ಅಡವಿಬಾವಿ ಮೌನೇಶ್ವರ ಜಾತ್ರೆ ಅದ್ದೂರಿ

ಮುದಗಲ್: ಅಡವಿಬಾವಿ ಗ್ರಾಮದ (ಆ) ಆರಾಧ್ಯ ದೈವ ಶ್ರೀ ಮೌನೇಶ್ವರ ಜಾತ್ರೋತ್ಸವ ವಿಜೃಂಭಣೆಯಿಂದ ನಡೆಯಿತು. ಜಾತ್ರೆ ಹಿನ್ನೆಲೆಯಲ್ಲಿ ಮೂರು ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಸೋಮವಾರ ಪುರವಂತರ ಸೇವೆಯೊಂದಿಗೆ ಅಡವಿಬಾವಿ ಗ್ರಾಮದಿಂದ ಬೆಟ್ಟದವರೆಗೆ ದೇವರ ಪಲ್ಲಕ್ಕಿ ಉತ್ಸವ ನಡೆಸಲಾಯಿತು. ಮಂಗಳವಾರ ಬೆಳಗ್ಗೆ ಮೌನೇಶ್ವರರ ಕರ್ತೃ ಗದ್ದುಗೆಗೆ ಪಂಚಾಮೃತ ಅಭಿಷೇಕ, ಮಧ್ಯಾಹ್ನ ಸಾಮೂಹಿಕ ವಿವಾಹ ಹಾಗೂ ಮಹಾಪ್ರಸಾದ ಹಾಗೂ ಸಾಯಂಕಾಲ ಪುರವಂತರು, ಕಳಸ, ವಾದ್ಯ ಮೇಳದೊಂದಿಗೆ ಪಲ್ಲಕ್ಕಿ ಮತ್ತು ಉಚ್ಛಾಯ ಮೆರವಣಿಗೆ ನೆರವೇರಿತು.

ಜಾತ್ರೆಯಲ್ಲಿ ಶಾಸಕ ಹಾಗೂ ಸಂಸದೀಯ ಕಾರ್ಯದರ್ಶಿ ಡಿ.ಎಸ್.ಹೂಲಗೇರಿ, ಮುದಗಲ್ ಬ್ಲಾಕ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಶಿವಶಂಕರಗೌಡ, ಮಹಾಂತೇಶ ಪಾಟೀಲ್, ಗುರುನಗೌಡ, ರಾಜುಗೌಡ, ಬಸವರಾಜ ನಾಯಕ, ದುರಗಪ್ಪ, ಯಮನೂರಸಾಬ್, ಬಸವರಾಜ, ಮಾನಪ್ಪ, ಮಲ್ಲಪ್ಪ ಹಾಗೂ ಕನ್ನಾಪುರಹಟ್ಟಿ, ಮೇಗಳಪೇಟೆ, ಕಾಚಾಪುರ, ಆಶಿಹಾಳ, ಕಿಲಾರಹಟ್ಟಿ, ಖೈರವಾಡಗಿ, ಗುಂಡಸಾಗರ ಸೇರಿ ವಿವಿಧ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.