ಮುದ್ದಂಡ ಕಪ್ ಹಾಕಿ: ೪ ತಂಡಗಳು ಕ್ವಾರ್ಟರ್ ಫೈನಲ್ ಹಂತಕ್ಕೆ

blank

ಮಡಿಕೇರಿ: ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿಯ ೨೫ನೇ ವರ್ಷದ ಮುದ್ದಂಡ ಕಪ್ ಹಾಕಿ ಪಂದ್ಯಾಟದಲ್ಲಿ ಬುಧವಾರ ೪ ತಂಡಗಳು ಗೆಲುವು ಸಾಧಿಸಿ ಕ್ವಾರ್ಟರ್ ಪೈನಲ್ ಹಂತಕ್ಕೆ ಅರ್ಹತೆ ಪಡೆದುಕೊಂಡಿತು.

ಮಡಿಕೇರಿಯ ಫೀ.ಮಾ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನ ೧ರಲ್ಲಿ ನೆಲ್ಲಮಕ್ಕಡ ಮತ್ತು ಕೋಳೇರ ನಡುವಿನ ಪಂದ್ಯದಲ್ಲಿ ೪-೦ ಗೋಲುಗಳ ಅಂತರದಲ್ಲಿ ನೆಲ್ಲಮಕ್ಕಡ ಗೆಲುವು ದಾಖಲಿಸಿತು. ನೆಲ್ಲಮಕ್ಕಡ ಪರ ಸಚಿನ್, ರಾಕೇಶ್ ಸುಬ್ರಮಣಿ, ರೋಶನ್ ಬೋಪಣ್ಣ ಹಾಗೂ ಅಯ್ಯಪ್ಪ ತಲಾ ೧ ಗೋಲು ದಾಖಲಿಸಿದರು. ಕೋಳೇರ ನಿಶಿಕ್ ನಾಚಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಕೂತಂಡ ಮತ್ತು ಅಮ್ಮಣಿಚಂಡ ನಡುವಿನ ಪಂದ್ಯದಲ್ಲಿ ೫-೦ ಗೋಲುಗಳ ಅಂತರದಲ್ಲಿ ಕೂತಂಡ ಜಯ ಸಾಧಿಸಿತು. ಕೂತಂಡ ಪರ ಬೋಪಣ್ಣ ೪ ಗೋಲು ದಾಖಲಿಸಿ ಗಮನ ಸೆಳೆದರೆ, ಸುರೇಶ್ ಅಪ್ಪಯ್ಯ ೧ ಗೋಲು ಬಾರಿಸಿದರು. ಅಮ್ಮಣಿಚಂಡ ಯಶ್ವಂತ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ನಾಳಿಯಂಡ ಮತ್ತು ಪುದಿಯೊಕ್ಕಡ ನಡುವಿನ ಪಂದ್ಯದಲ್ಲಿ ೨-೧ ಗೋಲುಗಳ ಅಂತರದಲ್ಲಿ ಪುದಿಯೊಕ್ಕಡ ಜಯ ಸಾಧಿಸಿತು. ಪುದಿಯೊಕ್ಕಡ ಪರ ಮಿಥನ್ ಪೊನ್ನಪ್ಪ ಹಾಗೂ ವಿಪನ್ ಸೋಮಯ್ಯ ತಲಾ ೧ ಗೋಲು ದಾಖಲಿಸಿದರು. ನಾಳಿಯಂಡ ಪರ ಚರಣ್ ಚಿಣ್ಣಪ್ಪ ೧ ಗೋಲು ಬಾರಿಸಿದರು. ನಾಳಿಯಂಡ ರತ್ನ ಬೆಳ್ಯಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಕರವಂಡ ಮತ್ತು ಕಾಂಡಂಡ ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ತಲಾ ೨ ಗೋಲುಗಳ ಮೂಲಕ ಸಮಬಲ ಸಾಧಿಸಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ ೨-೧ ಗೋಲುಗಳ ಅಂತರದಲ್ಲಿ ಕರವಂಡ ಜಯ ಸಾಧಿಸಿತು. ಕರವಂಡ ಪರ ಕೃತನ್ ಅಪ್ಪಚ್ಚು ೨ ಗೋಲು ದಾಖಲಿಸಿದರು. ಕಾಂಡಂಡ ಪರ ಆದಿತ್ಯ ಅಪ್ಪಣ್ಣ ಹಾಗೂ ಕೌಶಿಕ್ ಕುಶಾಲಪ್ಪ ತಲಾ ೧ ಗೋಲು ಬಾರಿಸಿದರು. ಕಾಂಡಂಡ ಕೌಶಿಕ್ ಕುಶಾಲಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

Share This Article

ನಿಮ್ಮ ಮುಖದಲ್ಲಿ ಬೇಡದ ಕೂದಲು ಇದೆಯೇ? ಈ ಸಲಹೆಗಳನ್ನು ಅನುಸರಿಸಿ..Unwanted Hair

Unwanted Hair : ಮುಖದ ಮೇಲೆ ಬೇಡದ ಕೂದಲು ಸಾಮಾನ್ಯ ಆದರೆ ಮಹಿಳೆಯರಿಗೆ ಮುಜುಗರದ ಸಮಸ್ಯೆಯಾಗಿದೆ.…

ಕೇವಲ 2 ಚಮಚ ಉಪ್ಪು ಇದ್ದರೆ ಸಾಕು ಮನೆಗೆ ಇರುವೆ, ಜಿರಳೆ ಬರದಂತೆ ತಡೆಯಬಹುದು..| Salt

Salt: ಉಪ್ಪು ಅಡಿಗೆಗೆ ರುಚಿಯನ್ನು ಮಾತ್ರ ನೀಡುವುದಿಲ್ಲ, ಅದು ನಿಮ್ಮ ಅಡುಗೆ ಮನೆಯ ಸ್ವಚ್ಛತೆಗೂ ಸಹಾಯ…

ಜಸ್ಟ್​ ಈ ಸಣ್ಣ ಕೆಲಸ ಮಾಡಿ… ನಿಮ್ಮ ಮುಖದ ಮೇಲಿನ ಮೊಡವೆಗಳನ್ನು ಸುಲಭವಾಗಿ ಕಡಿಮೆ ಮಾಡಿಕೊಳ್ಳಿ! Glowing Skin

Glowing Skin : ಪ್ರತಿಯೊಬ್ಬರೂ ಆರೋಗ್ಯಕರ ಮತ್ತು ಹೊಳೆಯುವ ಚರ್ಮವನ್ನು ಬಯಸುತ್ತಾರೆ. ಆದರೆ, ಪ್ರಸ್ತುತ ಕಾಲದಲ್ಲಿ,…