ಕ್ರಿಕೆಟ್​ ಒಂದೇ ಅಲ್ಲ ಟೆನಿಸ್​ನಲ್ಲೂ ಮಾಹಿ ಚಾಂಪಿಯನ್​

ರಾಂಚಿ: ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್​, ಕ್ಯಾಪ್ಟನ್​ ಕೂಲ್​ ಎಂದೇ ಖ್ಯಾತರಾಗಿರುವ ಎಂ. ಎಸ್​. ಧೋನಿ ಕ್ರಿಕೆಟ್​ನಿಂದ ಬಿಡುವು ಸಿಕ್ಕಾಗಲೆಲ್ಲಾ ಫುಟ್​ಬಾಲ್​ ಸೇರಿ ಇತರೆ ಆಟಗಳನ್ನೂ ಆಡುತ್ತಾರೆ ಎಂಬುದು ಗೊತ್ತಿರುವ ವಿಷಯ. ರಾಂಚಿಯ ಟೆನಿಸ್​ ಚಾಂಪಿಯನ್​ಷಿಪ್​ವೊಂದರಲ್ಲಿ ಡಬಲ್ಸ್​ ವಿಭಾಗದಲ್ಲಿ ಪ್ರಶಸ್ತಿ ಜಯಿಸುವ ಮೂಲಕ ಮಾಹಿ ತಮ್ಮ ಟೆನಿಸ್​ ಜ್ಞಾನವನ್ನು ಜಗಜ್ಜಾಹಿರುಗೊಳಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗದೆ ರಾಂಚಿಯಲ್ಲೇ ಉಳಿದಿರುವ ಧೋನಿ, ರಾಂಚಿಯ ಜೆಎಸ್​ಸಿಎ ಕಂಟ್ರಿ ಕ್ರಿಕೆಟ್​ ಕ್ಲಬ್​ ಟೆನಿಸ್​ ಚಾಂಪಿಯನ್​ಷಿಪ್​ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು. ಸ್ಥಳೀಯ ಟೆನಿಸ್​ ಆಟಗಾರ ಸುಮಿತ್​ ಕುಮಾರ್​ ಅವರೊಂದಿಗೆ ಡಬಲ್ಸ್​ ವಿಭಾಗದಲ್ಲಿ ಆಡಿದ ಧೋನಿ ಟೂರ್ನಿಯ ಫೈನಲ್​ ಪಂದ್ಯದಲ್ಲಿ 6-3, 6-3 ನೇರ ಸೆಟ್​ಗಳಿಂದ ಜಯಗಳಿಸುವ ಮೂಲಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

37 ವರ್ಷದ ಧೋನಿ ಹಲವು ತಿಂಗಳುಗಳಿಂದ ರನ್​ ಗಳಿಸಲು ಪರದಾಡುತ್ತಿದ್ದಾರೆ. ಹಾಗಾಗಿ 2019ರ ವಿಶ್ವಕಪ್​ನಲ್ಲಿ ಅವರು ಭಾರತವನ್ನು ಪ್ರತಿನಿಧಿಸುತ್ತಾರಾ ಎಂಬ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಆದರೆ ನಾಯಕ ವಿರಾಟ್​ ಕೊಹ್ಲಿ, ಟೀಂ ಇಂಡಿಯಾ ಕೋಚ್​ ಮತ್ತು ಮುಖ್ಯ ಆಯ್ಕೆದಾರರು ಧೋನಿ ಪರ ಬ್ಯಾಟ್​ ಬೀಸುತ್ತಿದ್ದಾರೆ. (ಏಜೆನ್ಸೀಸ್​)

View this post on Instagram

Tennis Champion 😎❤️

A post shared by MS Dhoni / Mahi7781 (@msdhoni.fc) on