ತಾಳಿಕೋಟೆ: ದೈಹಿಕ ಹಾಗೂ ಮಾನಸಿಕವಾಗಿ ಸದೃಢಗೊಳಿಸುವ ಕ್ರೀಡೆಯನ್ನು ಎಲ್ಲರೂ ಕ್ರೀಡಾ ಮನೋಭಾವದಿಂದ ಆಡಬೇಕು. ನಿರ್ಣಾಯಕರ ನಿರ್ಣಯಕ್ಕೆ ಬದ್ಧರಾಗಿ ಕ್ರೀಡೆ ಆಡಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಪಟ್ಟಣದ ಎಸ್. ಎಸ್. ವಿದ್ಯಾ ಸಂಸ್ಥೆಯ ಆವರಣದಲ್ಲಿ ರಾಜ್ಯ ಸರ್ಕಾರ, ಶಾಲಾ ಶಿಕ್ಷಣ ಇಲಾಖೆ (ಪಪೂ) ಬೆಂಗಳೂರು, ಶಾಲಾ ಶಿಕ್ಷಣ ಇಲಾಖೆ (ಪಪೂ) ವಿಜಯಪುರ ಹಾಗೂ ಶಿವಯೋಗಿ ಸಂಗಮಾರ್ಯ ವಿದ್ಯಾ ಸಂಸ್ಥೆಯ ಎಚ್.ಎಸ್.ಪಾಟೀಲ ಸ್ವತಂತ್ರ ಪದವಿ ಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 2024-25ನೇ ಸಾಲಿನ ಪದವಿಪೂರ್ವ ಕಾಲೇಜುಗಳ ಬಾಲಕ, ಬಾಲಕಿಯರ ರಾಜ್ಯಮಟ್ಟದ ವಾಲಿಬಾಲ್ ಕ್ರೀಡಾಕೂಟ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿ.ಎಸ್.ನಾಡಗೌಡ ಕ್ರೀಡಾ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ನಾವು ಇಡುವ ಭವಿಷ್ಯದ ಹೆಜ್ಜೆಗಳು ನಮ್ಮ ಇಡಿ ಭವಿಷ್ಯವನ್ನೇ ಬದಲಾಯಿಸುವಂತೆ ಇರಬೇಕು. ಪ್ರತಿ ತಾಲೂಕು ಕೇಂದ್ರಗಳಲ್ಲಿ ಕ್ರೀಡಾಂಗಣ ನಿರ್ಮಾಣವಾಗಬೇಕು. ಮುದ್ದೇಬಿಹಾಳದಲ್ಲಿಯೂ 16 ಎಕರೆ ಜಮೀನಿನಲ್ಲಿ ಕ್ರೀಡಾಂಗಣ ನಿರ್ಮಾಣ ಕಾರ್ಯ ನಡೆದಿದೆ ಎಂದರು.
ಬೆಂಗಳೂರಿನ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿ ಜೆ.ಎನ್.ಶ್ವೇತಾ ಅವರು ಹೆಜ್ಜೆ ಗುರುತು ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಶಾಲಾ ಶಿಕ್ಷಣ ಇಲಾಖೆ (ಪಪೂ)ಯ ಬೆಂಗಳೂರಿನ ಅಧಿಕಾರಿ ಗುಬ್ಬಿಗೂಡ ರಮೇಶ ಮಾತನಾಡಿದರು. ಖಾಸ್ಗತೇಶ್ವರ ಮಠದ ಉಸ್ತುವಾರಿ ವೇ.ಮುರುಘೇಶ ವಿರಕ್ತಮಠ ಸಾನ್ನಿಧ್ಯ ವಹಿಸಿದ್ದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಎಸ್.ಪಾಟೀಲ (ಯಾಳಗಿ) ಕ್ರೀಡಾ ಜ್ಯೋತಿ ಸ್ವೀಕರಿಸಿದರು.
ತಾಳಿಕೋಟೆಯಲ್ಲಿ ವಾಲಿಬಾಲ್ ಕ್ರೀಡೆ ಬೆಳೆಸಿದ ದಿ.ಡಿ.ವಿ.ಪಾಟೀಲ, ದಿ.ಬಸವರಾಜ ಗದಗ, ದಿ.ಯಶವಂತ ಢವಳಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.
ಕಾರ್ಯಕ್ರಮಕ್ಕೂ ಮೊದಲು ಕ್ರೀಡಾಪಟುಗಳಿಂದ ಪ್ರಭಾತಪೇರಿ ನಡೆಸಲಾಯಿತು.
