ಧೋನಿ ತಮ್ಮ ನಿವೃತ್ತಿ ನಂತರ ಏನು ಮಾಡುತ್ತಾರೆ ಗೊತ್ತಾ? ಅವರ ಮಾತಿನಲ್ಲೇ ಕೇಳಿ…

ನವದೆಹಲಿ: ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಎಂ.ಎಸ್​.ಧೋನಿ ಅವರು ತಮ್ಮ ನಿವೃತ್ತಿಯ ನಂತರದ ದಿನಗಳಲ್ಲಿ ತಾವು ಏನು ಮಾಡಬಹುದು ಎಂಬುದರ ಬಗ್ಗೆ ಹೇಳಿದ್ದು, ಅಭಿಮಾನಿಗಳನ್ನು ಚರ್ಚೆಗೆ ಒಳಪಡಿಸಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ವೈರಲ್​ ಆಗಿದ್ದು ಇದರಲ್ಲಿ ಧೋನಿ ಅವರು ತಾವು ಬರೆದ ಚಿತ್ರಗಳನ್ನು ಪ್ರದರ್ಶಿಸಿದ್ದಾರೆ.

ವಿಡಿಯೋದಲ್ಲಿ ಮೂರು ಚಿತ್ರಗಳನ್ನು ಪ್ರದರ್ಶಿಸಿದ್ದು, ನಾನು ನಿಮ್ಮೊಂದಿಗೆ ಒಂದು ರಹಸ್ಯವನ್ನು ಹಂಚಿಕೊಳ್ಳಲು ಬಯಸುತ್ತೇನೆ ಎಂದಿದ್ದು, ನಾನು ಚಿಕ್ಕವಯಸ್ಸಿನಲ್ಲಿ ಕಲಾವಿದನಾಗಬೇಕು ಎಂದು ಬಯಸಿದ್ದೆ. ಆದರೆ, ನಾನು ಸಾಕಷ್ಟು ಕ್ರಿಕೆಟ್​ ಆಟವಾಡಿದ್ದರಿಂದ ಅದರಲ್ಲೇ ಮುಂದುವರಿದೆ. ಈಗ ಕಲಾವಿದನಾಗಿ ಮುಂದುವರಿಯಲು ಇದು ಉತ್ತಮ ಸಮಯ ಎಂದು ಭಾವಿಸಿ ಕೆಲವು ಚಿತ್ರಗಳನ್ನು ರಚಿಸಿದ್ದೇನೆ ಎಂದು ತಿಳಿಸಿದ್ದಾರೆ.

ವಿಡಿಯೋದಲ್ಲಿ ಪ್ರದರ್ಶಿಸಿರುವ ಮೊದಲ ಚಿತ್ರದಲ್ಲಿ ಪರಿಸರದ ಚಿತ್ರವಿದೆ. ಎರಡನೆಯದರಲ್ಲಿ ಬಾಹ್ಯಾಕಾಶಯಾನದ ಕುರಿತು ಚಿತ್ರಿಸಲಾಗಿದೆ ಮತ್ತು ಮೂರನೆಯದು ನನ್ನ ಮೆಚ್ಚಿನ ಚಿತ್ರವಾಗಿದೆ ಎಮದಿರುವ ಅವರು ಇದರಲ್ಲಿ ಐಪಿಎಲ್​ನಲ್ಲಿ ಚೆನೈ ಸೂಪರ್​ಕಿಂಗ್ಸ್​ನ ಜೆರ್ಸಿಯಲ್ಲಿ ಬ್ಯಾಟಿಂಗ್​ ಮಾಡಿದ ಚಿತ್ರ ಎಂದಿದ್ದಾರೆ.

ಐಸಿಸಿ ವಿಶ್ವಕಪ್​ ಬಳಿಕ ಧೋನಿ ಅವರು 50 ಓವರ್​ಗಳ ಏಕದಿನ ಪಂದ್ಯಾಟಗಳಿಗೆ ನಿವೃತ್ತಿ ಘೋಷಿಸಲಿದ್ದಾರೆ ಎಂದು ತಿಳಿಸಲಾಗಿದ್ದು, ಧೋನಿ 341 ಏಕದಿನ ಪಂದ್ಯಗಳಲ್ಲಿ ಒಟ್ಟು 10,500 ರನ್​ ಗಳಿಸಿದ್ದು, 10 ಶತಕ, 71 ಅರ್ಧ ಶತಕಗಳನ್ನುಗಳಿಸಿದ್ದಾರೆ.(ಏಜೆನ್ಸೀಸ್)

Leave a Reply

Your email address will not be published. Required fields are marked *