ಸಮಾಜ್ಯ ಕಲ್ಯಾಣ ಇಲಾಖೆಯಿಂದ ನೆರವು

ತಿ.ನರಸೀಪುರ: ಸಮಾಜ ಕಲ್ಯಾಣ ಇಲಾಖೆಯಿಂದ ವಾಲ್ಮೀಕಿ ಶಿಕ್ಷಣ ಸಂಸ್ಥೆಗೆ ಅಗತ್ಯ ಸಹಕಾರ ದೊರಕಿಸಿಕೊಡುವುದಾಗಿ ಸಂಸದ ಆರ್.ಧ್ರುವನಾರಾಯಣ್ ಭರವಸೆ ನೀಡಿದರು.
ಪಟ್ಟಣದ ಮಹರ್ಷಿ ವಾಲ್ಮೀಕಿ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ 11ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ವಾಲ್ಮೀಕಿ ಶಿಕ್ಷಣ ಸಂಸ್ಥೆಯವರು ಹೆಚ್ಚಿನ ಅನುದಾನಕ್ಕೆ ಮನವಿ ಮಾಡಿದ್ದಾರೆ. ನನಗೆ ಪರಿಚಿತ ರಾಜ್ಯಸಭಾ ಸದಸ್ಯರು ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ಮನವಿ ಮಾಡಿ ಅಗತ್ಯ ಅನುದಾನ ಕೊಡಿಸುವುದಾಗಿ ಹಾಗೂ ಪ್ರಿಯಾಂಕ ಖರ್ಗೆಯವರು ಸಚಿವರಾಗಿರುವುದರಿಂದ ಅವರ ಸಹಕಾರದಿಂದ ಸರ್ಕಾರದಿಂದ ಆರ್ಥಿಕ ನೆರವು ಕೊಡಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎಂ.ಅಶ್ವಿನ್‌ಕುಮಾರ್ ಮಾತನಾಡಿ, ಮಕ್ಕಳ ಶೈಕ್ಷಣಿಕ ಪ್ರಗತಿಯತ್ತ ಪಾಲಕರು ಗಮನ ಹರಿಸಬೇಕು ಎಂದು ತಿಳಿಸಿದರು.
ವರುಣಾ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಶಾಸಕರ ನಿಧಿಯಿಂದ ಅನುದಾನ ಕೊಡುವ ಸಾಧ್ಯತೆ ಇದ್ದಲ್ಲಿ ಖಂಡಿತ ಅಗತ್ಯ ನೆರವು ಕೊಡುವ ಭರವಸೆ ನೀಡಿದರು.
ಜಿಪಂ ಸದಸ್ಯ ಟಿ.ಎಚ್.ಮಂಜುನಾಥ್, ವಾಲ್ಮೀಕಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹೊನ್ನನಾಯಕ, ಗೌರವಾಧ್ಯಕ್ಷ ಮಹದೇವಯ್ಯ, ಕಾರ್ಯದರ್ಶಿ ಆಲಗೂಡು ನಾಗರಾಜು, ಖಜಾಂಚಿ ಪಿ.ಶಶಿಧರ್ ನಾಯಕರ ಸಂಘದ ಅಧ್ಯಕ್ಷ ಚಿನ್ನಸ್ವಾಮಿ, ಕಾರ್ಯಾಧ್ಯಕ್ಷ ಎಂ.ಡಿ.ಬಸವರಾಜು, ಮುಖ್ಯ ಶಿಕ್ಷಕಿ ಮಂಜುಳಾ, ಸೌಮ್ಯ, ಪುಷ್ಪಾ, ರಂಗರಾಜಪುರ ಸಿದ್ದರಾಜು, ಮರಡಿಪುರಗೋಪಾಲ್, ನಂಜಯ್ಯ, ಸಿಜಿಬಿ ಮಹದೇವಯ್ಯ, ಮೇಗಡಹಳ್ಳಿ ರಾಜು, ರಮೇಶ್ ಮುದ್ದೇಗೌಡ ಇದ್ದರು.