More

    ಯಕ್ಷಗಾನದ ಪಾರಂಪರಿಕ ಮೌಲ್ಯಗಳನ್ನು ಗೌರವಿಸಿ

    ಶೃಂಗೇರಿ: ಯಕ್ಷಗಾನ ಕರಾವಳಿ ಕಲೆಯಾದರೂ ಮಲೆನಾಡಿನಲ್ಲಿ ಆಳವಾದ ಬೇರು ಹೊಂದಿದೆ. ಇಲ್ಲಿನ ಹಲವು ಕಲಾವಿದರು ಕ್ಷೇತ್ರಕ್ಕೆ ನೀಡಿದ ಕೊಡುಗೆ ಸ್ಮರಣೀಯ. ಇಂತಹ ಕಲಾವಿದರ ನೆನಪು ಚಿರಸ್ಥಾಯಿಯಾಗಿ ಉಳಿಯಲು ಯಕ್ಷಗಾನದ ಪಾರಂಪರಿಕ ಮೌಲ್ಯಗಳನ್ನು ಗೌರವಿಸಬೇಕು ಎಂದು ಕಲಾವಿದ ನಾಗೇಶ್ ಕಾಮತ್ ತಿಳಿಸಿದರು.

    ಶೃಂಗೇರಿ ಶ್ರೀ ಭಾರತೀತೀರ್ಥ ಸಾಂಸ್ಕೃತಿಕ ಟ್ರಸ್ಟ್ ಆಯೋಜಿಸಿದ್ದ ನಲ್ಲೂರು ಮರಿಯಪ್ಪ ಆಚಾರ್ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

    ಕುಂಜಾಲು ಪರಂಪರೆಯ ಮೇರು ವಕ್ತಾರರಾಗಿದ್ದ ನಲ್ಲೂರು ಮರಿಯಪ್ಪ ಆಚಾರ್ 50ಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗವನ್ನು ಕಂಠಸ್ಥ ಮಾಡಿದ್ದರು. ಮೂರನೇ ತರಗತಿ ಓದಿದ್ದ ಮರಿಯಪ್ಪ ಆಚಾರ್ ತನ್ನ ಪ್ರತಿಭೆಯಿಂದ 600ಕ್ಕೂ ಹೆಚ್ಚು ವಿದೇಶ ಪ್ರವಾಸ ಕೈಗೊಂಡು ಮಲೆನಾಡಿನ ಕಲಾ ಕೀರ್ತಿಯನ್ನು ಉನ್ನತ ಮಟ್ಟಕ್ಕೆ ಏರಿಸಿದರು. ಮಲೆನಾಡಿನ ಪ್ರಸಿದ್ಧ ಕಲಾವಿದರಾಗಿದ್ದ ಮರಿಯಪ್ಪ ಆಚಾರ್ ನಡುತಿಟ್ಟಿನ ಸಂಪ್ರದಾಯದ ಮಹತ್ವದ ಕೊಂಡಿಯಾಗಿದ್ದರು ಎಂದರು.

    ನಲ್ಲೂರು ಮರಿಯಪ್ಪ ಆಚಾರ್ ಪ್ರಶಸ್ತಿ ಸ್ವೀಕರಿಸಿ ಎಂ.ಎಸ್ ಜನಾರ್ದನ್ ಮಾತನಾಡಿ, ಮಲೆನಾಡಿನಲ್ಲಿ ನೂರಾರು ಯಕ್ಷಗಾನ ಕಲಾವಿದರು ಸೇವೆ ಸಲ್ಲಿಸಿದ್ದರೂ ಅವರು ಅಜ್ಞಾತರಾಗಿ ಉಳಿದಿದ್ದಾರೆ. ಈ ಭಾಗದ ಯಕ್ಷಗಾನ ಕಲಾವಿದರನ್ನು ಮುನ್ನೆಲೆಗೆ ತರುವಲ್ಲಿ ಭಾರತೀ ತೀರ್ಥ ಸಾಂಸ್ಕೃತಿಕ ಸಂಸ್ಥೆ ಸದಾ ಕಾರ್ಯತತ್ಪರವಾಗಿದೆ. ತನ್ನ ಕಲಾ ಸೇವೆಗೆ ಹೊನ್ನವಳ್ಳಿಯ ವೆಂಕಟೇಶ್ವರ ಯಕ್ಷಗಾನ ಸಂಘದ ವೇದಿಕೆ ಪ್ರಮುಖ ಕಾರಣ. ಯಕ್ಷಗಾನ ಕಲೆ ಯುವ ಜನತೆ ತಲುಪಬೇಕಿದೆ. ಇದಕ್ಕಾಗಿ ತನ್ನ ಸೇವೆ ಮುಂದುವರಿಸಲಾಗುವುದು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts