More

  ‘ಸೀತಾರಾಮಮ್’ ಚಿತ್ರದ ಮೂಲಕ ಅಭಿಮಾನಿಗಳ ಗಮನ ಸೆಳೆದ ನಟಿ ಮೃಣಾಲ್ ಮದುವೆ..! ವರ ಯಾರು ಗೊತ್ತಾ..?

  ಮೃಣಾಲ್‌ ಠಾಕುರ್‌ ‘ಸೀತಾರಾಮನ್’ ಸಿನಿಮಾ ಮೂಲಕ ಸಿನಿಮಾ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟಿದ ಮೊದಲ ಚಿತ್ರವೇ ಸೂಪರ್​ ಹಿಟ್​. ಆಯಿತು ಮೃಣಾಲ್​ ಪಡ್ಡೆ ಹುಡುಗರ ಕ್ರಶ್​​ ಆಗಿ ಬಿಟ್ಟಿದ್ದಾರೆ.


  ಇತ್ತೀಚೆಗೆ ಮದುವೆ ವಿಚಾರವಾಗಿ ಸಾಕಷ್ಟು ನಟ ನಟಿಯರ ಹೆಸರು ತಳುಕು ಹಾಕಿಕೊಳ್ಳುತ್ತಿದೆ. ಇದೀಗ ಆ ಲಿಸ್ಟ್​​​ನಲ್ಲಿ ಮೃಣಾಲ್​ ಠಾಕುರ್​​ ಹೆಸರೂ ಕೂಡಾ ಕೇಳಿ ಬರುತ್ತಿದೆ.


  ಹೌದು ಇತ್ತೀಚೆಗೆ ನಡೆದ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭದ ಸಂದರ್ಭದಲ್ಲಿ ‘ಸೀತಾರಾಮ’ ಚಿತ್ರದ ನಾಯಕಿಯಾಗಿ ಮೃಣಾಲ್ ಠಾಕೂರ್ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಅವರ ಕೈಯಿಂದ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು. ಈ ವೇಳೆ ಅಲ್ಲು ಅರವಿಂದ್ ಅವರು ಮೃಣಾಲ್ ಠಾಕೂರ್ ಬಗ್ಗೆ ಮಾತನಾಡಿದರು.


  ಈ ವೇಳೆ ಶೀಘ್ರದಲ್ಲೇ ಮೃಣಾಲ್​ ಹೈದರಾಬಾದ್‌ನ ಹುಡುಗನೊಂದಿಗೆ ಮದುವೆಯಾಗಲಿ ಎಂದು ಆಶೀರ್ವದಿಸಿದರು. ಗಮನಿಸಬೇಕಾದ ವಿಚಾರ ಅದಲ್ಲ ಈ ಹಿಂದೆ ಅಲ್ಲು ಅರವಿಂದ್ ಲಾವಣ್ಯ ತ್ರಿಪಾಠಿ ಅವರನ್ನು ಉದ್ದೇಶಿಸಿ, ಹೈದರಾಬಾದ್‌ನ ಹುಡುಗನನ್ನು ಮದುವೆಯಾಗಬೇಕೆಂದು ಹೇಳಿದ್ದರು. ಅದೇ ರೀತಿ ಲಾವಣ್ಯ ಅವರ ಮದುವೆ ನವೆಂಬರ್ 1 ರಂದು ಮೆಗಾ ಪ್ರಿನ್ಸ್ ವರುಣ್ ತೇಜ್ ಅವರೊಂದಿಗೆ ನಡೆಯಲಿದೆ.


  ಅವರ ಮಾತುಗಳು ನಿಜವಾಗಿದ್ದನ್ನ ಕಂಡು ಜನರು ಹುಬ್ಬೇರಿಸಿದ್ದಾರೆ. ಸದ್ಯ ಮೃಣಾಲ್​​​ ಕೂಡ ಹೈದರಾಬಾದ್ ಹುಡುಗನನ್ನು ಮದುವೆಯಾಗುವ ಆಶೀರ್ವಾದ ಪಡೆದಿದ್ದಾರೆ ಎಂಬುದು ಅಭಿಮಾನಿಗಳ ಕುತೂಹಲವನ್ನ ಹೆಚ್ಚಿಸಿದೆ.


  ನಿರ್ಮಾಪಕ ಅಲ್ಲು ಅರ್ವಿಂದ್​​​ ಮಾತು ಎಷ್ಟರಮಟ್ಟಿಗೆ ನಿಜವಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

  ರಾಜ್ಯೋತ್ಸವ ರಸಪ್ರಶ್ನೆ - 24

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts