More

  ಪದವಿ ಪಡೆದವರಲ್ಲಿ ಶೇ.10 ಮಂದಿಗಷ್ಟೇ ಉದ್ಯೋಗ

  ಬೆಂಗಳೂರು: ಪದವಿ ಎನ್ನುವುದು ಹಲವು ವರ್ಷಗಳ ಕಠಿಣ ಪರಿಶ್ರಮದಿಂದ ದೊರೆಯುತ್ತದೆ. ಆದರೆ ದೇಶದಲ್ಲಿ ಪದವಿ ಪಡೆಯುವವರಲ್ಲಿ ಶೇ. 10 ಮಂದಿ ಮಾತ್ರವೇ ಉದ್ಯೋಗ ಪಡೆದುಕೊಳ್ಳುತ್ತಾರೆ. ಹಾಗಾಗದೆ ಎಲ್ಲರಿಗೂ ಉದ್ಯೋಗ ದೊರಕುವಂತಾಗಬೇಕು ಎಂದು ಎಂ.ಎಸ್. ರಾಮಯ್ಯ ಯೂನಿವರ್ಸಿಟಿ ಅಪ್ಲೈಡ್ ಸೈನ್ಸ್‌ನ ಕುಲಪತಿ ಡಾ. ಎಂ. ಆರ್. ಜಯರಾಮ್ ಹೇಳಿದರು.

  ಎಂಎಸ್‌ಆರ್ ನಗರದ ಎಂ.ಎಸ್. ರಾಮಯ್ಯ ಯೂನಿವರ್ಸಿಟಿ ಆ್ ಅಪ್ಲೈಡ್ ಸೈನ್ಸ್‌ನ (ಎಂಎಸ್‌ಆರ್‌ಯುಎಎಸ್) ಜ್ಞಾನಗಂಗೋತ್ರಿ ಸಭಾಂಗಣದಲ್ಲಿ ಶುಕ್ರವಾರ ನಡೆದ 8ನೇ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.

  ಪದವಿ ಪಡೆದವರು ಭವಿಷ್ಯದಲ್ಲಿ ಶ್ರೇಷ್ಠತೆಯನ್ನು ಸಾಧಿಸಬೇಕು. ಆಗಷ್ಟೇ ನಿಮ್ಮ ಲೆಕ್ಕವಿಲ್ಲದಷ್ಟು ಗಂಟೆಗಳ ಅಧ್ಯಯನ, ಪರಿಶೋಧನೆಗೆ ಬೆಲೆ ಸಿಗುವುದು. ಇದು ನಿಮ್ಮ ವೈಯಕ್ತಿಕ ಬೆಳವಣಿಗೆಗೂ ಕಾರಣವಾಗಲಿದೆ. ಇಂದು ಪದವಿ ಪಡೆದ ಪ್ರತಿಯೊಬ್ಬರಿಗೂ ಅಭಿನಂದನೆಗಳು. ನಿಮ್ಮ ಮುಂದಿನ ಪ್ರಯತ್ನಗಳಿಗೆ ನಮ್ಮ ಶುಭ ಹಾರೈಕೆ ಇರಲಿದೆ ಎಂದರು.

  ಇದೇ ವೇಳೆ ಎಂ.ಎಸ್. ರಾಮಯ್ಯ ಯೂನಿವರ್ಸಿಟಿ ಅಪ್ಲೈಡ್ ಸೈನ್ಸ್ ಕೇವಲ ಪದವಿ ನೀಡುವುದಷ್ಟೇ ಅಲ್ಲ, ಭವಿಷ್ಯದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರ ತೆರೆಯುವ ಯೋಜನೆ ಹೊಂದಿದೆ. ಇದರಿಂದ ಉದ್ಯೋಗ ವಂಚಿತರಗೆ ಪೂರಕ ಕೌಶಲ್ಯ ತರಬೇತಿ ನೀಡುವ ಮೂಲಕ ಸ್ವ ಉದ್ಯೋಗಕ್ಕೆ ಪ್ರೋತ್ಸಾಹ ನೀಡಲಾಗುವುದು. ಶಿಕ್ಷಣದ ಜೊತೆ ಉದ್ಯೋಗಾವಕಾಶ ಕಲ್ಪಿಸುವತ್ತ ನಮ್ಮ ಮುಂದಿನ ಹೆಜ್ಜೆ ಎಂದು ಹೇಳಿದರು.

