ಹೊನ್ನಾಳಿ: ಮುಸ್ಲಿಂ ಸಮುದಾಯದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆಪಾದಿಸಿ ಶಾಸಕ ಎಂ.ಪಿ. ರೇಣುಕಾಚಾರ್ಯ ವಿರುದ್ಧ ಪಟ್ಟಣದಲ್ಲಿ ಶುಕ್ರವಾರ ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕುಗಳ ಮುಸ್ಲಿಮರು ಪ್ರತಿಭಟನೆ ನಡೆಸಿದರು.
ದೇವನಾಯ್ಕನಹಳ್ಳಿ ದರ್ಗಾದಿಂದ ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿ ತಹಸೀಲ್ದಾರ್ ತುಷಾರ್ ಬಿ. ಹೊಸೂರ ಅವರಿಗೆ ಮನವಿ ಸಲ್ಲಿಸಿದರು.
ಮುಸ್ಲಿಂ ಸಮುದಾಯದ ವಿರುದ್ಧ ಟೀಕೆ ಮಾಡಿ ಬಿಜೆಪಿ, ಆರ್‌ಎಸ್‌ಎಸ್ ನಾಯಕರ ಕೃಪೆಗೆ ಪಾತ್ರರಾಗಿ ಮಂತ್ರಿಗಿರಿ ಗಿಟ್ಟಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ ಎಂದು ದೂರಿದರು.
ಮಸೀದಿ ಮೌಲ್ವಿ ಮಹಮ್ಮದ್ ಇಸ್ಮಾಯಿಲ್ ಮಾತನಾಡಿ, ಇಸ್ಲಾಂ ಎಂದರೆ ಅದು ಶಾಂತಿ ಸಾರುವ ಧರ್ಮ. ಮಸೀದಿಗಳಲ್ಲಿ ಭಕ್ತಿ ಮತ್ತು ಪ್ರೀತಿ ಇಟ್ಟಿದ್ದಾರೆಯೇ ಹೊರತು ಮದ್ದುಗುಂಡುಗಳಲ್ಲ ಎಂದು ಹೇಳಿದರು.
ಮುಖಂಡ ಚೀಲೂರು ವಾಜೀದ್, ದಲಿತ ಮುಖಂಡ ಜಿ.ಎಚ್.ತಮ್ಮಣ್ಣ ಮಾತನಾಡಿ,. ತಾಪಂ ಸದಸ್ಯ ಅಬೀದ್‌ಅಲಿ ರೇಣುಕಾಚಾರ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಂದೋಬಸ್ತ್: ಪ್ರತಿಭಟನೆ ಹಿನ್ನೆಲೆಯಲ್ಲಿ ಡಿವೈಎಸ್ಪಿ ಮಂಜುನಾಥ್ ಗಂಗಲ್ ನೇತೃತ್ವದಲ್ಲಿ ಪಟ್ಟಣದಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಜಾಮೀಯಾ ಮಸೀದಿ ಅಧ್ಯಕ್ಷ ಅಬೀಬುಲ್ಲಾ ಸಾಬ್, ಪಠಾಣ್‌ವಾಡಿ ಮಸೀದಿ ಅಧ್ಯಕ್ಷ ಅಬ್ದುಲ್ ಮಜೀದ್ ಸಾಬ್, ದೇವನಾಯ್ಕನಹಳ್ಳಿ ನೂರಾನಿ ಮಸೀದಿ ಅಧ್ಯಕ್ಷ ಆಲ್ತ್ ಆಹಮ್ಮದ್, ಟಿ.ಬಿ. ಬಡಾವಣೆ ಮದೀನಾ ಮಸೀದಿ ಅಧ್ಯಕ್ಷ ನವಾಬ್‌ಖಾನ್ ಇತರರಿದ್ದರು.