ಸಾಮೂಹಿಕ ವಿವಾಹಗಳ ಸಂಖ್ಯೆ ಹೆಚ್ಚಲಿ

ಮುದ್ದೇಬಿಹಾಳ: ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮದುವೆಯಾಗುವವರ ಸಂಖ್ಯೆ ಹೆಚ್ಚಳವಾಗಬೇಕಿದೆ. ಸಾಮೂಹಿಕ ವಿವಾಹಗಳಲ್ಲಿ ಮಕ್ಕಳನ್ನು ಮದುವೆ ಮಾಡುವ ಸಂಪ್ರದಾಯಕ್ಕೆ ಅಡಿಯಪಾಯ ಹಾಕಬೇಕು ಎಂದು ಹಿರೂರಿನ ಜಯಸಿದ್ಧೇಶ್ವರ ಶಿವಾಚಾರ್ಯರು ಹೇಳಿದರು.

ಪಟ್ಟಣದ ಪಿಲೆಕೆಮ್ಮ ನಗರದಲ್ಲಿ ನಿರ್ಮಿಸಿದ ಮಾರುತೇಶ್ವರ ದೇವಸ್ಥಾನ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಇಟಗಿಯ ಗುರುಶಾಂತವೀರ ಶಿವಾಚಾರ್ಯರು ಮಾತನಾಡಿ,ಪಿಲೇಕೆಮ್ಮ ನಗರದ ಯುವಕರು ಪರೋಪಕಾರಿ ಕಾರ್ಯ ಮಾಡುವ ಮೂಲಕ ಒಳ್ಳೆಯ ಸಂಪ್ರದಾಯಕ್ಕೆ ನಾಂಧಿ ಹಾಡಿದ್ದಾರೆ ಎಂದು ಹೇಳಿದರು.

ಶಾಸಕ ಎ.ಎಸ್. ಪಾಟೀಲ ನಡಹಳ್ಳಿ, ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಅಂಕಲಿಮಠದ ಕೀರೇಶ್ವರ ಶ್ರೀಗಳು,ಮೂರ್ತಿ ದಾನಿ ಸೈನಿಕ ಮಲ್ಲಿಕಾರ್ಜುನ ಬಡಿಗೇರ, ವಡ್ಡರ ಸಮಾಜದ ಮುಖಂಡ ಸಿದ್ರಾಮಪ್ಪ ಹಡಲಗೇರಿ, ವೈ.ಬಿ. ನಾಯ್ಕಡಿ, ಮಲಕೇಂದ್ರಗೌಡ ಪಾಟೀಲ, ಪುರಸಭೆ ಮಾಜಿ ಸದಸ್ಯ ಶರಣು ಬೂದಿಹಾಳಮಠ, ಗುರುರಾಜ ಸರಗಣಾಚಾರಿ, ಪತ್ರಕರ್ತ ಶಂಕರ ಹೆಬ್ಬಾಳ, ಬಸವರಾಜ ಕುಂಬಾರ, ಸಂಗಮೇಶ ಹಿರೇಮಠ, ಬಾಬು ಹಿರೇಮಠ, ಸುನೀಲ ಹಡ್ಲಗೇರಿ,ಪ್ರಭು ಕರಡಿ, ಪರಶುರಾಮ ನಾಲತವಾಡ, ರಾಜು ಜಕ್ಕೇರಾಳ ಮತ್ತಿತರರು ಉಪಸ್ಥಿತರಿದ್ದರು.

ಮಲ್ಲಿಕಾರ್ಜುನ ಬಡಿಗೇರ ಸ್ವಾಗತಿಸಿದರು. ಶ್ರೀಶೈಲ ಹೂಗಾರ ನಿರೂಪಿಸಿದರು.