21.7 C
Bengaluru
Tuesday, January 21, 2020

ವಿಶ್ವಕಪ್​ ನಂತರ ಮಹೇಂದ್ರ ಸಿಂಗ್​ ಧೋನಿ ನಿವೃತ್ತಿ ಪಕ್ಕಾನಾ ಅಥವಾ ಇದೊಂದು ಊಹಾಪೋಹನಾ?

Latest News

ಉಬರ್ ಈಟ್ಸ್​ ವ್ಯವಹಾರ ಸ್ವಾಧೀನ ಪಡಿಸಿಕೊಂಡ ಜೊಮ್ಯಾಟೋ | ಭಾರತದಲ್ಲಿ ವಹಿವಾಟು ಕೊನೆಗೊಳಿಸಿದ ಉಬರ್ ಈಟ್ಸ್​

ನವದೆಹಲಿ: ಆಲ್ ಸ್ಟಾಕ್ ಡೀಲ್ ಮೂಲಕ ಉಬರ್ ಈಟ್ಸ್​ನ ವ್ಯವಹಾರವನ್ನು ಭಾರತದಲ್ಲಿ ಸಂಪೂರ್ಣವಾಗಿ ಸ್ವಾಧೀನ ಪಡಿಸಿಕೊಂಡಿರುವುದಾಗಿ ಜೊಮ್ಯಾಟೋ ಮಂಗಳವಾರ ಘೋಷಿಸಿದೆ. ಈ ಮೂಲಕ...

ಪರ್ಲ್ ಅಗ್ರೋಟೆಕ್ ಕಾಪೋರೇಶನ್ ಲಿಮಿಟೆಡ್ (ಪಿಎಸಿಎಲ್) ಹೂಡಿಕೆದಾರರಿಗೆ ಹಣ ವಾಪಸ್

ಬೆಂಗಳೂರು: ಪರ್ಲ್ ಅಗ್ರೋಟೆಕ್ ಕಾಪೋರೇಶನ್ ಲಿಮಿಟೆಡ್ (ಪಿಎಸಿಎಲ್) ನಲ್ಲಿ ಹೂಡಿಕೆ ಮಾಡಿದ್ದವರು ಹಣ ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ. ವಂಚನೆಗೆ ಒಳಗಾದ ದೂರುದಾರರು ಜು.31ರವರೆಗೆ ಅರ್ಜಿ ಸಲ್ಲಿಸಬಹುದು. ದೇಶವ್ಯಾಪಿ...

ಚಿತ್ರದುರ್ಗ: ರಾಜ್ಯ ಕಟ್ಟಡ ಹಾಗೂ ಇತರೆ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕರು ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದರು. ಹಳೇ ಮಿಡ್ಲ್...

ಯಾದಗಿರಿ ಬಸ್​ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್​ ಪತ್ತೆ; ಆತಂಕವಿಲ್ಲ ಎಂದ ತಪಾಸಣೆ ನಡೆಸಿದ ಪೊಲೀಸರು

ಯಾದಗಿರಿ: ಇಲ್ಲಿನ ಕೇಂದ್ರ ಬಸ್​ನಿಲ್ದಾಣ ಮತ್ತು ಅಜೀಜ್​ ಮಸೀದಿ ಬಳಿ ತಲಾ ಒಂದೊಂದು ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿದ್ದು ಆತಂಕ ಸೃಷ್ಟಿಯಾಗಿತ್ತು. ಮಂಗಳೂರಿನಲ್ಲಿ ಬಾಂಬ್ ಪತ್ತೆ ಹಿನ್ನೆಲೆಯಲ್ಲಿ...

ಸೆನ್ಸೆಕ್ಸ್​ 200ಕ್ಕೂ ಹೆಚ್ಚು ಅಂಶ ಕುಸಿತ; ನಿಫ್ಟಿ 12,200ರಲ್ಲಿ ವಹಿವಾಟು ಶುರು

ಮುಂಬೈ: ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ (ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ (ಎನ್​ಎಸ್​ಇ) ಸೂಚ್ಯಂಕ ನಿಫ್ಟಿ50ಗಳು ಮಂಗಳವಾರದ ವಹಿವಾಟನ್ನು ಕುಸಿತದೊಂದಿಗೆ...

ಬರ್ಮಿಂಗ್​ಹ್ಯಾಂ: ವಿಶ್ವಕಪ್​ ಮುಗಿಯುತ್ತಿದ್ದಂತೆ ಮಹೇಂದ್ರ ಸಿಂಗ್​ ಧೋನಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್​ನಿಂದ ನಿವೃತ್ತಿ ಪಡೆಯುತ್ತಾರೆ ಎಂಬಂತಹ ವರದಿಗಳು ಈಗಾಗಲೇ ಹರಿದಾಡುತ್ತಿದ್ದು ಇದು ಅವರ ಅಭಿಮಾನಿಗಳಲ್ಲಿ ಬೇಸರವನ್ನೂ ಉಂಟುಮಾಡಿದೆ.