  ಅತಿಥಿಗಳಾಗಿ ಭಾಗವಹಿಸಿದ್ದ ಅಮೆರಿಕದ ಟೆಕ್ಸಾಸ್‌ನ ಎ ಆ್ಯಂಡ್ ಎಂ ವಿವಿಯ ಗೌರವ ಪ್ರಾಧ್ಯಾಪಕ ಹಾಗೂ ನ್ಯಾಷನಲ್ ಅಕಾಡೆಮಿ ಆ್ ಇಂಜಿನಿಯರಿಂಗ್ ಸದಸ್ಯ ಪ್ರೊ. ಜೆ.ಎನ್. ರೆಡ್ಡಿ ಮಾತನಾಡಿ, ಜೀವನದಲ್ಲಿ ಉತ್ತಮ ಶಿಕ್ಷಣ ಹಾಗೂ ಪದವಿಯ ಮಹತ್ವ ವಿವರಿಸುತ್ತ, ಪದವಿ ಎನ್ನುವುದು ಪೋಷಕರು, ಅಧ್ಯಾಪಕರು ಹಾಗೂ ನಿಮ್ಮ ವೈಯಕ್ತಿಕ ಶ್ರಮಕ್ಕೆ ಸಿಗುವ ಲ. ಇಲ್ಲಿಗೆ ಎಲ್ಲವೂ ಮುಗಿಯಿತು ಎಂದಲ್ಲ. ದೊಡ್ಡ ಕನಸುಗಳೊಂದಿಗೆ ಮುಂದೆ ಸಾಗಿರಿ. ಈ ಹಾದಿಯಲ್ಲಿ ವೈಲ್ಯಗಳಿಗೆ ಕುಗ್ಗದೆ ಮುಂದೆ ಸಾಗಿದರೆ ಅದು ನಿಮ್ಮ ಯಶಸ್ಸಿಗೆ ಸೋಪಾನ ಆಗಲಿದೆ ಎಂದರು.

  ವೈಯಕ್ತಿಕವಾಗಿ ನೀವು ಏನೇ ಸಾಧಿಸಿದರು ಅದು ಮುಖ್ಯವಾಗುವುದಿಲ್ಲ. ಆ ಸಾಧನೆಯಿಂದ ಸಮಾಜಕ್ಕೆ ಏನನ್ನು ಕೊಡುವಿರಿ ಎಂಬುದರ ಅದರ ಅದು ನಿಂತಿರುತ್ತದೆ. ಹಾಗಾಗಿ ನೀವು ಮಾಡುವ ಯಾವುದೇ ಕೆಲಸವಾದರೂ ಅದರ ಬಗ್ಗೆ ಹೆಮ್ಮೆ ಪಡಿ. ಕಷ್ಟಪಟ್ಟು ಎನ್ನುವುದಕ್ಕಿಂತ ಇಷ್ಟಪಟ್ಟು ಮಾಡಿರಿ. ಈ ಹಾದಿಯಲ್ಲಿ ನಿಮ್ಮ ಸುತ್ತಮುತ್ತಲು ಇರುವವರೊಂದಿಗೆ ವಿನಯದಿಂದ ನಡೆದುಕೊಳ್ಳಿ ಎಂದು ಕಿವಿಮಾತು ಹೇಳಿದರು.

  ಪದವಿ ಪ್ರದಾನ: ರಾಮಯ್ಯ ಯೂನಿವರ್ಸಿಟಿ ಆ್ ಅಪ್ಲೈಡ್ ಸೈನ್ಸ್‌ನ 8ನೇ ಘಟಿಕೋತ್ಸವದಲ್ಲಿ 1,864 ವಿದ್ಯಾರ್ಥಿಗಳು ಪದವಿಗೆ ಅರ್ಹರಾಗಿದ್ದಾರೆ. ಇವರಲ್ಲಿ 23 ಪಿಎಚ್.ಡಿ, ಒಂದು ಎಂ.ಎಸ್. (ಸಂಶೋಧನೆ) ಪದವಿ ಪ್ರದಾನ ಮಾಡಲಾಯಿತು. ಇದೇ ವೇಳೆ ಶೈಕ್ಷಣಿಕ ಸಾಧನೆಗಾಗಿ 37 ವಿದ್ಯಾರ್ಥಿಗಳಿಗೆ ‘ಡಾ. ಎಂ.ಎಸ್. ರಾಮಯ್ಯ ಚಿನ್ನದ ಪದಕ’ ಹಾಗೂ 37 ವಿದ್ಯಾರ್ಥಿಗಳಿಗೆ ‘ಶ್ರೀಮತಿ ವೆಂಕಟಮ್ಮ ರಾಮಯ್ಯ ಬೆಳ್ಳಿ ಪದಕ’ ಹಾಗೂ 9 ವಿದ್ಯಾರ್ಥಿಗಳಿಗೆ ಅತ್ಯುತ್ತಮ ಪ್ರಬಂಧಕ್ಕಾಗಿ ‘ಶ್ರೀಮತಿ ಗೌರಮ್ಮ ರಾಮಯ್ಯ ಬೆಳ್ಳಿ ಪದಕ’ ಪಡೆದುಕೊಂಡರು. ಪದಕ ಪಡೆದ 83 ವಿದ್ಯಾರ್ಥಿಗಳಲ್ಲಿ 55 ಮಂದಿ ಮಹಿಳೆಯರು ಎನ್ನುವುದು ವಿಶೇಷ.

  ಕಾರ್ಯಕ್ರಮದಲ್ಲಿ ಎಂಎಸ್‌ಆರ್‌ಯುಎಎಸ್‌ನ ಉಪಕುಲಪತಿ ಪ್ರೊ. ಕುಲದೀಪ್ ಕುಮಾರ್ ರೈನಾ, ಡಾ. ಅನಿತಾ ರಾಮಲಿಂಗಂ, ನಿದೇಶಕರು, ಟ್ರಸ್ಟಿಗಳು ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts