ತುಮ್ ಹಿ ಹೋ ಮೃಣಾಲ್: ಮ್ಯೂಸಿಕಲ್ ಸಿನಿಮಾದಲ್ಲಿ ನಟಿಸಲಿದ್ದಾರೆ ಬಹುಭಾಷೆ ನಟಿ

ಮರಾಠಿಯ ‘ಹೆಲೋ ನಂದನ್’ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ, ಬಳಿಕ ಸಾಲು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ತೆಲುಗಿನ ‘ಸೀತಾ ರಾಮಂ’ ಅಭೂತಪೂರ್ವ ಯಶಸ್ಸು ತಂದುಕೊಟ್ಟಿತ್ತು. ಆದರೆ, ವಿಜಯ್ ದೇವರಕೊಂಡಗೆ ಜೋಡಿಯಾಗಿದ್ದ ‘ದ ್ಯಾಮಿಲಿ ಸ್ಟಾರ್’ ಸಿನಿಮಾ ಅಷ್ಟೇನೂ ತಕ್ಕಮಕ್ಕಟ್ಟಿಗೆ ಯಶಸ್ಸು ಕಾಣಲಿಲ್ಲ. ಆದರೂ, ನಟಿಗೆ ಅವಕಾಶಗಳೇನೂ ಕಡಿಮೆಯಾಗಿಲ್ಲ. ಹೆಚ್ಚು ಚಿತ್ರಗಳಿಗೆ ಅವಕಾಶಗಳು ಬರುತ್ತಿವೆ. ಇದರಲ್ಲಿ ಮತ್ತೊಂದು ಹಿಂದಿ ಸಿನಿಮಾ ಸೇರ್ಪಡೆಯಾಗಿದೆ. ಅದುವೇ ‘ತುಮ್ ಹಿ ಹೋ’. 2013ರಲ್ಲಿ ತೆರೆಕಂಡಿದ್ದ ಬಾಲಿವುಡ್ ‘ಆಶಿಕಿ-2’ ಚಿತ್ರದಲ್ಲಿ ‘ತುಮ್ ಹಿ ಹೋ’ ಸಾಂಗ್ ಹಿಟ್ ಆಗಿತ್ತು. ಇದೀಗ ಇದೇ ಶೀರ್ಷಿಕೆಯನ್ನು ಚಿತ್ರಕ್ಕೆ ಟೈಟಲ್ ಮಾಡಲಾಗಿದೆ. ಇದೊಂದು ಲವ್ ಆ್ಯಂಡ್ ಮ್ಯೂಸಿಕಲ್ ಸಿನಿಮಾವಾಗಿದೆ. ನಾಯಕನಟ- ನಟಿ ಇಬ್ಬರು ಸಂಗೀತ ಪ್ರೇಮಿಗಳಾಗಿ ಈ ಕಥೆಯಲ್ಲಿ ನಟಿಸಿಲಿದ್ದಾರೆ. ನಿರ್ದೇಶಕ ರವಿ ಉದ್ಯಾವರ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ನಾಯಕನಟನಾಗಿ ಸಿದ್ದಾಂತ್ ಚತುರ್ವೇದಿ ಕಾಣಿಸಿಕೊಳ್ಳಲಿದ್ದು, ಸಂಜಯ್ ಲೀಲಾ ಬನ್ಸಾಲಿ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದ ಬಹುತೇಕ ಚಿತ್ರೀಕರಣ ಉತ್ತರಾಖಂಡದಲ್ಲಿ ನಡೆಯಲಿದ್ದು, ಆಕ್ಟೋಬರ್ ಮೊದಲ ವಾರದಿಂದ ಶೂಟಿಂಗ್ ಆರಂಭವಾಗಲಿದೆ ಎಂದು ತಿಳಿದುಬಂದಿದೆ. ಮೃಣಾಲ್ ಸದ್ಯ ‘ಸರ್ದಾರ್-2’, ‘ಪೂಜಾ ಮೇರಿ ಜಾನ್‌‘ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ಸಿದ್ಧಾಂತ್ ನಟನೆಯ ‘ಯುಧ್ರ’ ಇದೇ ವಾರ ಬಿಡುಗಡೆಯಾಗಲಿದೆ- ಏಜೆನ್ಸೀಸ್.

Share This Article

ಗಂಟಲಲ್ಲಿ ಮೀನಿನ ಮುಳ್ಳು ಸಿಲುಕಿಕೊಂಡ್ರೆ ಏನು ಮಾಡ್ಬೇಕು? ಇಲ್ಲಿದೆ ನೋಡಿ ಸಿಂಪಲ್​ ಟಿಪ್ಸ್​ | Fish

ಮೀನು ( Fish ) ಗಳು ಅನೇಕ ಜನರ ನೆಚ್ಚಿನ ಆಹಾರಗಳಲ್ಲಿ ಒಂದಾಗಿದೆ. ಮೀನು ಆರೋಗ್ಯಕ್ಕೆ…

ಒಂದು ಕೈಯಲ್ಲಿ ಫೋನ್ ಹಿಡಿದುಕೊಂಡು ಸ್ಕ್ರೋಲಿಂಗ್ ಮಾಡ್ತೀರಾ?  ಇದ್ರಿಂದಲೇ ಗೊತ್ತಾಗುತ್ತದೆ ನಿಮ್ಮ Personality traits…

ಬೆಂಗಳೂರು:  ಈಗ  ಕೆಲವು ಅಧ್ಯಯನಗಳು ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು (Personality traits ) ಹುಟ್ಟಿದ ದಿನಾಂಕ, ಕಣ್ಣಿನ…

Salt Water : ಪ್ರತಿದಿನ ಬೆಳಗ್ಗೆ ಉಗುರು ಬೆಚ್ಚನೆಯ ನೀರಿನಲ್ಲಿ ಉಪ್ಪು ಹಾಕಿ ಕುಡಿದರೆ ಏನಾಗುತ್ತೆ ಗೊತ್ತಾ?

ಬೆಂಗಳೂರು: ನಾವು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ನೀರು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳುವುದು ತುಂಬಾ…