ಟೀಂ ಇಂಡಿಯಾದ ಮಾಜಿ ನಾಯಕ, ತಮ್ಮ ವಿಕೆಟ್​ ಕೀಪಿಂಗ್​ ಚಾಕಚಕ್ಯತೆಯಿಂದ ಕ್ರಿಕೆಟ್​ ಪ್ರೇಮಿಗಳ ಮನಗೆದ್ದಿರುವ ಮಹೇಂದ್ರ ಸಿಂಗ್​ ಧೋನಿ ನಿವೃತ್ತರಾಗಿಬಿಡುತ್ತಾರಾ ಎಂಬ ಅಳುಕು ಅದೆಷ್ಟೋ ಜನರಲ್ಲಿದೆ. ಅನೇಕರು ಟ್ವೀಟ್​ ಮೂಲಕವೂ ಅದನ್ನು ಪ್ರಶ್ನೆ ಮಾಡಿದ್ದಾರೆ. ನಮಗೆ ನೀವು ಇಷ್ಟು ಬೇಗ ನಿವೃತ್ತಿ ಪಡೆಯುವುದು ಇಷ್ಟವಿಲ್ಲ. ಇನ್ನಷ್ಟು ದಿನ ನಿಮ್ಮ ಆಟ ನೋಡಬೇಕು ಎಂದೆಲ್ಲ ಟ್ವೀಟ್​, ಕಾಮೆಂಟ್​ಗಳನ್ನು ಮಾಡಿದ್ದರು.

ಮಹೇಂದ್ರ ಸಿಂಗ್​ ಧೋನಿ ನಿವೃತ್ತಿಯನ್ನು ವಿರೋಧಿಸುತ್ತಿರುವವರಿಗೆ ಈಗೊಂದು ಸಿಹಿಸುದ್ದಿ ಸಿಕ್ಕಿದೆ. ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳುವುದು ಒಂದು ಊಹೆಯ ವರದಿಯಷ್ಟೇ. ಅಧಿಕೃತವಲ್ಲ. ಇವತ್ತಿನವರೆಗೆ ಧೋನಿ ಆ ಬಗ್ಗೆ ಎಲ್ಲಿಯೂ ಹೇಳಿಲ್ಲ ಎಂಬುದೂ ವರದಿಯಾಗಿದೆ.

ಧೋನಿ 2014ರಲ್ಲಿ ಟೆಸ್ಟ್​ ಕ್ರಿಕೆಟ್​ನಿಂದ ನಿವೃತ್ತಿ ಪಡೆದಿದ್ದರು. 2017ರ ಜನವರಿಯಲ್ಲಿ ನಾಯಕ ಸ್ಥಾನವನ್ನೂ ತೊರೆದಿದ್ದರು. ಆದರೆ, ಅವರು ತಂಡದ ಅವಿಭಾಜ್ಯ ಅಂಗದಂತೆ ಇದ್ದಾರೆ. ವಿಶ್ವಕಪ್​ ಕೊನೇ ಪಂದ್ಯವೇ ಮಹೇಂದ್ರ ಸಿಂಗ್​ ಧೋನಿ ಅವರ ಕೊನೇ ಪಂದ್ಯವೂ ಆಗಲಿದೆ ಎಂಬುದಕ್ಕೆ ಎಲ್ಲಿಯೂ ಅಧಿಕೃತ ಮಾಹಿತಿ ಸಿಕ್ಕಿಲ್ಲ ಎಂದು ಪಿಟಿಐ ವರದಿ ಮಾಡಿದೆ.

ಮಹೇಂದ್ರ ಸಿಂಗ್​ ಧೋನಿ ಅವರನ್ನು ಹೀಗೆ ಎಂದು ಹೇಳಲು ಸಾಧ್ಯವಿಲ್ಲ. ವಿಶ್ವಕಪ್​ ನಂತರ ಅವರು ಆಟ ಮುಂದುವರಿಸುವುದು ಅಸಂಭವವೂ ಇರಬಹುದು. ಧೋನಿಯವರು ಮೂರೂ ವಿಧದ ಕ್ರಿಕೆಟ್​ನಲ್ಲಿ ನಾಯಕತ್ವ ತೊರೆಯುವ ನಿರ್ಧಾರವನ್ನು ಇದ್ದಕ್ಕಿದ್ದಂತೆ ತೆಗೆದುಕೊಂಡಿದ್ದರು. ಹಾಗಾಗಿ ಏನನ್ನೂ ಊಹಿಸಲು ಸಾಧ್ಯವಿಲ್ಲ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೋರ್ವರು ಹೇಳಿದ್ದರು. ಆದರೆ ಧೋನಿ ನಿವೃತ್ತಿ ಪಡೆಯುತ್ತಾರೆ ಎಂದು ಇದುವರೆಗೆ ಟೀಂ ಮ್ಯಾನೇಜ್​ಮೆಂಟ್​ ಆಗಲೀ, ಬಿಸಿಸಿಐ ಆಗಲೀ ಎಲ್ಲಿಯೂ ಅಧಿಕೃತವಾಗಿ, ನಿಖರವಾಗಿ ಹೇಳಿಲ್ಲ. ಅದರಲ್ಲೂ ಧೋನಿ ಕೂಡ ಈ ಬಗ್ಗೆ ಏನೂ ಹೇಳಿಲ್ಲ ಎಂದು ಮೂಲಗಳು ತಿಳಿಸಿವೆ.

ವಿಡಿಯೋ ನ್ಯೂಸ್

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...

VIDEO| ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ;...

ಮಂಗಳೂರು: ಬಜಪೆ ಬಳಿಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಶ್ರಾಂತಿ ಜಾಗದಲ್ಲಿ ಅನುಮಾನಾಸ್ಪದ ಬ್ಯಾಗ್​ನಲ್ಲಿ ಸಜೀವ ಬಾಂಬ್​ ಪತ್ತೆಯಾಗಿದೆ. ಏರ್ ಪೋರ್ಟ್ ಹೊರಭಾಗದಲ್ಲಿರುವ ಪ್ರಯಾಣಿಕರ ವಿಶ್ರಾಂತಿ ಜಾಗದಲ್ಲಿ ಬ್ಯಾಗ್​ ಪತ್ತೆಯಾಗಿದ್ದು, ಬೆಳಗ್ಗೆ 10.30ರಿಂದ ಅದು...

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...