12 ದಿನದ ಹಸುಗೂಸು ಸೇರಿ ಒಂದೇ ಕುಟುಂಬದ 4 ಜನರ ಮೃತದೇಹ ಪತ್ತೆ

ರೈಸೇನ್‌(ಮಧ್ಯಪ್ರದೇಶ): 12 ದಿನದ ಹಸುಗೂಸು ಸೇರಿದಂತೆ ಒಂದೇ ಕುಟುಂಬದ ನಾಲ್ವರ ಮೃತದೇಹವು ಅನುಮಾನಾಸ್ಪದವಾಗಿ ಪತ್ತೆಯಾಗಿದೆ.

ರೈಸೇನ್‌ ಜಿಲ್ಲೆಯ ಮಂಡಿದೀಪ್‌ ಟೌನ್‌ನ ನಿವಾಸದಲ್ಲಿ ಮಾಲೀಕ ಸಂಜು ಭೂರಿಯ(25) ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಓರ್ವ ಮಹಿಳೆ, ಆಕೆಯ ಮಗ 11 ವರ್ಷದ ಮಗ, 20 ವರ್ಷದ ಮಗಳು ಸೇರಿ 12 ದಿನದ ಮೊಮ್ಮಗುವಿನ ಮೃತದೇಹಗಳು ದೊರಕಿವೆ.

ಸದ್ಯ ಗಂಭೀರ ಸ್ಥಿತಿಯಲ್ಲಿದ್ದವನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಜೀವಾಪಾಯದಿಂದ ಪಾರಾಗಿದ್ದಾನೆ. ಆತನ ಪತ್ನಿ ಮತ್ತು 12 ದಿನದ ಮಗಳು, 11 ವರ್ಷದ ಆತನ ಹೆಂಡತಿಯ ತಮ್ಮ ಮತ್ತು ಅತ್ತೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತನಿಖೆ ಕೈಗೊಂಡಿರುವ ಪೊಲೀಸರು ಘಟನೆಗೆ ಕಾರಣವನ್ನು ಹುಡುಕುತ್ತಿದ್ದಾರೆ. (ಏಜೆನ್ಸೀಸ್)