3 ದಿನದ ವಾಲಿಬಾಲ್ ಕ್ರೀಡಾಕೂಟದಲ್ಲಿ ಭಾಗಿಯಾಗುವ ಎಲ್ಲರಿಗೂ ಊಟದ ವ್ಯವಸ್ಥೆ ಕಲ್ಪಿಸಿದ ಜೆಎಸ್‌ಜಿ ಫೌಂಡೇಷನ್ ಕಾರ್ಯದರ್ಶಿ ಶ್ರೀಕಾಂತ ಪತ್ತಾರ, ಬಸನಗೌಡ ಪಾಟೀಲ ಅವರನ್ನು ಸನ್ಮಾನಿಸಲಾಯಿತು.
ಎಸ್.ಎಸ್.ವಿದ್ಯಾಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಪಾಟೀಲ, ಕಾರ್ಯದರ್ಶಿ ಸಚೀನ ಪಾಟೀಲ, ಆಡಳಿತಾಧಿಕಾರಿ ಕಿರಣ ಪಾಟೀಲ, ಬಾಪುಗೌಡ ಪಾಟೀಲ (ಚಬನೂರ), ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ (ಕೂಚಬಾಳ), ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಸನಗೌಡ ಮಾಡಗಿ, ನಿವೃತ್ತ ಎಸ್‌ಪಿ ಎಸ್.ಬಿ.ಕಟ್ಟಿಮನಿ, ಕಾಶಿಮಪಟೇಲ ಮೂಕಿಹಾಳ, ಪ್ರಭುಗೌಡ ಮದರಕಲ್ಲ, ಡಿಡಿಪಿಒ ಡಾ.ಚಂದ್ರಶೇಖರ ಹೊಸಮನಿ, ಅಶೋಕ ಕುಮಾರ, ಎಸ್.ಎಸ್.ಡೌರಿ, ಮಧುಸುದನ ಮಾಗಿ, ರಮೇಶ ದಡ್ಡಿ, ಶರಣು ಬೆಂಗಳೂರ, ಎಂ.ಡಿ.ಹಬ್ಬಿ, ಶಾಂತೇಶ ದುರ್ಗಿ, ಎ.ಎಸ್.ಪಾಟೀಲ, ಎಂ.ಬಿ.ಹೂಗಾರ, ಎಸ್.ಆರ್.ಮುತ್ತಗಿ, ನಿಂಗನಗೌಡ ಬಾವೂರ, ಕೆ.ಆರ್.ಉಪ್ಪಾರ, ಕೆ.ಜಿ.ಲಮಾಣೆ, ಶಿವನಗೌಡ ಬಿರಾದಾರ, ಪ್ರಕಾಶ ಗೊಂಗಡಿ, ಆರ್.ಎಲ್.ಕೊಪ್ಪದ, ಅಶೋಕಗೌಡ ಬಿರಾದಾರ, ಬಿ.ಎನ್.ಕುಳಗೇರಿ, ಹಣಮಂತರಾಯ ಬಾಗೇವಾಡಿ, ಸಿದ್ದನಗೌಡ ಪಾಟೀಲ, ವಿ.ಸಿ.ಹಿರೇಮಠ, ಬ್ರಿಲಿಯಂಟ್ ಶಾಲಾ ಅಧ್ಯಕ್ಷ ನಾನಾಗೌಡ ಪಾಟೀಲ, ಘನಮಠೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಎಂ.ಸಜ್ಜನ, ಪ್ರಾಚಾರ್ಯೆ ಎಂ.ಎಸ್.ಬಿರಾದಾರ, ದೈಹಿಕ ಉಪನ್ಯಾಸಕ ಎಸ್.ಬಿ.ಮಂಗ್ಯಾಳ ಪ್ರೌಢಶಾಲೆ ದೈಹಿಕ ಶಿಕ್ಷಕ ಎಂ.ಎಸ್.ರಾಯಗೊಂಡ ಇತರರಿದ್ದರು.
ಸಂತೋಷ ಜಾಮಗೊಂಡಿ ಸ್ವಾಗತಿಸಿದರು. ಶಿಕ್ಷಕ ಬಿ.ಐ.ಹಿರೇಹೊಳಿ, ಎ.ಬಿ.ಇರಾಜ ನಿರೂಪಿಸಿದರು. ಸಾಹೇಬಗೌಡ ಬಿರಾದಾರ ವಂದಿಸಿದರು.