ಮುದಗಲ್: ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಮೂಲಕ ಆನ್‌ಲೈನ್ ಕ್ರೀಡೆಗಳ ಬಗ್ಗೆ ಹೆಚ್ಚಿನ ಆಸಕ್ತಿ ತೋರುತ್ತಿರುವುದು ಕಳವಳಕಾರಿಯಾಗಿದೆ ಎಂದು ಕಸಾಪ ತಾಲೂಕು ಮಲ್ಲಿಕಾರ್ಜುನ ಗೌಡರ್ ಹೇಳಿದರು.
ಪಟ್ಟಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಪ್ರೌಢಶಾಲೆಗಳ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಗುರುವಾರ ಮಾತನಾಡಿದರು. ಶಿಕ್ಷಣದೊಂದಿಗೆ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮಕ್ಕಳ ಸರ್ವಾಂಗೀಣ ಅಭಿವೃಧ್ಧಿ ಸಾಧ್ಯ. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡಾ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು. ಈ ಮೂಲಕ ಕ್ರೀಡಾ ಪ್ರತಿಭೆಯನ್ನು ಹೊರಹಾಕಬೇಕೆಂದು ತಿಳಿಸಿದರು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಚನ್ನಬಸವ ಮಾತನಾಡಿ, ನೈಜ ಪ್ರತಿಭೆಗಳನ್ನು ಗುರುತಿಸಲು ತೀರ್ಪುಗಾರರ ನಿರ್ಣಯಕ್ಕೆ ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳು ಬದ್ಧರಾಗಿರಬೇಕು. ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸಿ ಕ್ರೀಡಾಮನೋಭಾವನೆ ಪ್ರದರ್ಶಿಸಬೇಕೆಂದರು.
11 ಕ್ಕೂ ಹೆಚ್ಚು ಪ್ರೌಢಶಾಲೆಗಳ ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದರು. ಫಾದರ್ ಪೊನ್ನು ಸ್ವಾಮಿ, ಪುರಸಭೆ ಸದಸ್ಯ ರಾದ ಶ್ರೀಕಾಂತಗೌಡ ಪಾಟೀಲ್, ರಾಬಿಯಾ ಹುಸೇನ್ ಅಲಿ, ಮುಖ್ಯ ಶಿಕ್ಷಕರಾದ ನೀಲಪ್ಪ ಅಚನೂರು, ಮಹ್ಮದ್ ಷರೀಫ್, ನಾಗರಾಜ ತಳವಾರ, ಮರಿಯಮ್ಮ, ಸಿಆರ್‌ಪಿ ರಾಮಚಂದ್ರ ಢವಳೆ, ಸಿಸ್ಟರ್ ಮಾರ್ಟಿನ್, ಸಿಸ್ಟರ್ ಲಿಲ್ಲಿ ಫರ್ನಾಂಡಿಸ್, ಎಸ್.ಎನ್.ಅಕ್ಕಿ, ಮಹಾಂತೇಶ ಚಲುವಾದಿ, ಸುಶೀಲಾ ಎಮ್ಮಿ, ಎಎಸ್‌ಐ ಅನೀಸ್ ಪಾಷಾ, ಮೌಲಾಸಾಬ್ ಜಂಗ್ಲಿ ಇತರರಿದ್ದರು.