ಕಾರ್ ಪಲ್ಟಿಯಾಗಿ ಲಿಂಗನಗೌಡ ಬಯ್ಯಾಪುರ ಸಾವು

ಮುದಗಲ್: ಸಮೀಪದ ಕತ್ತೆಹಳ್ಳದ ಹತ್ತಿರ ರಾಜ್ಯ ಹೆದ್ದಾರಿಯಲ್ಲಿ ಬುಧವಾರ ಸಂಜೆ ಕಾರ್ ಪಲ್ಟಿಯಾಗಿ ಶಾಸಕ ಅಮರೇಗೌಡ ಬಯ್ಯಾಪುರ ಅವರ ಮೊಮ್ಮಗ ಲಿಂಗನಗೌಡ(23) ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕಾರಿನಲ್ಲಿದ್ದ ಅರುಣಕುಮಾರ, ಮಂಜುನಾಥ ಸೇರಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತ ಲಿಂಗನಗೌಡ ಕೆಪಿಸಿಸಿ ಸದಸ್ಯ ಶರಣಗೌಡ ಬಯ್ಯಾಪುರ ಪುತ್ರ ಹಾಗೂ ಶಾಸಕ ಅಮರೇಗೌಡ ಬಯ್ಯಾಪುರ ಅವರ ಮೊಮ್ಮಗ. ಮುದಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.