ದೂರು ಪ್ರತಿದೂರಿನಲ್ಲೆ ಮುಗಿದ ಸಭೆ

ಕೆಂಭಾವಿ: ಮುದನೂರ ಗ್ರಾಮದ ದಾಸೀಮಯ್ಯ ದೇವಸ್ಥಾನದ ಹಣ ದುರ್ಬಳಕೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆ ವಿಫಲವಾಯಿತು.

ಗ್ರಾಮದ ದೇವರ ದಾಸೀಮಯ್ಯ ದೇವಸ್ಥಾನದ ಹಣವನ್ನು ಖಾಸಗಿ ಕಮೀಟಿ ಸದಸ್ಯರು, ಗ್ರಾಮದ ಕೆಲ ಪ್ರಮುಖರು ಲಪಟಾಯಿಸಿದ್ದಾರೆ ಎಂದು ಆರೋಪಿಸಿ ಗ್ರಾಮದ ರಾಮನಾಥರೆಡ್ಡಿ ಎಂಬುವರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.

ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದ ಅನ್ವಯ ಸುರಪುರ ತಹಸೀಲ್ದಾರ್ ಸುರೇಶ ಅಂಕಲಗಿ ಹಾಗೂ ಹುಣಸಗಿ ತಹಸೀಲ್ದಾರ್ ಸುರೇಶ ಚವಲ್ಕರ್ ಅಧ್ಯಕ್ಷತೆಯಲ್ಲಿ ದೇವಸ್ಥಾನದ ಆವರಣದಲ್ಲಿ ದೂರುದಾರ ಹಾಗೂ ಮುದನೂರ (ಬಿ) ಹಾಗೂ ಮುದನೂರ (ಕೆ) ಗ್ರಾಮಸ್ಥರ ಸಮ್ಮುಖದಲ್ಲಿ ತಹಸೀಲ್ದಾರ್ ಸಭೆ ನಡೆಸಲು ಮುಂದಾದರು.

ಸಭೆ ಆರಂಭವಾಗುತ್ತಿದ್ದಂತೆ ಎರಡೂ ಗ್ರಾಮದ ಗ್ರಾಮಸ್ಥರು ಹಾಗೂ ಮುಖಂಡರುಗಳು ದೂರುದಾರ ರಾಮನಾಥರೆಡ್ಡಿ ವಿರುದ್ಧ ಆರೋಪಗಳ ಸುರಿಮಳೆಯನ್ನೆ ಮಾಡಿದರು. ಒಂದು ಹಂತದಲ್ಲಿ ಇದು ವಿಕೋಪಕ್ಕೆ ಹೋಗುವುದನ್ನು ಗಮನಿಸಿದ ಪೊಲೀಸರು ಗ್ರಾಮಸ್ಥರನ್ನು ಸಮಾಧಾನ ಪಡಿಸಿ ಸಭೆ ಮುಂದುವರೆಯುವಂತೆ ಮಾಡಿದರು.

ಸಭೆಯಲ್ಲಿ ಮಾತನಾಡಿದ ತಹಸೀಲ್ದಾರ್ ದೂರದಾರರ ಅನ್ವಯ ಸುಮಾರು ಮೂರು ಲಕ್ಷಕ್ಕೂ ಅಧಿಕ ಹಣ ದುರ್ಬಳಕೆಯಾಗಿದ್ದು ಇದರಲ್ಲಿ ಪ್ರಮುಖರು ಭಾಗಿಯಾಗಿದ್ದಾರೆ ಎಂಬ ಆರೋಪ ಇದೆ ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಹಲವು ಪ್ರಮುಖರು ಜಾತ್ರೆಯ ಸಮಯದಲ್ಲಿ ಎರಡೂ ಗ್ರಾಮಸ್ಥರ ಜತೆಗೂಡಿ ಸಂಗ್ರಹಿಸಿದ ವಂತಿಗೆ ಹಣದಿಂದ ದೇವಸ್ಥಾನದ ಕೆಲವು ಪ್ರದೇಶಗಳನ್ನು ಅಭಿವೃದ್ಧಿಪಡಿಸಲಾಗಿದ್ದು ಉಳಿದ ಹಣದಲ್ಲಿ ಜಾತ್ರೆಗೆ ಖಚರ್ು ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಲ್ಲಿಸಿದರು.

ಇಷ್ಟಕ್ಕೆ ತೃಪ್ತರಾಗದ ದೂರುದಾರ ರಾಮನಾಥರೆಡ್ಡಿ ದೇವಸ್ಥಾನಕ್ಕೆ ಸಂಬಂಧಿಸದಂತೆ ಹಿಂದಿನ ಕಮೀಟಿ ಸೇರಿ ಇನ್ನಿತರೆ ವಿಷಯ ಹಾಗೂ ಹಣದ ವಿಚಾರವೆತ್ತಿದಾಗ, ಗ್ರಾಮಸ್ಥರು ಹಾಗೂ ದೂರುದಾರರ ನಡುವೆ ಮತ್ತೆ ಮಾತಿನ ಜಟಾಪಟಿ ಪ್ರಾರಂಭವಾಯಿತು. ಆಗ ಇಬ್ಬರು ತಹಸೀಲ್ದಾರ್ರು ಸಭೆ ಮೊಟಕುಗೊಳಿಸಿ ಹೊರ ನಡೆದರು.

ಸಭೆಯಲ್ಲಿ ಭೂಸೇನಾ ನಿಗಮದ ಅಧಿಕಾರಿ ಶಿವರಾಯ, ಕಂದಾಯ ನಿರೀಕ್ಷಕ ರಾಜಾಸಾಬ್, ಕಂದಾಯ ಇಲಾಖೆಯ ಪ್ರವೀಣ, ಶರಣು, ಮುಖಂಡರಾದ ಸಿದ್ರಾಮರೆಡ್ಡಿ ಯಡಳ್ಳಿ, ಬಸವಂತ್ರಾಯ ಚೌಧರಿ, ಶಾಂತರೆಡ್ಡಿ ಚೌಧರಿ, ವಿಜಯರೆಡ್ಡಿ ಮುದನೂರ, ಸುಭಾಶ್ಚಂದ್ರರೆಡ್ಡಿ ಚೌಧರಿ, ಪ್ರಭುಗೌಡ ಹರನಾಳ, ಬಸನಗೌಡ ಗೌಡಪ್ಪಗೌಡ, ಈರಣ್ಣ ಬುಸ್ಸಾ, ಬಾಪುಗೌಡ ಬಗಲಾಪೂರ, ನಾನಾಗೌಡ ಇತರರಿದ್ದರು.

ದೇವಸ್ಥಾನದ ಅಭಿವೃದ್ಧಿ ಹಾಗೂ ಹಣ ದುರ್ಬಳಕೆಗೆ ಸಂಬಂಧಿಸಿದಂತೆ ಇಂದು ದೂರುದಾರ ಹಾಗೂ ಎರಡೂ ಗ್ರಾಮಸ್ಥರ ಸಭೆ ನಡೆಸಲಾಯಿತು. ಆದರೆ ಸಭೆಯಲ್ಲಿ ಒಮ್ಮತದ ನಿಧರ್ಾರ ವ್ಯಕ್ತವಾಗಿಲ್ಲ. ಆದ್ದರಿಂದ ನ. 21ರಂದು ಸುರಪುರ ತಹಸಿಲ್ ಕಾಯರ್ಾಲಯದಲ್ಲಿ ಮತ್ತೆ ಸಭೆ ನಡೆಸಲು ಉದ್ದೇಶಿಸಲಾಗಿದೆ. ಎರಡೂ ಗ್ರಾಮಸ್ಥರು ದೂರುದಾರ ರಾಮನಾಥರೆಡ್ಡಿ ವಿರುದ್ಧ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಕೂಲಂಕುಶ ವಿಚಾರಣೆ ನಡೆಸಿ ಅಂತಿಮ ನಿರ್ಧಾರ ಕೈಗೊಂಡು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು.
| ಸುರೇಶ ಅಂಕಲಗಿ, ತಹಸೀಲ್ದಾರ್ ಸುರಪುರ