ್ಳಿ, ಸಹನಾ ಬಡಿಗೇರ, ಬಸಮ್ಮ ಸಿದರೆಡ್ಡಿ, ಶಿಲ್ಪಾ ಶರ್ಮಾ ಮತ್ತಿತರರು ಹುಡ್ಕೋದಲ್ಲಿ ಗುಲಾಲು ಆಡುವ ಮೂಲಕ ಬಿಜೆಪಿ ವಿಜಯೋತ್ಸವ ಆಚರಿಸಿದರು.

Leave a Reply

Your email address will not be published. Required fields are marked *