ಪತ್ನಿ ಜನನಾಂಗಕ್ಕೆ ಬೈಕ್​ ಹ್ಯಾಂಡಲ್ ನೂಕಿದ್ದ ಪತಿ: 2 ವರ್ಷದ ನಂತರ ಸಂತ್ರಸ್ತೆ ಬಿಚ್ಚಿಟ್ಟ ನೋವಿನ ಕತೆ ​

ಇಂಧೋರ್​: ಮಧ್ಯಪ್ರದೇಶದ ಇಂಧೋರ್​ನಲ್ಲಿನ ವೈದ್ಯರೊಬ್ಬರು ಮಹಿಳೆಯೊಬ್ಬರ ಗರ್ಭಾಶಯದಿಂದ ಬೈಕ್​ ಹ್ಯಾಂಡಲ್​ನ 6 ಇಂಚಿನ ಪ್ಯಾಸ್ಟಿಕ್​ ತುಣಕನ್ನು ಹೊರತೆಗೆದಿರುವ ಘಟನೆ ನಿನ್ನೆ(ಮಂಗಳವಾರ) ನಡೆದಿದ್ದು, ಎರಡು ವರ್ಷದ ಹಿಂದೆ ಮಹಿಳೆಯ ಪತಿ ಬಲವಂತವಾಗಿ ಪ್ಲ್ಯಾಸ್ಟಿಕ್​ ತುಣುಕನ್ನು ಆಕೆಯ ಜನನಾಂಗಕ್ಕೆ ನೂಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

36 ವರ್ಷದ ಬುಡುಕಟ್ಟು ಜನಾಂಗದ ಸಂತ್ರಸ್ತೆಯ ದೂರಿನ ಪ್ರಕಾರ ಎರಡು ವರ್ಷದ ಹಿಂದೆ ತನ್ನ ಪತಿ ಎಸಗಿದ ವಿಕೃತ ಕೃತ್ಯದಿಂದ ಸಾಕಷ್ಟು ನೋವನ್ನು ಅನುಭವಿಸಿರುವುದಾಗಿ ತಿಳಿಸಿದ್ದು, ದೂರಿನ ಆಧಾರದ ಮೇಲೆ ಆಕೆಯ ಪತಿಯನ್ನು ಬಂಧಿಸಲಾಗಿದೆ.

ಈ ಬಗ್ಗೆ ಚಂದನ್​ ನಗರ ಪೊಲೀಸ್​ ಠಾಣಾ ಅಧಿಕಾರಿ ರಾಹುಲ್​ ಶರ್ಮಾ ಅವರು ಮಾತನಾಡಿ, ಧಾರ್​ ಜಿಲ್ಲೆಯ ಸಂತ್ರಸ್ತೆ ಮೂರು ಮಕ್ಕಳ ತಾಯಿಯಾಗಿದ್ದು, 15 ವರ್ಷದ ಹಿಂದೆ ಆರೋಪಿಯ ಜತೆ ವಿವಾಹವಾಗಿದ್ದಳು. ಎರಡು ವರ್ಷದ ಹಿಂದೆ ಮಕ್ಕಳ ವಿಚಾರವಾಗಿ ದಂಪತಿ ನಡುವೆ ಗಲಾಟೆ ಉಂಟಾಗಿ, ಆರೋಪಿಯು ತನ್ನ ಪತ್ನಿಯನ್ನು ಥಳಿಸಿ, ಬೈಕ್​​ ಹ್ಯಾಂಡಲ್​ ತುಣುಕೊಂದನ್ನು ಆಕೆಯ ಜನನಾಂಗಕ್ಕೆ ನೂಕಿದ್ದ. ಮಕ್ಕಳ ಭವಿಷ್ಯದ ದೃಷ್ಟಿ ಹಾಗೂ ಸಮಾಜದಲ್ಲಿ ನನ್ನನ್ನು ಕೀಳಾಗಿ ಕಾಣುವುದರೊಂದಿಗೆ ನನ್ನನ್ನು ಅವಮಾನಿಸಬಹುದೆಂದು ಹೆದರಿ ಪತಿಯ ನೀಚ ಕೃತ್ಯವನ್ನು ಆಕೆ ಯಾರಿಗೂ ಹೇಳದೆ ಮುಚ್ಚಿಟ್ಟುಕೊಂಡಿದ್ದಳು ಎಂದು ತಿಳಿಸಿದ್ದಾರೆ.

ಆರೋಪಿ ಪ್ರಕಾಶ್​ ಭಿಲ್​ ಅಲಿಯಾಸ್​ ರಾಮಾ(35) ಮತ್ತೊಬ್ಬ ಮಹಿಳೆಯೊಂದಿಗೂ ಅಕ್ರಮ ಸಂಬಂಧವನ್ನು ಹೊಂದಿದ್ದ ಎನ್ನಲಾಗಿದ್ದು, ಅದನ್ನು ಪ್ರಶ್ನಿಸಿದ್ದಕ್ಕೆ ಈ ರೀತಿ ಕೃತ್ಯ ಎಸಗಿದ್ದಾನೆ ಎಂದು ಪತ್ನಿ ತಿಳಿಸಿದ್ದಲ್ಲದೆ, ಯಾರಿಗೂ ಈ ಗುಟ್ಟನ್ನು ಹೇಳಬಾರದು ಎಂದು ಅಂದುಕೊಂಡಿದ್ದ ಸಂತ್ರಸ್ತೆ ಕೊನೆಗೆ ನೋವು ತಾಳಲಾರದ ಬಹಿರಂಗಪಡಿಸಿದ್ದಾರೆ ಎಂದು ಶರ್ಮಾ ಮಾಹಿತಿ ನೀಡಿದ್ದಾರೆ.

ಕೆಲವು ತಿಂಗಳ ಹಿಂದೆ ನೋವನ್ನು ತಾಳಲಾರದೆ ಖಾಸಗಿ ಆಸ್ಪತ್ರಗೆ ಹೋದ ಸಂತ್ರಸ್ತೆಯನ್ನು ತಪಾಸಣೆಗೆ ಒಳಪಡಿಸಿದ ಬಳಿಕ ತಕ್ಷಣವೇ ಆಪರೇಷನ್​ ಆಗಬೇಕಿದೆ 1 ಲಕ್ಷ ರೂ. ಅನ್ನು ಪಾವತಿ ಮಾಡಿ ಎಂದು ಹೇಳಿದರಂತೆ. ಬಳಿಕ ಘಟನೆ ತಿಳಿದು ಪೊಲೀಸರಿಗೆ ವೈದ್ಯರು ಮಾಹಿತಿ ನೀಡಲು, ದೂರು ದಾಖಲಿಸಿಕೊಂಡು ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ಹಚ್ಚಿನ ಚಿಕಿತ್ಸೆಗೆ ದಾಖಲಿಸಿದ್ದರು.

ಸಂತ್ರಸ್ತೆಯ ಆರೋಗ್ಯ ಸ್ಥಿತಿ ಬಗ್ಗೆ ಮಾತನಾಡಿರುವ ವೈದ್ಯರು ಆರೋಪಿ ಪತಿಯ ಕೃತ್ಯದಿಂದ ಆಕೆಯ ಗರ್ಭಾಶಯ ಹಾನಿಯಾಗಿದೆ. ಸಣ್ಣ ಕರುಳು ಹಾಗೂ ಮೂತ್ರನಾಳಕ್ಕೆ ತೊಂದರೆಯಾಗಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)