ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಮತ್ತೆ ಮೈದಾನದಲ್ಲಿ ನೋಡಲು ಅವರ ಅಭಿಮಾನಿಗಳ ಜೊತೆಗೆ ಎಲ್ಲಾ ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಕಳೆದ ಐಪಿಎಲ್ನಲ್ಲಿ ಮಾಹಿ ಉತ್ತವಾಗಿಯೇ ಬ್ಯಾಟಿಂಗ್ ಮಾಡಿದರು. ಕೊನೆಯ ಓವರ್‌ಗಳಲ್ಲಿ ಬ್ಯಾಟಿಂಗ್‌ಗೆ ಆಗಮಿಸುತ್ತಿದ್ದ ಧೋನಿ, ಧನಾಧನ್ ಇನ್ನಿಂಗ್ಸ್‌ನಿಂದ ಮಿಂಚುತ್ತಿದ್ದರು. ಧೋನಿ ಅವರ ಬ್ಯಾಟಿಂಗ್ ವಿಂಟೇಜ್ ಧೋನಿಯನ್ನು ನೆನಪಿಸುವಂತಿತ್ತು. ಸಿಎಸ್ಕೆ ಪ್ಲೇಆಫ್ ತಲುಪದಿದ್ದರೂ, ಮಹಿ ತಮ್ಮ ಪ್ರದರ್ಶನದಿಂದ ಅಭಿಮಾನಿಗಳಿಗೆ ಪೂರ್ಣ ಮನರಂಜನೆಯನ್ನು ನೀಡಿದರು.
ಧೋನಿ ಅವರು ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದು ಗೊತ್ತೇ ಇದೆ. ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅದರಿಂದ ಚೇತರಿಸಿಕೊಂಡ ನಂತರ, ಕಳೆದ ವರ್ಷ ಐಪಿಎಲ್ನಲ್ಲಿ ಆಡಿದರು. ಆದರೆ, ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ, ಐಪಿಎಲ್‌ನ ಕೊನೆಯ ಎರಡು ಓವರ್‌ಗಳಲ್ಲಿ ಅವರು ಬ್ಯಾಟಿಂಗ್‌ಗೆ ಬರುತ್ತಿದ್ದರು. ಹೆಚ್ಚು ಹೊತ್ತು ಬ್ಯಾಟಿಂಗ್ ಮಾಡಲು ದೇಹ ಸಹಕರಿಸದ ಕಾರಣ ಅವರು ಈ ನಿರ್ಧಾರ ಕೈಗೊಂಡಿದ್ದರು.
ಸದ್ಯ ಮುಂದಿನ ಸೀಸನ್‌ನಲ್ಲಿ ಧೋನಿ ಆಡುತ್ತಾರಾ? ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಈಗಾಗಲೇ ಮೂರು ಮತ್ತು ನಾಲ್ಕು ಸೀಸನ್‌ಗಳಿಂದ ಅವರು ಐಪಿಎಲ್‌ನಿಂದ ನಿವೃತ್ತಿಯಾಗುವ ವದಂತಿಗಳಿವೆ. ಈಗಾಗಲೇ ರುತುರಾಜ್ ಗಾಯಕ್ವಾಡ್ ಸಿಎಸ್ಕೆ ನಾಯಕರಾಗಿ ಒಂದು ಸೀಸನ್ ಮುಗಿಸಿದ್ದಾರೆ. ಹೀಗಾಗಿ ಧೋನಿ ಲೀಗ್‌ಗೆ ವಿದಾಯ ಹೇಳಲಿದ್ದಾರೆ ಎಂಬ ಮಾತುಗಳಿಗೆ ಹೆಚ್ಚಿನ ಬಲ ಬಂದಿದೆ. ಈ ಹಿನ್ನಲೆಯಲ್ಲಿ ಐಪಿಎಲ್-2025ರ ಬಗ್ಗೆ ಧೋನಿ ಇದೀಗ ಬಿಗ್ ಅಪ್‌ಡೇಟ್ ನೀಡಿದ್ದಾರೆ.
ಐಪಿಎಲ್-2025 ಇನ್ನೂ ಬಹಳ ಸಮಯವಿದೆ. ಆಟಗಾರರನ್ನು ಉಳಿಸಿಕೊಳ್ಳುವ ನಿಯಮ ಹಾಗೂ ಮತ್ತಿತರ ವಿಚಾರಗಳಲ್ಲಿ ಬಿಸಿಸಿಐ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ. ಈಗ ಯಾವುದೇ ನಿರ್ಧಾರ ಕೈಗೊಳ್ಳುವುದು ಮಂಡಳಿಯ ಕೈಯಲ್ಲಿದೆ. ಆದ್ದರಿಂದ ಎಲ್ಲ ನಿಯಮಗಳು ಮತ್ತು ನಿಬಂಧನೆಗಳು ಅಂತಿಮಗೊಂಡ ನಂತರ, ಲೀಗ್ ಅನ್ನು ಮುಂದುವರಿಸಬೇಕೇ? ಬೇಡವೇ ಎಂಬ ವಿಷಯವನ್ನು ನಾನು ವಿಷಯವನ್ನು ನಿರ್ಧರಿಸುತ್ತೇನೆ. ಆದರೆ, ನಾನು ಯಾವುದೇ ನಿರ್ಧಾರ ತೆಗೆದುಕೊಂಡರೂ ಅದು ತಂಡದ ಹಿತದೃಷ್ಟಿಯಿಂದ ಇರಬೇಕು. ತಂಡಕ್ಕೆ ಏನು ಒಳ್ಳೆಯದೋ ಅದನ್ನು ಮಾಡುತ್ತೇನೆ ಎಂದು ಧೋನಿ ಸ್ಪಷ್ಟಪಡಿಸಿದ್ದಾರೆ.
ಅಂದಹಾಗೆ ಮುಂದಿನ ಐಪಿಎಲ್ ಸೀಸನ್‌ನಲ್ಲಿ ಆಡುವ ಬಗ್ಗೆ ಮಹಿ ಖಚಿತವಾಗಿ ಹೇಳಿಲ್ಲ. ಮಹಿ ಆಡಲು ಬಯಸುತ್ತಾರೆ. ಆದರೆ, ಇದು ಆಟಗಾರರ ಉಳಿಸಿಕೊಳ್ಳುವಿಕೆ ಮತ್ತು ಇತರ ಅಂಶಗಳ ವಿಷಯದಲ್ಲಿ ಬಿಸಿಸಿಐ ತೆಗೆದುಕೊಳ್ಳುವ ನಿರ್ಧಾರಗಳನ್ನು ಅವಲಂಬಿಸಿರುತ್ತದೆ ಎಂದು ಧೋನಿ ಹೇಳಿದರು. ಮುಂದಿನ ದಿನಗಳಲ್ಲಿ ಧೋನಿ ಆಡುತ್ತಾರಾ? ಇಲ್ಲವಾ? ಎಂಬುದು ಸ್ಪಷ್ಟವಾಗಲಿದೆ. (ಏಜೆನ್ಸೀಸ್)
ಸೂರ್ಯಕುಮಾರ್, ರಿಂಕು ರೀತಿ ಮತ್ತೊಬ್ಬ ಬ್ಯಾಟರ್ನನ್ನು ಬೌಲರ್ ಆಗಿ ಬದಲಾಯಿಸಿದ ಗೌತಮ್ ಗಂಭೀರ್!
ಕಾವ್ಯಾ ಬೇಡಿಕೆ ಬೆನ್ನಲ್ಲೇ ಐಪಿಎಲ್ನಲ್ಲಿ ಮಹತ್ವದ ಬದಲಾವಣೆ: ಈ ತಪ್ಪು ಮಾಡಿದ್ರೆ 2 ವರ್ಷ ಬ್ಯಾನ್ ಫಿಕ್ಸ್!
ದಿನಕ್ಕೆ 300 ರೂ. ದುಡಿಯುತ್ತಿದ್ದವನಿಗೆ ಖುಲಾಯಿಸಿತು ಲಕ್! ರಾತ್ರೋರಾತ್ರಿ ಅರ್ಧಕೋಟಿ ಒಡೆಯನಾದ ಕಾರ್ಮಿಕ