VIDEO: 00.08 ಸೆಕೆಂಡ್​ಗಳಲ್ಲಿ ಧೋನಿ ಮಾಡಿದ ಸ್ಟಂಪ್ ಕಂಡು​ ಬೆರಗಾದ್ರು ಫ್ಯಾನ್ಸ್​!

ಮುಂಬೈ: ಇಲ್ಲಿನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಪ್ರವಾಸಿ ವೆಸ್ಟ್​​ ಇಂಡೀಸ್​ ವಿರುದ್ಧ ಸೋಮವಾರ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ಅಮೋಘ ಗೆಲವು ಸಾಧಿಸುವ ಮೂಲಕ ಸರಣಿಯಲ್ಲಿ ಮುನ್ನಡೆ ಕಾಯ್ದುಕೊಂಡಿರುವ ಟೀಂ ಇಂಡಿಯಾ ಸರಣಿ ಗೆಲುವಿನ ಮುನ್ಸೂಚನೆ ನೀಡಿದೆ.

ನಿನ್ನೆ ನಡೆದ ಪಂದ್ಯದಲ್ಲಿ ವಿಕೆಟ್​ ಕೀಪರ್​ ಧೋನಿ ಮಾಡಿದ ಸ್ಟಂಪ್​​​ ಕ್ರೀಡಾಭಿಮಾನಿಗಳ ಹುಬ್ಬೇರುವಂತೆ ಮಾಡಿದೆ. ಕೇವಲ 00.08 ಸೆಕೆಂಡ್​ನಲ್ಲಿ, ಶರವೇಗದಲ್ಲಿ ಸ್ಟಂಪ್​ ಮಾಡಿ ಮತ್ತೊಮ್ಮೆ ತಮ್ಮ ಸಾಮರ್ಥ್ಯ ಏನೆಂಬುದನ್ನು ಸಾಬೀತು ಮಾಡಿದ್ದಾರೆ.

ರವೀಂದ್ರ ಜಡೇಜಾ ಅವರು ಎಸೆದ ಓವರ್​ನಲ್ಲಿ ಕೆರೆಬಿಯನ್​ ಆಟಗಾರ ಕೀಮೋ ಪೌಲ್​​ ರಕ್ಷಣಾತ್ಮಕ ಆಟವಾಡಲು ಮುಂದಾದಾಗ ಬ್ಯಾಟ್​ನಿಂದ ತಪ್ಪಿಸಿಕೊಂಡ ಬಾಲ್​ ಧೋನಿ ಕೈಗೆ ತಲುಪಿದೆ. ಪೌಲ್​ ಹಿಂದೆ ತಿರುಗುವಷ್ಟರಲ್ಲಿ ಧೋನಿ ಸ್ಟಂಪ್​ ಮಾಡಿದ್ದನ್ನು ಕಂಡು ಸ್ವತಃ ಪೌಲ್​ ಅಂಪೈರ್​ ತೀರ್ಮಾನಕ್ಕಾಗಿ ಕಾಯದೆ ಫೆವಲಿಯನ್​​ ಕಡೆ ಮುಖ ಮಾಡಿದರು.​

ಏಕದಿನ ಇತಿಹಾಸದಲ್ಲಿ 115 ಸ್ಟಂಪ್​ ಮಾಡಿದ ಕೀರ್ತಿಯನ್ನು ಕೂಲ್​ ಕ್ಯಾಪ್ಟನ್​ ಹೊಂದಿದ್ದಾರೆ. (ಏಜೆನ್ಸೀಸ್​)

ವಿಂಡೀಸ್ ಎದುರು ರೋಹಿತ್​ಗೆ 9 ರನ್ ಜಯ!